ಪ್ರಯಾಣಿಕರಲ್ಲಿ ಕೊರೋನ ದೃಢ: ಏರ್ ಇಂಡಿಯಾ ವಿಮಾನಕ್ಕೆ ಐದನೇ ಬಾರಿ ನಿಷೇಧ ಹೇರಿದ ಹಾಂಕಾಂಗ್

0
387

ಸನ್ಮಾರ್ಗ ವಾರ್ತೆ

ಹಾಂಕಾಂಗ್: ಪ್ರಯಾಣಿಕರಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟ ಕಾರಣ ದೆಹಲಿಯಿಂದ ಬರುವ ಏರ್ ಇಂಡಿಯಾ ವಿಮಾನಗಳ ಮೇಲೆ ಡಿಸೆಂಬರ್ 3ರ ವರೆಗೆ ಹಾಂಕಾಂಗ್ ಸರಕಾರವು ಮತ್ತೆ ನಿಷೇಧ ಹೇರಿದೆ. ಈ ಮೂಲಕ 5 ನೇ ಬಾರಿಗೆ ಹಾಂಕಾಂಗ್ ನಿಷೇಧ ಹೇರಿದೆ.

ವಾರದ ಆರಂಭದಲ್ಲಿ ದೆಹಲಿಯಿಂದ ಬಂದಿದ್ದ ಕೆಲವು ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಭಾರತದಿಂದ ಬರುವ ಪ್ರಯಾಣಿಕರು ಪ್ರಯಾಣಕ್ಕೆ 72 ಗಂಟೆಗಳ ಮೊದಲು ಪರೀಕ್ಷೆ ನಡೆಸಿ ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರ ಹೊಂದಿರಬೇಕು ಎಂದು ಹಾಂಕಾಂಗ್‌ ಸರ್ಕಾರ ಜುಲೈನಲ್ಲಿ ನಿಯಮ ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹಾಂಕಾಂಗ್‌ ಸರಕಾರವು ಮುಂಜಾಗ್ರತಾ ಕ್ರಮವಾಗಿ ಹಾಂಕಾಂಗ್ ಗೆ ಬಂದ ನಂತರವು ಕೂಡಾ ಕಡ್ಡಾಯ ಕೋವಿಡ್-19 ಪರೀಕ್ಷೆಯನ್ನು ನಡೆಸುತ್ತಿದೆ.
ಭಾರತದಿಂದ ಪ್ರಯಾಣಿಸುತ್ತಿದ್ದ ಹಲವಾರು ಪ್ರಯಾಣಿಕರಲ್ಲಿ‌ ಕೋರೋನಾ ದೃಢಪಟಿದ್ದರಿಂದ ಈಗಾಗಲೇ ಹಾಂಕಾಂಗ್ ನಾಲ್ಕು ಬಾರಿ ಏರ್ ಇಂಡಿಯಾಕ್ಕೆ ನಿಷೇಧ ಹೇರಿತ್ತು.