ತಬ್ಲೀಗ್ ಸದಸ್ಯರಿಗೆ ಇದುವೇ ಶಿಕ್ಷೆಯಾಯಿತು: ವಿಚಾರಣೆ ತ್ವರಿತಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ

0
548

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.3: ಕೊರೋನ ಹರಡಿದ್ದಾರೆ ಎಂದು ಆರೋಪಿಸಿ ಜೈಲಿಗಟ್ಟಲ್ಪಟ್ಟಿದ್ದ ವಿದೇಶಿ ತಬ್ಲೀಗ್ ಜಮಾಅತ್ ಕಾರ್ಯಕರ್ತರ ಕುರಿತಾದ ವಿಚಾರಣೆ ತ್ವರಿತವಾಗಿ ನಡೆಸಲು ಸುಪ್ರೀಂ ಕೋರ್ಟು ವಿಚಾರಣಾ ಕೋರ್ಟಿಗೆ ಸೂಚನೆ ನೀಡಿದೆ.

ವಿದೇಶಗಳಿಂದ ನಿಝಾಮುದ್ದೀನಿನ ತಬ್ಲೀಗ್ ಕೇಂದ್ರಕ್ಕೆ ಬಂದದ್ದಕ್ಕೆ ಕಪ್ಪು ಪಟ್ಟಿಯಲ್ಲಿ ಸೇರಿಸಿದವರ ವಿರುದ್ಧ ತಬ್ಲೀಗ್ ಕಾರ್ಯಕರ್ತರು ಸಲ್ಲಿಸಿದ ಅರ್ಜಿಯಲ್ಲಿ ಸುಪ್ರೀಂ ಕೋರ್ಟು ಸೂಚನೆ ನೀಡಿದೆ. ಪ್ರಕರಣದ ವಿಚಾರಣೆಯನ್ನು ನ.20ಕ್ಕೆ ಸುಪ್ರೀಂ ಕೋರ್ಟು ಮುಂದೂಡಿತು.

ಇದುವೇ ಅವರಿಗೆ ಶಿಕ್ಷೆಯಾಗಿದೆ. ಆರೋಪ ಮುಕ್ತಗೊಳಿಸಿದ ಬಳಿಕವೂ ಅವರನ್ನು ತಮ್ಮೂರಿಗೆ ಹೋಗಲು ಬಿಡುತ್ತಿಲ್ಲ ಎಂದು ಜಸ್ಟಿಸ್ ಎ.ಎಂ.ಕಾನ್‍ವಿಲ್ಕರ್ ಅಧ್ಯಕ್ಷತೆಯ ಪೀಠ ಬೆಟ್ಟು ಮಾಡಿತು. ವಿಚಾರಣೆ ತ್ವರಿತಗೊಳಿಸಲು ಪಾಟ್ನ ಹೈಕೋರ್ಟಿಯನ್ನು ಸಂಪರ್ಕಿಸುವಂತೆ ಬಿಹಾರ ಸರಕಾರಕ್ಕೆ ಸುಪ್ರೀಂಕೋರ್ಟು ಈ ಹಿಂದೆಯೇ ಸೂಚನೆ ನೀಡಿತ್ತು.