ನೀವು ಎಷ್ಟು ವರ್ಷ ಬದುಕುತ್ತೀರಿ?

0
453

✍️ ಸಮೀರ್ ಖಾದಿ ವಡಕರ

ನಿಮ್ಮ ವಯಸ್ಸು ಎಷ್ಟು? ಈ ಪ್ರಶ್ನೆಗೆ ನಾವು ಖಚಿತವಾದ ಉತ್ತರವನ್ನು ಹೊಂದಿರುತ್ತೇವೆ. ನೀವು ಎಷ್ಟು ವರ್ಷ ಬದುಕುತ್ತೀರಿ? ಆದರೆ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ. ಏಕೆಂದರೆ ಮನುಷ್ಯನ ಜೀವನವು ಅನೇಕ ಅನಿಶ್ಚಿತತೆಗಳ ನಡುವೆ ಮತ್ತು ವಿವಿಧ ದೌರ್ಬಲ್ಯಗಳ ಸಂಯೋಜನೆಯಾಗಿದೆ.

ಜನನ, ಮರಣ, ಅನಾರೋಗ್ಯ ಮುಂತಾದವುಗಳಿಂದ ನಾವು ಅನೇಕ ರೀತಿಯಲ್ಲಿ ಅಸಹಾಯಕರಾಗಿದ್ದೇವೆ. ಆದರೆ ನಮ್ಮ ಜೀವನದಲ್ಲಿ ಪರಾಶಕ್ತಿಯ ಉಪಸ್ಥಿತಿ ಇದೆ, ಅದು ಈ ಎಲ್ಲಾ ಮಿತಿಗಳನ್ನು ಮೀರಿ ನಮ್ಮನ್ನು ಬಲಗೊಳಿಸುತ್ತದೆ ಮತ್ತು ಎಲ್ಲಾ ಅಸಹಾಯಕತೆಯನ್ನು ಜಯಿಸಲು ಸಹಾಯ ಮಾಡುತ್ತದೆ. ದೇವನು ಅಖಿಲ ವಿಶ್ವದ ಅಧಿಪತಿ! ಎಲ್ಲಾ ಸಾಮರ್ಥ್ಯಗಳು, ಗುಣಗಳು ಮತ್ತು ಗುಣವಿಶೇಷಗಳ ಅಜೇಯ ಮಾಲೀಕ!

ಈ ಅಲ್ಲಾಹನ ಮುಂದೆ ಈ ಮನುಷ್ಯರು ಯಾರು? ಈ ಮಹಾನ್ ವಿಶ್ವದಲ್ಲಿ ಮನುಷ್ಯನ ಸ್ಥಾನ ಮತ್ತು ಸ್ಥಿತಿ ಏನು? ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ನಾವು ಆರಾಧನೆ, ಪ್ರಾರ್ಥನೆ ಪಠಣಗಳ ಮೂಲಕ ಹುಡುಕುತ್ತೇವೆ. ಅವುಗಳಲ್ಲಿ ಮುಖ್ಯವಾದುದು ಆರಾಧನೆಗಳಿಂದ ನಾವು ಪಡೆಯುವ ಆಧ್ಯಾತ್ಮಿಕ ಅನುಭವಗಳು.

ಪ್ರಾರ್ಥನೆ, ಝಕಾತ್, ಉಪವಾಸ, ಹಜ್ ಮತ್ತು ಅನೇಕ ಕೀರ್ತನೆಗಳಂತಹ ಆರಾಧನಾ ಕ್ರಿಯೆಗಳ ಮೂಲಕ ನಿಜವಾದ ನಂಬಿಕೆಯ ಘೋಷಣೆಯ ಮೂಲಕ ನಮ್ಮೊಳಗೆ ಒಂದು ಚಿಂತನೆ ಮತ್ತು ಪ್ರಜ್ಞೆಯು ಜಾಗೃತಗೊಳ್ಳುತ್ತದೆ. ಅಲ್ಲಾಹನ ಶಕ್ತಿ ಮತ್ತು ಅಜೇಯತೆಯು ನಮ್ಮ ಮನಸ್ಸು ಮತ್ತು ಮೆದುಳುಗಳಲ್ಲಿ ಬೇರೂರಿರ ಬೇಕು. ನಮ್ಮ ದೌರ್ಬಲ್ಯಗಳ ಅರಿವುಗಳು ನಮ್ಮ ಹೃದಯದಲ್ಲಿ ಬಡಿಯುತ್ತಿರಬೇಕು. ಆಗ ನಾವು ಭೌತಿಕತೆಯ ಹೊರ ಪದರಗಳಿಗೆ ಮೋಹಗೊಳ್ಳುವುದಿಲ್ಲ, ಆದರೆ ಅಹಂಕಾರವಿಲ್ಲದ ಜೀವನದ ಪಾವಿತ್ರ್ಯತೆಗೆ ಏರುತ್ತೇವೆ.

ಈ ಭೂಮಿಯಲ್ಲಿರುವ ಪ್ರತಿಯೊಂದು ನಾಶವಾಗಲಿದೆ ಮತ್ತು ನಿನ್ನ ಪ್ರಭುವಿನ ತೇಜೋಮಯ ಹಾಗೂ ಔದಾರ್ಯಪೂರ್ಣ ಅಸ್ತಿತ್ವ ಮಾತ್ರ ಉಳಿಯಲಿದೆ.

ಯಕ್ಷಗಳೇ ಮತ್ತು ಮಾನವರೇ, ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಚಮತ್ಕಾರಗಳನ್ನು ಸುಳ್ಳಾಗಿಸುವಿರಿ ಭೂಮಿ-ಆಕಾಶಗಳಲ್ಲಿ ಇರುವವರೆಲ್ಲರೂ ತಮ್ಮ ಬೇಡಿಕೆಗಳನ್ನು ಅವನಿಂದಲೇ ಬೇಡುತ್ತಾರೆ. ಪ್ರತಿದಿನವೂ ಅವನು ವಿನೂತನ ವೈಭವದಲ್ಲಿರುತ್ತಾನೆ. (ಅರ್ರಹ್ಮಾನ್ 26 29)

ಈ ಸೂಕ್ತದಲ್ಲಿ ಅಡಕವಾಗಿರುವ ವಿಷಯವೆಂದರೆ, ಶಾಶ್ವತತೆಯು ಅಲ್ಲಾಹನ ಗುಣಲಕ್ಷಣವಾಗಿದೆ, ಈ ಸೂಕ್ತ ವನ್ನು ನಾವು ಮತ್ತೆ ಮತ್ತೆ ಓದಬೇಕು ಮತ್ತು ಯೋಚಿಸಬೇಕು ಮತ್ತು ನಮ್ಮ ಸುಪ್ತ ಮನಸ್ಸಿನಲ್ಲಿ ಆಳವಾಗಿ ಸ್ಥಾಪಿಸಬೇಕು. ನಶ್ವರತೆಯೇ ಮನುಷ್ಯನ ಸ್ವಭಾವ. ಇಸ್ಲಾಂ ಎಂಬುದು ಅಲ್ಲಾಹನಿಗೆ ಶರಣಾಗತಿಯ ಹೆಸರಾಗಿದೆ ಮತ್ತು ಅಲ್ಲಾಹನಲ್ಲದ ಎಲ್ಲವೂ ನಾಶವಾಗುತ್ತದೆ' ಎಂಬ ಮಾತಿನ ಅರ್ಥವು ಇದೇ ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಈ ವಿಶ್ವದಲ್ಲಿ, ಅಲ್ಲಾಹನ ಹೊರತು ಎಲ್ಲವೂ ನಾಶವಾಗುತ್ತವೆ. ಅಲ್ಲಾಹನು ಎಲ್ಲಾ ಸಾಮರ್ಥ್ಯಗಳು ಮತ್ತು ಗುಣಲಕ್ಷಣಗಳೊಂದಿಗೆ ಶಾಶ್ವತ.

ಆದ್ದರಿಂದ, ಒಂದೇ ಸೂಕ್ತದಲ್ಲಿ ಈ ಮೊದಲು ಮತ್ತು ನಂತರ ಎರಡು ವಿಷಯಗಳನ್ನು ಹೇಳಲಾಗಿದೆ ಎಂಬುದನ್ನು ಗಮನಿಸುವುದು ಮುಖ್ಯ, ಅಂದರೆ, ಅಲ್ಲಾಹನೊಂದಿಗೆ ಬೇರೆ ಯಾವುದೇ ದೇವರನ್ನು ಪ್ರಾರ್ಥಿಸಬೇಡಿ ಮತ್ತು ತೀರ್ಪು ನೀಡುವ ಅಧಿಕಾರ ಅವನಿಗಿದೆ. ಇದರರ್ಥ ಅಲ್ಲಾಹನ ಆಜ್ಞೆಗಳಿಗೆ ವಿಧೇಯರಾಗುವುದು ಮತ್ತು ಅವನಲ್ಲಿ ಮಾತ್ರ ಪ್ರಾರ್ಥಿಸುವುದು, ಈ ವಿಶ್ವದಲ್ಲಿ ಅಲ್ಲಾಹನ ಶಾಶ್ವತತೆ ಮತ್ತು ನಮ್ಮ ಜೀವನದ ಕ್ಷಣಿಕತೆಯನ್ನು ನೆನಪಿಸಿಕೊಳ್ಳುವುದು. ಓ ಮನುಷ್ಯನೇ, ಜಗತ್ತಿಗೆ ಅಂಟಿಕೊಳ್ಳಬೇಡ, ದುರಾಸೆ ಬೇಡ, ಭೌತಿಕ ಸುಖಗಳ ಹಿಂದೆ ಓಡಬೇಡ, ಅವೆಲ್ಲವೂ ನಾಶವಾಗುತ್ತವೆ.

ಬದಲಾಗಿ, ಅಲ್ಲಾಹನ ಸಾಮಿಪ್ಯ ಗಳಿಸಿ ಅವನನ್ನು ಹುಡುಕು, ಅವನ ಬಳಿಗೆ ಓಡಿ, ಅವನ ಚಿತ್ತವನ್ನು ಪಡೆಯಲು ಆಜ್ಞಾಪಿಸಲಾದ ಎಲ್ಲವನ್ನೂ ಮಾಡು, ಅವನು ಅಜೇಯನು... ಇಲ್ಲಿ ಉಲ್ಲೇಖಿಸಿದ ಮತ್ತು ಇದೇ ರೀತಿಯ ಕುರ್‌ಆನ್ ವಚನಗಳು ನಮ್ಮಲ್ಲಿ ಜಾಗೃತಗೊಳ್ಳಬೇಕು. ಕುಲ್ಲು ಮನ್ ಅಲೈಹಾ ಫಾನ್ನ್, ವಾ ಯಬ್ಖಾ ವಜ್ಹು ರಬ್ಬಿಕ ದುಲ್ ಜಲಾಲಿ ವಲ್ ಇಕ್ರಾಮ್’ (ರ‍್ರಹ್ಮಾನ್ 26,27) ಮತ್ತು ಕುಲ್ಲು ಶೈಯಿನ್ ಹಾಲಿಕುನ್ ಇಲ್ಲಾ ವಜ್ಹಹು (ಅಲ್ ಕಸಸ್ 88) ಪದಗಳನ್ನು ಪುನರಾವರ್ತಿಸಿ ಮತ್ತು ಉಚ್ಚರಿಸಿ.

ಪ್ರತಿ ದಿನ ಅನೇಕ ಬಾರಿ ನಾವು ಏನನ್ನಾದರೂ ಹೇಳಿದರೆ ಅದು ನಮ್ಮ ಜೀವನವನ್ನು ಬದಲಾಯಿಸುತ್ತದೆ ಮತ್ತು ಅದೇ ನಮ್ಮ ಯೋಚನೆ ಯಾಗುತ್ತದೆ ಮತ್ತು ನಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುತ್ತದೆ.

ಪ್ರಪಂಚದಾದ್ಯಂತ ಬೃಹತ್ ಕಂಪನಿ ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗೆ, ಎಲ್ಲವೂ ನಾಶವಾಗುತ್ತವೆ ಎಂಬ ಕಲ್ಪನೆಯನ್ನು ಹೊಂದಿರುವ ಕುರ್‌ಆನ್ ಸೂಕ್ತಗಳನ್ನು ಓದಿದಾಗ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಾನು ಶತಕೋಟಿ ಡಾಲರ್‌ಗಳ ಭೌತಿಕ ಆಸ್ತಿಗಳು, ಸಾವಿರಾರು ಅಂಗಡಿಗಳು, ಹತ್ತಾರು ಸಾವಿರ ಉದ್ಯೋಗಿಗಳು, ನಾನು ಸಹಿ ಮಾಡುವ ಚೆಕ್‌ಗಳು, ನನ್ನ ಖಾಸಗಿ ಜೆಟ್, ಹೆಸರು, ಪ್ರಶಸ್ತಿ ಹೀಗೆ ಎಲ್ಲವೂ ಇದೆ.

ಆದರೆ ಒಂದು ದಿನ ನನ್ನ ವ್ಯಾಪಾರ ಸಾಮ್ರಾಜ್ಯವು ಕುಸಿಯಬಹುದು. ಆಗ ಎಲ್ಲಾ ಹೋಗಬಹುದು, ಆಗ ನಾನು ಕೈ ಚೆಲ್ಲಿ ಅಸಹಾಯಕನಾಗಿ ಬಿಡಬಹುದು. ಆದರೆ ಆಗಲೂ ಅಲ್ಲಾಹ್ ಇರುತ್ತಾನೆ, ಅಲ್ಲಾಹ್ ಮಾತ್ರ ಚಿರಂಜೀವಿಯಾಗಿ ಉಳಿಯುತ್ತಾನೆ! ಆದ್ದರಿಂದ ನನಗೆ ಅಲ್ಲಾಹನು ಮಾತ್ರ ಇರುವುದು, ಅವನ ಮುಂದೆ ನಾನು ಹೋಗಬೇಕು ಮತ್ತು ಅವನ ಹೊರತು ನನಗೆ ಏನೂ ಇಲ್ಲ. ಹೀಗಿರುವಾಗ ನಾನು ಏಕೆ ಅಹಂಕಾರ ಪಡಬೇಕು?

ಹೀಗೆ ಪದೇ ಪದೇ ಯೋಚಿಸತೊಡಗಿದ ಒಬ್ಬ ವ್ಯಕ್ತಿಯಿಂದ ಬಂಡವಾಳಶಾಹಿಯ ದರ್ಪವು ಇಳಿದು ನಯ-ವಿನಯ ಮತ್ತು ಸಾತ್ವಿಕತೆ
ತಾನಾಗಿಯೇ ಮೂಡುವುದರಲ್ಲಿ ಸಂಶಯವಿಲ್ಲ. ಕೋಟಿಗಟ್ಟಲೆ ಹಣ ಕೈಯಲ್ಲಿದ್ದರೂ ಲೌಕಿಕ ಪ್ರೇಮದಿಂದ ದೂರವಾಗಿ ಅವರಲ್ಲಿ ಕೇವಲ ಅಲ್ಲಾಹನ ನೆನಪು ಮಾತ್ರ ಉಳಿದುಬಿಡುತ್ತದೆ. ಪ್ರ ಪಂಚದ ಪ್ರೀತಿಯನ್ನು ಮನಸ್ಸಿನಿಂದ ತೆಗೆದುಹಾಕಲಾಗುತ್ತದೆ. ಆಗ ಅವನು ತನ್ನ ಕೈಯಲ್ಲಿ ಅಪಾರವಾದ ಸಂಪತ್ತನ್ನು ಹೊಂದಿ ಮನಸ್ಸಿನಲ್ಲಿ ಇಲ್ಲದ ಸ್ಥಿತಿಗೆ ಏರುತ್ತಾನೆ. ಇದು ಸರಿಯಾದ ಆಧ್ಯಾತ್ಮಿಕ ಉನ್ನತಿಯ ಪರಿಸ್ಥಿತಿ ಗಳಲ್ಲಿ ಒಂದಾಗಿದೆ.

ಮನಸ್ಸಿನಲ್ಲಿ ಜಗತ್ತು ಅತ್ಯಲ್ಪ ಎಂಬ ದೃಢನಿಶ್ಚಯವು ಬಲವಾದ ಒಳನೋಟವನ್ನು ತುಂಬುವ ರಕ್ಷಾಕವಚವಾಗಿದೆ. ಆಗ ಅಲ್ಲಾಹನಿಗೆ ಸೇರದ ಮತ್ತು ಅಲ್ಲಾಹನ ತೃಪ್ತಿಗೆ ಕಾರಣವಾಗದ ಎಲ್ಲವನ್ನೂ ನಾವು ಜೀವನದಿಂದ ದೂರವಿಡಬಹುದು. ಪಿಶಾಚಿಯ ಎಲ್ಲಾ ಆಮಿಷಗಳನ್ನು ವಿರೋಧಿಸಬಹುದು.

ನೀವು ಯಾವಾಗ ಮತ್ತು ಹೇಗೆ ಸಾಯುತ್ತೀರಿ ಎಂದು ತಿಳಿದಿಲ್ಲದಿದ್ದರೆ ಏನಂತೆ, ನಾನು ಹೇಗೆ ಬದುಕುತ್ತೇನೆ ಮತ್ತು ಸಾವಿನ ನಂತರ ನಾನು ಏನನ್ನು ಪಡೆಯುತ್ತೇನೆ ಎಂಬುದು ಮುಖ್ಯವಲ್ಲವೇ?