✍️ ಮುಹಮ್ಮದ್ ಕುಂಞಿ
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ
ಅಲ್ಲಾಹನು ನಮಗೆ ಬಹಳಷ್ಟು ಅನುಗ್ರಹಗಳನ್ನು ಕರುಣಿಸಿದ್ದಾನೆ. ಆ ಅನುಗ್ರಹಗಳಲ್ಲಿ ನಮಗೆ ಮಾತನಾಡುವ ಸಾಮರ್ಥ್ಯವನ್ನು ನೀಡಿರುವುದು ಮಹತ್ತರ ವಾದುದು. ಪವಿತ್ರ ಕುರ್ಆನಿನಲ್ಲಿ ಈ ರೀತಿ ಹೇಳಲಾಗಿದೆ. “ರಹ್ಮಾನನು, (ಪರಮ ದಯಾಮಯನು) ಈ ಕುರ್ಆನನ್ನು ಕಲಿಸಿದನು. ಅವನೇ ಮಾನವರನ್ನು ಸೃಷ್ಟಿಸಿದನು ಮತ್ತು ಅವನಿಗೆ ಮಾತನಾಡಲು ಕಲಿಸಿದನು’ (ರ್ರಹ್ಮಾನ್; 1-4)
ಇದು ಅಲ್ಲಾಹನ ಕರುಣೆಯ ನಿದರ್ಶನವಾಗಿದೆ. ಎಲ್ಲಾ ಜೀವಿಗಳು ಪರಸ್ಪರ ಸಂವಹನ ನಡೆಸುತ್ತವೆ. ಉದಾಹರಣೆಗೆ ಕಾಗೆಯು ಅದಕ್ಕೆ ಅಪಾಯದ ಗೋಚರವಾದರೆ ಅದು ಕೂಗಿ ಇತರೆಲ್ಲ ಕಾಗೆಗಳನ್ನು ಒಟ್ಟು ಸೇರಿಸುತ್ತದೆ. ಆ ಶಬ್ದದಲ್ಲಿ ಕಾಗೆಗಳು ಅಪಾಯವನ್ನು ಗುರುತಿಸುತ್ತದೆ. ಹಾಗೆಯೇ ಒಂದೆಡೆ ಬಹಳಷ್ಟು ಆಹಾರವಿದ್ದರೆ ಶಬ್ದಗಳ ಮೂಲಕ ಪಕ್ಷಿಗಳು ಒಟ್ಟು ಸೇರಿಸುತ್ತವೆ. ಒಂಟಿಯಾಗಿ ಹೋಗುವ ಒಂದು ಜೇನ್ನೊಣವು ಅದಕ್ಕೆ ಬೇಕಾದ ಏನಾದರೊಂದು ವಸ್ತು ದೊರೆ ತರೆ ಅದು ಜೇನು ಗೂಡಿಗೆ ಒಂದು ಸಂದೇಶ ರವಾನಿಸುತ್ತದೆ. ಈ ಸಂದೇಶ ವನ್ನು ಸ್ವೀಕರಿಸಿ ಗುರುತಿಸಿರುವ ಜೇನ್ನೊಣಗಳು ಸಂದೇಶ ಕಳುಹಿಸಿದ ಜೇನ್ನೊಣವು ಎಷ್ಟೇ ದೂರದಲ್ಲಿದ್ದರೂ ಅದರತ್ತ ಸಾಗಿ ಅದಕ್ಕೆ ಬೇಕಾದ ಕೆಲಸಗಳನ್ನು ನಿರ್ವಹಿಸುತ್ತವೆ.
ಎಲ್ಲ ಜೀವಿಗಳ ನಡುವೆ ದೇವನು ಸಂವಹನಗಳನ್ನು ಸೃಷ್ಟಿಸಿದ್ದಾನೆ. ಆದರೆ ಇದಕ್ಕೆ ಸೀಮಿತವಾದ ಗುರಿ ಇದೆ. ಆದರೆ ಮನುಷ್ಯನು ಹಾಗಲ್ಲ. ಅತನಿಗೆ ಬುದ್ದಿ ವಿವೇಕ, ಅರಿವು, ಭಾವನೆ, ಆದರ್ಶವಿದೆ. ಆದ್ದರಿಂದ ಮನುಷ್ಯನಿಗೆ ವಿಶೇಷ ಸಾಮರ್ಥ್ಯ ನೀಡಿದ್ದಾನೆ. ತತ್ವ ಶಾಸ್ತ್ರಜ್ಞರು ಮನುಷ್ಯನನ್ನು ಮಾತನಾಡುವ ಜೀವಿಗಳು ಎಂದು ಕರೆಯುತ್ತಾರೆ. ನಾತಿಕ್ಅ ಥವಾ ನುತುಕ್ ಎಂದರೆ ಕೇವಲ ನಾಲಗೆಯ ಸಾಮರ್ಥ್ಯ ವಲ್ಲ. ನಿಮಗೆ ಅಲ್ಲಾಹನು ನೀಡಿರುವ ಮಾತು, ಜ್ಞಾನ, ಪ್ರತಿಭೆ, ಸಂಸ್ಕಾರ ಘನತೆಯ, ಗೌರವಗಳ ಎಲ್ಲಾ ಅನುಗ್ರಹಗಳ ಪ್ರತಿಫಲನವು ನಿಮ್ಮ ನಾಲಗೆಯ ಮೂಲಕ ಹೊರಗೆ ಬರುತ್ತದೆ. ಅಲ್ಲಾಹನು ನೀಡಿದ ಮಾತು ಎಂಬ ಅನುಗ್ರಹಗಳ ಬಗ್ಗೆ ಕುರ್ಅನ್ ಹದೀಸ್ಗಳಲ್ಲಿ ಬಹಳಷ್ಟು ಕಡೆ ಪ್ರಸ್ತಾಪಿಸಲಾಗಿದೆ.
ನಮ್ಮ ಪ್ರತೀ ಮಾತುಗಳನ್ನು ದಾಖಲಿಸುವ ಎರಡು ಮಲಾಯಿಕ್ಗಳನ್ನು ಅಲ್ಲಾಹನು ನೇಮಿಸಿದ್ದಾನೆ. ನಮ್ಮ ಪ್ರತಿಯೊಂದು ಮಾತುಗಳು ದಾಖಲಿಸಲ್ಪಡುತ್ತದೆ ಎಂಬ ಪ್ರಜ್ಞೆ ನಮ್ಮಲ್ಲಿರಬೇಕು. ನಮ್ಮ ಮಾತುಗಳಿಗೆ ಗುರಿ ಉದ್ದೇಶವಿರಬೇಕು. ಇವೆರಡೂ ಇಲ್ಲದ ವ್ಯರ್ಥ ಮಾತುಗಳನ್ನು ಆಡಲೇಬಾರದು ಎಂದು ಕುರ್ಆನ್ ಕಠಿಣ ಎಚ್ಚರಿಕೆಯನ್ನು ನೀಡಿದೆ.
ಮಾತು ಎಂಬ ಪ್ರಬಲ ಅಸ್ತ್ರವನ್ನು ಸ್ಪಷ್ಟವಾದ ಗುರಿಯೊಂದಿಗೆ ಬಳಸಬೇಕು. ಅಂದರೆ ದಾನ ಧರ್ಮಗಳಿಗೆ, ಪುಣ್ಯಕರ್ಮಗಳಿಗೆ ಪ್ರೋತ್ಸಹ ನೀಡುವ ಮಾತು ಗಳನ್ನಾಡಬೇಕು. ಒಳಿತಿನ ಆದೇಶ ನೀಡುವ, ಜನರ ಸಂಬಂಧಗಳನ್ನು ಜೋಡಿಸುವಂತಹದ್ದಾಗಿರಬೇಕು. ಉದ್ದೇಶ, ಗುರಿ ಇದ್ದರೆ ಮಾತ್ರ ಮಾತನಾಡಿರಿ. ಇಲ್ಲವೆಂದಾದರೆ ಮೌನವಾಗಿರಿ. ಮಾತನಾಡುವ ಮುಂಚೆ ಯೋಚಿಸಿ ಎಂದು ಇಸ್ಲಾಮ್ ಮಾರ್ಗದರ್ಶನ ನೀಡುತ್ತದೆ.
ಮುಸ್ಲಿಮ್ ಸಮುದಾಯದ ಮೇಲಿರುವ ಆರೋಪವೇನೆಂದರೆ ಇವರು ಆಲೋಚಿಸುವುದಕ್ಕಿಂತ ಮುಂಚಿತವಾಗಿ ಮಾತನಾಡುತ್ತಾರೆ ಎಂದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ಕಾಣಬಹುದು. ಅರ್ಥೈಸುವುದಕ್ಕಿಂತ ಮೊದಲೇ ಪ್ರಶ್ನೆಗೆ ಉತ್ತರಿಸುವುದು. ಇದು ಅಪಾಯಕಾರಿಯಾಗಿದೆ. ಆಡುವ ಮಾತುಗಳಿಂದ ಜನರ ವ್ಯಕ್ತಿತ್ವವನ್ನು ಗುರುತಿಸಬಹುದು. ಬೇಕಾಬಿಟ್ಟಿಯಾಗಿ ಮಾತನಾಡಲು ಸತ್ಯವಿಶ್ವಾಸಿಗಳಿಗೆ ಇಸ್ಲಾಮ್ ಅನುಮತಿಸಿಲ್ಲ. ಮಾತು ಆಡುವುದಕ್ಕಿಂತ ಮೊದಲು ನೀವು ಅದರ ಯಜಮಾನರು, ಮಾತು ಆಡಿದ ಬಳಿಕ ನೀವು ಅದರ ಗುಲಾಮರು. ಶತ್ರುಗಳ ವಿರುದ್ಧ ಒಂದು ಮಾತನ್ನು ನೀವು ಒಮ್ಮೆ ಬಳಸಿದರೆ ಅದರಲ್ಲಿಯೇ ನೀವು ಅಪರಾಧಿಗಳಾಗುವ ಸಾಧ್ಯತೆಯಿದೆ. ಅವಮಾನ ದುರಂತಗಳಿಗೆ ಈಡಾಗ ಬೇಕಾಗಬಹುದು.
ಮಾತುಗಳಿಂದ ಕುಟುಂಬವನ್ನು ಜೋಡಿಸಲೂ ಬಹುದು. ಒಡೆಯಲೂ ಬಹುದು. ದ್ವೇಷ ಬಾಷಣಗಳು ಈ ಸಾಲಿಗೆ ಸೇರುತ್ತವೆ. ಕರ್ನಾಟಕದಲ್ಲಿ ಮಾಡಿದ ಭಾಷಣಗಳು ಹಿಮಾಚಲ ಪ್ರದೇಶದಲ್ಲಿ ಗಲಭೆಗೆ ಕಾರಣವಾಗಬಹುದು. ಗುಜರಾತ್ನಲ್ಲಿ ಮಾಡಿದ ಭಾಷಣಗಳು ಇಲ್ಲಿ ಗಲಭೆಗೆ ಕಾರಣವಾಗಬಹುದು. ಆದ್ದರಿಂದ ಮಾತ ನಾಡುವಾಗ ಬಹಳಷ್ಟು ಚಿಂತಿಸಿ ಮಾತನಾಡಬೇಕು. ಈ ಬಗ್ಗೆ ಕುರ್ಆನಿನಲ್ಲಿ ಸ್ಪಷ್ಟವಾದ ಆದೇಶವಿದೆ. ಈ ಜಗತ್ತಿನಲ್ಲಿ ಅತ್ಯಂತ ಶೇಷ್ಠ ವಚನಗಳು ಕುರ್ಆನ್ನ ಸೂಕ್ತಗಳಾಗಿವೆ. ಇದು ಅಲ್ಲಾಹನ ಗ್ರಂಥದ ವಚನಗಳು. ಅದು ಭಾರವಾದ ವಚನಗಳು ಪ್ರವಾದಿ ಮಹಮ್ಮದ್(ಸ)ರಿಗೆ ವಹ್ಯ್ ಅವತೀರ್ಣಗೊಳ್ಳುವಾಗ ಅವರು ನಡುಗುತ್ತಿದ್ದರು. ಒಂಟೆಯ ಮೇಲೆ ಕುಳಿತಿರುವಾಗ ವಹ್ಯ್ ಅವತೀರ್ಣಗೊಳ್ಳುವಾಗ ಆ ಒಂಟೆಯು ಮಂಡಿಯೂರಿ ಕುಳಿತುಕೊಳ್ಳುತ್ತಿತ್ತು. ಈ ಭಾರವಾದ ವಚನಗಳಿರುವ ಕುರ್ಆನಿನಲ್ಲಿ ನೀವು ಹೇಗೆ ಮಾತನಾಡಬೇಕೆಂಬುದನ್ನು ಕಲಿಸಿಕೊಡಲಾಗಿದೆ.
ನೀವೆಷ್ಟೇ ಸಿಟ್ಟಿಗೊಳಗಾದರೂ ಒಳ್ಳೆಯದನ್ನೇ ಮಾತನಾಡಿರಿ. ವ್ಯಕ್ತಿತ್ವಕ್ಕೆ ತಕ್ಕುದಲ್ಲದ ಮಾತುಗಳನ್ನು ಆಡಲೇ ಬಾರದು. ಕೌಲನ್ ಮಅïರೂಫ- ಒಳ್ಳೆಯ ಮಾತನ್ನೇ ಆಡಿರಿ. ಕೌಲನ್ ಸದೀದ ನೇರವಾದ ಮಾತುಗಳನ್ನೇ ಆಡಬೇಕು. ಕೌಲನ್ ಮೈಸೂರ – ಮಾತುಗಳು ಸರಳವಾಗಿರಬೇಕು. ಕೌಲನ್ ಲೈಯಿನ – ಮಾತುಗಳು ಮೃದುವಾಗಿರಬೇಕು.
ಖೂಲೂ ಲಿನ್ನಾಸಿ ಹುಸ್ನ- ಜನರೊಂದಿಗೆ ಒಳ್ಳೆಯದನ್ನು ಮಾತ್ರ ಮಾತನಾಡಿರಿ. ವ್ಯಂಗ್ಯದ ನಿಂದನೆಯ ಮಾತುಗಳನ್ನು ಆಡ ಬಾರದು. ಪತ್ನಿ ಮಕ್ಕಳೊಂದಿಗೆ, ನೆರೆಕರೆಯವರೊಂದಿಗೆ, ಮುಸ್ಲಿಮೇತರರೊಂದಿಗೆ ಉತ್ತಮ ರೀತಿಯಲ್ಲಿ ಒಳ್ಳೆಯ ಮಾತುಗಳನ್ನೇ ಆಡಿರಿ. ನಿಮ್ಮ ಮಾತುಗಳು ಉತ್ತಮವಾದರೆ ಸಮಾಜವು ಉತ್ತಮವಾಗಿರುತ್ತದೆ. ಕಡಿಮೆ ಮಾತನಾಡಿರಿ. ಪ್ರವಾದಿವರ್ಯರು(ಸ) ಅತೀ ಕಡಿಮೆ ಮಾತನಾಡುತ್ತಿದ್ದರು. ಪ್ರವಾದಿವರ್ಯರ(ಸ) ಮಾತುಗಳನ್ನು ಎಣಿಸಬಹುದಿತ್ತು ಎಂದು ಹೇಳಲಾಗುತ್ತದೆ. ಆಡುವ ಮಾತುಗಳ ಬಗ್ಗೆ ಎಚ್ಚರವಾಗಿರಿ. ನಾವು ಆಡುವ ಪ್ರತಿಯೊಂದು ಮಾತುಗಳು ಅಲ್ಲಾಹನಲ್ಲಿ ದಾಖಲಾಗುತ್ತದೆ. ಪರಲೋಕದಲ್ಲಿ ಅಲ್ಲಾಹನ ಮುಂದೆ ಉತ್ತರಿಸ ಬೇಕಾಗುತ್ತದೆ ಎಂಬ ಪ್ರಜ್ಞೆ ನಮ್ಮಲ್ಲಿರಬೇಕಾಗಿದೆ.












