HRS ವತಿಯಿಂದ ಹಿರೇಹಟ್ಟಿಹೊಳಿ ನೆರೆ ಸಂತ್ರಸ್ತರಿಗಾಗಿ 30 ಮನೆಗಳ ನಿರ್ಮಾಣ ಯೋಜನೆಗೆ ಚಾಲನೆ

0
431

ಸನ್ಮಾರ್ಗ ವಾರ್ತೆ

ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ HRS ವತಿಯಿಂದ ಹಿರೇ ಹಟ್ಟಿಹೊಳಿ ನೆರೆ ಸಂತ್ರಸ್ತರಿಗಾಗಿ 30 ಮನೆಗಳ ನಿರ್ಮಾಣ ಯೋಜನೆಯ ಅಂಗವಾಗಿ, ಜೂನ್ 28ರಂದು ಬೆಳಗಾವಿಯಲ್ಲಿ ದಾನಿಗಳ ಸಭೆಯನ್ನು ಆಯೋಜಿಸಲಾಯಿತು.

ಖ್ಯಾತ ವಾಗ್ಮಿ ಡಾ|ತಾಹ ಮತೀನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

2019ರ ಭೀಕರ ನೆರೆ ಹಾವಳಿಯಿಂದ ಸಂತ್ರಸ್ತರಾದ ಅನೇಕ ಕುಟುಂಬಗಳಿಗೆ ಇಂದಿಗೂ ಸರ್ಕಾರದಿಂದಾಗಲಿ ಅಥವಾ ಇತರ ಸಂಸ್ಥೆಗಳಿಂದಾಗಲಿ ಶಾಶ್ವತ ವಸತಿ ದೊರೆತಿಲ್ಲ. ಈ ಮಾನವೀಯ ಅಗತ್ಯವನ್ನು ಮನಗಂಡು ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ (HRS) ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಈ ಯೋಜನೆಯಡಿ 28 ಮನೆಗಳು ಹಾಗೂ ಒಂದು ಕಮ್ಯುನಿಟಿ ಸೆಂಟರನ್ನು ನಿರ್ಮಿಸಲಾಗುತ್ತಿದ್ದು, ಪ್ರತಿ ಮನೆಯ ನಿರ್ಮಾಣ ವೆಚ್ಚ ಸುಮಾರು ₹3,90,000 ಆಗಿದೆ. ಒಟ್ಟು ಯೋಜನಾ ವೆಚ್ಚ ₹1,17,00,000 ಎಂದು ಅಂದಾಜಿಸಲಾಗಿದೆ.

ಈ ಸಂದರ್ಭದಲ್ಲಿ ಹಟ್ಟಿಹೊಳೆ ಯೊಜನೆಯ ಮಾಹಿತಿ ಪುಸ್ತಿಕೆ (Brochure) ಅನ್ನು ಬಿಡುಗಡೆ ಗೊಳಿಸಲಾಯಿತು.