ಸನ್ಮಾರ್ಗ ವಾರ್ತೆ
ವಿಶ್ವಕಪ್ ಫುಟ್ಬಾಲ್ ನಡೆಯುತ್ತಿರುವ ಸಮಯದಲ್ಲಿಯೇ ಫೆಲೆಸ್ತೀನಿನ ಪ್ರಮುಖ ಗೋಲ್ ಕೀಪರ್ ಸಲೀಂ ಖಾದರ್ ಅಲ್ ಅಶ್ಕರ್ ಎಂಬವರನ್ನು ಇಸ್ರೇಲ್ ಹತ್ಯೆ ಮಾಡಿದೆ. ಖಾನ್ ಯುನಿಸ್ ಸರ್ವಿಸಸ್ ಕ್ಲಬ್ನ ಪ್ರಮುಖ ಗೋಲ್ ಕೀಪರ್ ಇವರಾಗಿದ್ದರು.. ತನ್ನ ಫುಟ್ಬಾಲ್ ವೃತ್ತಿ ಜೀವನದಲ್ಲಿ ಅಲ್ ಅಕ್ಸ ಮತ್ತು ಅಲ್ ಮುಸಾದರ್ ಕ್ಲಬ್ಗಾಗಿ ಆಡಿರುವ ಸಲೀಂ ಫೆಲೆಸ್ತೀನ್ ಫುಟ್ಬಾಲ್ನ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. ಇವರು ಕೇವಲ ಐದು ತಿಂಗಳ ಹಿಂದೆ ವಿವಾಹವಾದರು ಮತ್ತು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದರು.
ಈ ಸಾವಿನೊಂದಿಗೆ 2023 ಅಕ್ಟೋಬರ್ ನಿಂದ ಫೆಲೆಸ್ತೀನಿನ ಕ್ರೀಡಾ ವಲಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1009ಕ್ಕೆ ಏರಿದೆ. ಇವುಗಳಲ್ಲಿ 567 ಮಂದಿ ಫುಟ್ಬಾಲ್ಗೆ ಸಂಬಂಧಿಸಿದವರಾಗಿದ್ದಾರೆ.
ಅಮೆರಿಕ ಕೆನಡಾ ಮತ್ತು ಮೆಕ್ಸಿಕೋದಲ್ಲಿ ಫಿಫಾ ವಿಶ್ವಕಪ್ ನಡೆಯುತ್ತಿದ್ದರೂ ಗಾಝಾದ ಜನರಿಗೆ ಅದು ಅನ್ಯವಾಗಿಯೇ ಉಳಿದಿದೆ. ಗಾಝಾದ ಫುಟ್ಬಾಲ್ ಅಭಿಮಾನಿಗಳು ವಿದ್ಯುತ್ ಇಲ್ಲದೆ ಬದುಕುತ್ತಿದ್ದಾರೆ. ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ. ಯುದ್ಧದ ವಿನಾಶವನ್ನು ನಿರಂತರವಾಗಿ ಅನುಭವಿಸುತ್ತಿದ್ದಾರೆ.
ಖಾನ್ ಯೂನಿಸ್ನಲ್ಲಿ ಸಲೀಂ ಅಲ್ ಅಶ್ಕರ್ ಅವರ ಅಂತ್ಯಕ್ರಿಯೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.












