ಮಂಗಳೂರು| ಸರ್ಚ್ & ರೆಸ್ಕ್ಯೂ ತರಬೇತಿ ಪೂರ್ಣಗೊಳಿಸಿದ HRS ಮಹಿಳಾ ತಂಡ: ಪ್ರಮಾಣ ಪತ್ರ‌ ವಿತರಣೆ

0
395

ಸನ್ಮಾರ್ಗ ವಾರ್ತೆ

ಮಂಗಳೂರು: ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ(ಹೆಚ್‌ಆರ್‌ಎಸ್) ಇದರ ಮಂಗಳೂರು ಮಹಿಳಾ ವಿಭಾಗದ ಸ್ವಯಂ ಸೇವಕಿಯರಿಗೆ ಸರ್ಚ್ & ರೆಸ್ಕ್ಯೂಗೆ ಬೇಕಾದ ಪಸ್ಟ್ -ಏಡ್, ನಾಟ್ಸ್, ಬ್ಯಾಂಡೇಜ್, ಕ್ಯಾಜ್ವಲಿಟಿ ಕ್ಯಾರಿಂಗ್ ಮತ್ತು ಟ್ರೈಯೇಜ್ ವಿಷಯಗಳ 13 ದಿನದ ತರಬೇತಿಯನ್ನು ಆಯೋಜಿಸಲಾಗಿತ್ತು.

ತರಬೇತಿ ಪೂರ್ತಿಗೊಳಿಸಿದ ಮಹಿಳೆಯರಿಗೆ ನಸ್ರೀನ್ ಬಿನ್ತ್ ಅಹ್ಮದ್ ಬಾವ, ಸೈಕೊಲಾಜಿಸ್ಟ್ ಇವರು ಸರ್ಟಿಫಿಕೇಟ್‌ನ್ನು ನೀಡಿ ಸನ್ಮಾನಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
HRSನ ಡೈರೆಕ್ಟರ್ ಕೆ.ಎಂ ಅಶ್ರಫ್ ರವರು ಸಮಾರೋಪ ನುಡಿಗಳನ್ನಾಡಿದರು.

ಸಮಾರಂಭದಲ್ಲಿ HRS ಟ್ರೈನರ್ಸ್ ಕ್ಯಾಪ್ಟನ್ ಅಮೀರ್ ಕುದ್ರೋಳಿ, ಟ್ರೈನರ್ ಮುನವ್ವರ್ ಅಹ್ಮದ್ ಉಪಸ್ಥಿತರಿದ್ದರು.