ಸನ್ಮಾರ್ಗ ವಾರ್ತೆ
ಇಂಗ್ಲೆಂಡ್,ನ.18: ಕೊರೋನ ಸಂದಿಗ್ಧತೆಯ ನಡುವೆಯೂ ಹಸಿರು ಔದ್ಯಮಿಕ ಕ್ರಾಂತಿಯನ್ನು ಬ್ರಿಟಿಷ್ ಪ್ರಧಾನಿ ಘೋಷಿಸಿದರು. ಟೆನ್ ಪಾಯಿಂಟ್ ಗ್ರೀನ್ ಪ್ಲಾನ್ ಎಂಬ ಹೆಸರಿನಲ್ಲಿ ಬೊರಿಸ್ ಸರಕಾರ ಹೊಸ ಘೋಷಣೆ ಹೊರಡಿಸಿದೆ. ಕೊರೋನ ಬಿಕ್ಕಟ್ಟು ಮೀರಿ ನಿಲ್ಲಲು 2,50,000 ಹೊಸ ಉದ್ಯೋಗ ಸೃಷ್ಟಿ ಕೂಡ ಟೆನ್ ಪೊಯಿಂಟ್ ಗ್ರೀನ್ ಪ್ಲಾನ್ನಲ್ಲಿದೆ.
ಪ್ರಕೃತಿ ಸಂರಕ್ಷಣೆ ಸಂಘಟನೆಗಳಿದ ಚಪ್ಪಾಳೆ ಗಿಟ್ಟಿಸಿಕೊಂಡ ಗ್ರೀನ್ ಇಂಡಸ್ಟ್ರಿಯಲ್ ರೆವೆಲ್ಯೂಶನ್ ವಿರುದ್ಧ ಪ್ರತಿಪಕ್ಷಗಳ ಸಹಿತ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಉತ್ತರ ಇಂಗ್ಲೆಂಡ್, ಮಿಡ್ಲಾಂಡ್ಸ್, ಸ್ಕಾಟ್ಲೆಂಡ್ ವೇಲ್ಸ್ನಲ್ಲಿ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗಲಿದೆ.
2030ಕ್ಕಾದಾಗ ಪೆಟ್ರೋಲ್-ಡೀಸೆಲ್ ಕಾರುಗಳನ್ನು ಸಂಪೂರ್ಣ ನಿಷೇಧಿಸುವುದು ಪ್ರಧಾನ ತೀರ್ಮಾನಗಳಲ್ಲಿ ಒಂದು. ಗಾಳಿಯಿಂದ ವಿದ್ಯುತ್ ಉತ್ಪಾದಿಸುವುದಕ್ಕೆ ಆದ್ಯತೆ. ಹವಾಮಾನ ವೈಪರೀತ್ಯ ಸಹಿತ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಪರಂಪರಾಗತ ಇಂಧನಗಳಿಂದ ಚಲಿಸುವ ವಾಹನಗಳ ಮಾರಾಟ ನಿಷೇಧಿಸಲಾಗುತ್ತಿದೆ. ಆದರೆ, ಹೊಸ ತಂತ್ರ ಜ್ಞಾನದ ಹೈಬ್ರಿಡ್ ವಾಹನಗಳಿಗೆ ಅವಕಾಶ ಇದೆ.
ದೇಶದಲ್ಲಿ ಹಸಿರು ಉದ್ಯಮ ಕ್ರಾಂತಿಯ ಭಾಗವಾಗಿ 2040ರ ಹೊತ್ತಿಗೆ ಪೆಟ್ರೋಲ್-ಡೀಸೆಲ್ ವಾಹನ ನಿಷೇಧಿಸುವುದೆಂದಿತ್ತು. ಆದರೆ ತೀರ್ಮಾನ ಬದಲಿಸಿ ಗ್ರೀನ್ ಪ್ಲಾನ್ ಅಂತರ್ಗತವಾಗಿ 2030ರಲ್ಲೇ ಅವುಗಳನ್ನು ನಿಷೇಧಿಸಲು ಸರಕಾರ ತೀರ್ಮಾನಿಸಿದೆ.
ದಿ ಗ್ಲೋಬಲ್ ಸೆಂಟರ್ ಆಫ್ ಗ್ರೀನ್ ಫೈನಾನ್ಸ್ ಎಂಬುದು ಹಸಿರು ಕ್ರಾಂತಿಯ ಘೋಷ ವಾಕ್ಯವಾಗಿದೆ. ಸಾರ್ವಜನಿಕ ಸಾರಿಗೆ, ಸೈಕ್ಲಿಂಗ್ಗೆ ಆದ್ಯತೆ ನೀಡಲಾಗುವುದು. ಮುಂಬರುವ ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿವೆ. ನ್ಯೂಕ್ಲಿಯರ್, ಹೈಡ್ರೊಜನ್ ಇಂಧನ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. 30,000 ಎಕ್ಟೇರ್ನಲ್ಲಿ ಗಿಡ ನೆಟ್ಟು ಕಾಡು ಬೆಳೆಸಲು ಬೊರಿಸ್ ಜಾನ್ಸ್ರ ಸರಕಾರ ತೀರ್ಮಾನಿಸಿದೆ.












