ಲೆಬನಾನ್ ಸರಕಾರದ ಹೊಸ ತೆರಿಗೆ ವಿರುದ್ಧ ಪ್ರತಿಭಟಿಸಿ ಬೀದಿಗಿಳಿದ ಜನರು!

0
567

ಸನ್ಮಾರ್ಗ ವಾರ್ತೆ

ಬೈರೂತ್,ಅ.19: ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಸರಕಾರ ಹೊಸ ತೆರಿಗೆ ಜನರ ಮೇಲೆ ಹೇರಿದ್ದು, ಇದನ್ನು ವಿರೋಧಿಸಿ ಜನರು ಬೀದಿಗಿಳಿದಿದ್ದಾರೆ.

ನೂರಾರು ಜನರು ಲೆಬನಾನ್ ಬೀದಿಯಲ್ಲಿ ಸರಕಾರದ ಹೊಸ ತೆರಿಗೆ ನೀತಿಯನ್ನು ವಿರೋಧಿಸಿದರು. ಲೆಬನಾನ್ ಸಚಿವ ಸಂಪುಟ 2020ರ ಬಜೆಟ್‍ ಚರ್ಚೆಯಲ್ಲಿ ತಂಬಾಕು, ಪೆಟ್ರೋಲ್, ವಾಟ್ಸಪ್‌ನಂತಹ ಸಾಮಾಜಿಕ ಮಾಧ್ಯಮಗಳಿಗೆ ಹಾಗೂ ಇನ್ನಿತರ ವಸ್ತುಗಳಿಗೆ ತೆರಿಗೆ ವಿಧಿಸಲು ತೀರ್ಮಾನಿಸಿತ್ತು. ಇದನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

‘ಕ್ರಾಂತಿ’ ಎಂಬ ಘೋಷಣೆಯೊಂದಿಗೆ ನೂರಾರು ಜನರು ಬೈರೂತಿನ ಬೀದಿಯಲ್ಲಿ, ಪಾರ್ಲಿಮೆಂಟಿಗೆ ಜಾಥಾ ನಡೆಸಿದರು. ಸರಕಾರ ರಾಜಧಾನಿಗೆ ಪೊಲೀಸ್ ಸೇನೆಯನ್ನು ನಿಯೋಜಿಸಿ ರಕ್ಷಣೆ ಹೊರಿಸಿದೆ.