ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ಇಲ್ಲೇ ಇರಲು ಬಿಡಿ ; ಕಣ್ಣೀರಿಟ್ಟ ಶಾರದಾ ಬಾಯಿ

0
782

ಸನ್ಮಾರ್ಗ ವಾರ್ತೆ

ಒಡಿಶಾದ ಬಾಲಂಗೀರ್‌ನಲ್ಲಿ ವಾಸಿಸುತ್ತಿರುವ ಪಾಕಿಸ್ತಾನ ಮೂಲದ ಶಾರದಾ ಬಾಯಿಗೆ ಭಾರತ ಬಿಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ ತಾನು ಕಳೆದ ಮೂರು ದಶಕಗಳಿಂದ ಭಾರತದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸಿಸುತ್ತಿದ್ದು, ಈಗ ಪಾಕಿಸ್ತಾನಕ್ಕೆ ಹಿಂತಿರುಗಲು ಸಾಧ್ಯವಿಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ.

ಶಾರದಾ ಬಾಯಿ ಮಹೇಶ್ ಕುಕ್ರೇಜಾ ಎಂಬ ಭಾರತೀಯನನ್ನು ವಿವಾಹವಾಗಿದ್ದಾರೆ. ಇಬ್ಬರು ಮಕ್ಕಳನ್ನು ಹೊಂದಿದ್ದು, ಪತಿ, ಮಕ್ಕಳು ಎಲ್ಲರೂ ಭಾರತೀಯ ಪೌರತ್ವ ಹೊಂದಿದ್ದಾರೆ. ಆದರೆ ಶಾರದಾ ಬಾಯಿಯವರಿಗೆ ಇನ್ನೂ ಪೌರತ್ವ ಸಿಕ್ಕಿಲ್ಲ.

“ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ. ನನ್ನ ಪಾಸ್‌ಪೋರ್ಟ್ ಕೂಡ ಹಳೆಯದು. ದಯವಿಟ್ಟು ನನಗೆ ಇಲ್ಲೇ ಇರಲು ಅವಕಾಶ ನೀಡಿ,” ಎಂದು ಅವರು ಮನವಿ ಮಾಡಿದ್ದಾರೆ.

ಈಗಾಗಲೇ, ಭಾರತ ಸರ್ಕಾರದ ನಿರ್ದೇಶನದಂತೆ ಅಲ್ಪಾವಧಿ ವೀಸಾ ಹೊಂದಿರುವ 509 ಪಾಕಿಸ್ತಾನಿ ನಾಗರಿಕರು ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಮರಳಿದ್ದಾರೆ. 14 ರಾಜತಾಂತ್ರಿಕರು ಸೇರಿದಂತೆ 745 ಭಾರತೀಯರು ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ್ದಾರೆ.

ಅವಧಿ ಪೂರೈಸಿದವರನ್ನು ಶೀಘ್ರವಾಗಿ ಮರಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.