ಸೂಫಿ ಸಂತ ಬಾಬಾ ಕಮಾಲ್ ಶಾ ದರ್ಗಾ ಧ್ವಂಸ ಮಾಡಿದ ಉತ್ತರಾಖಂಡ ಸರ್ಕಾರ

0
732

ಸನ್ಮಾರ್ಗ ವಾರ್ತೆ

ಉತ್ತರಖಂಡದ ಡೂಮ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಒಳಾಂಗಣದಲ್ಲಿದ್ದ ಸೂಫಿ ಸಂತ ಬಾಬಾ ಕಮಲ್ ಷಾ ಅವರ ದರ್ಗಾವನ್ನು ರಾತೋ ರಾತ್ರಿ ಉತ್ತರಾಖಂಡ ಸರ್ಕಾರ ದ್ವಂಸ ಮಾಡಿದೆ. ಇದು ಒಂದೇ ವಾರದಲ್ಲಿ ನಡೆದ ಎರಡನೇ ದರ್ಗಾ ಧ್ವಂಸವಾಗಿದೆ. ಮುಂಜಾನೆ ಎರಡು ಗಂಟೆ ಸುಮಾರಿಗೆ ಬುಲ್ಡೋಜರ್ ಈ ದರ್ಗಾ ವನ್ನು ದ್ವಂಸ ಮಾಡಿದೆ ಎಂದು ವರದಿಗಳು ತಿಳಿಸಿವೆ.

ವಾರಗಳ ಮೊದಲು ಸೈಯದ್ ಮಸೂಮ್ ಶಾ ಮಿಯಾಮ್ ಅವರ ದರ್ಗಾ ವನ್ನು ಕೂಡ ಉತ್ತರಾಖಂಡ ಸರಕಾರ ಉರುಳಿಸಿತ್ತು.

ಆಸ್ಪತ್ರೆಗೆ ನೀಡಲಾದ ಜಾಗದಲ್ಲಿ ಈ ದರ್ಗಾ ವನ್ನು ನಿರ್ಮಿಸಲಾಗಿತ್ತು ಮತ್ತು ಅದನ್ನು ಕೆಡವುದಕ್ಕಾಗಿ ನಮಗೆ ದೂರು ಬಂದಿತ್ತು ಎಂದು ಡೆಹರಾಡೂನ್ ನ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಹೇಳಿದ್ದಾರೆ. ಸ್ಥಳೀಯ ನಿವಾಸಿಗಳು ನಾಲ್ಕು ತಿಂಗಳ ಹಿಂದೆ ಈ ದರ್ಗಾದ ಬಗ್ಗೆ ದೂರು ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ನಾವು ತನಿಖೆ ನಡೆಸಿದೆವು. ಈ ಬಗ್ಗೆ ನಾವು ದಾಖಲೆಗಳನ್ನು ಕೇಳಿದೆವು ಆದರೆ ನಮಗೆ ಸರಿಯಾದ ಸ್ಪಂದನೆ ಸಿಗಲಿಲ್ಲ ಎಂದು ಕಮಿಷನರ್ ಹೇಳಿದ್ದಾರೆ.

ಆದರೆ ಸ್ಥಳೀಯರು ಇವರ ವಾದವನ್ನು ತಿರಸ್ಕರಿಸಿದ್ದಾರಲ್ಲದೆ ಈ ಜಾಗ ವಕ್ಫ್ ಮಂಡಳಿಯಲ್ಲಿ ನೋಂದಣಿ ಯಾಗಿತ್ತು ಮತ್ತು ಧ್ವಂಸ ಕಾರ್ಯವು ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಈ ಜಾಗವು ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗಿತ್ತು ಎಂದು ಉತ್ತರಾಖಂಡ ವಕ್ಫ್ ಬೋರ್ಡ್ ಚೇರ್ಮನ್ ಶಾದಾಬ್ ಶಂಸ್ ದೃಢಪಡಿಸಿದ್ದಾರೆ

ಇದೇ ವೇಳೆ ಉತ್ತರಾಖಂಡದ ಬಿಜೆಪಿ ಸರ್ಕಾರವು ಕೇವಲ ಮುಸ್ಲಿಮರ ಪ್ರಾರ್ಥನಾಲಯ ಮದ್ರಸಾ ಮತ್ತು ದರ್ಗಾಗಳನ್ನು ಮಾತ್ರ ಗುರಿ ಮಾಡಿ ದ್ವಂಸ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.