ಸನ್ಮಾರ್ಗ ವಾರ್ತೆ
ತುಮಕೂರು: “ವಿದ್ಯಾರ್ಥಿ ಯುವಕರು ತಮ್ಮ ಸಹಜೀವಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸುತ್ತಾ ಸದಾ ಸತ್ಯ ಮತ್ತು ನ್ಯಾಯದ ಪರ ನಿಲ್ಲುವವರಾಗಬೇಕು, ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಮಾತ್ರ ಒಂದು ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ, ಬದಲಾಗಿ ಅದರ ಜೊತೆಗೆ ಪ್ರೀತಿ, ಸಹೋದರತೆ ಸಹಬಾಳ್ವೆಯಿಂದಲೇ ದೇಶ ನ್ಯಜ ಅರ್ಥದಲ್ಲಿ ಪ್ರಗತಿ ಹೊಂದಲು ಸಾಧ್ಯ” ಎಂದು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ಹೇಳಿದರು.
ಅವರು ಸ್ಥಾನೀಯ ಎಸ್.ಐ.ಓ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಸೀಬ್ ಸಂಘಟನೆಯ ಪರಿಚಯ ಮಾಡಿಸಿದರು.
ಮುಹಮ್ಮದ್ ಕ್ಯಫ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ತುಮಕೂರು ಸ್ಥಾನೀಯ ಅಧ್ಯಕ್ಷ ಜ. ಅಸದುಲ್ಲಾಹ್ ಖಾನ್, ಎಸ್.ಐ.ಓ ಸ್ಥಾನೀಯ ಸಂಚಾಲಕ ಉಮರ್ ಸಯೀದ್ ಮುಂತಾದವರು ಉಪಸ್ಥಿತರಿದ್ದರು.














