ಮೋದಿಯವರ ವಾರಣಾಸಿಯಲ್ಲೇ ಬಿಜೆಪಿಗೆ ಹಿನ್ನಡೆ: 10 ವರ್ಷದ ಬಳಿಕ 2 ಸೀಟು ನಷ್ಟ

0
697

ಸನ್ಮಾರ್ಗ ವಾರ್ತೆ

ಲಕ್ನೊ,ಡಿ. 6: ಪ್ರಧಾನಿ ನರೇಂದ್ರ ಮೋದಿ ಸಂಸತ್ ಕ್ಷೇತ್ರ ಉತ್ತರಪ್ರದೇಶದ ವಾರಣಾಸಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಎರಡು ಸೀಟು ನಷ್ಟವಾಗಿದೆ. ಹತ್ತು ವರ್ಷದ ಬಳಿಕ ಬಿಜೆಪಿ ಕೋಟೆ ಎನ್ನಲಾದ ವಾರಣಾಸಿಯಲ್ಲಿ ಹೀಗಾಗಿದ್ದು ಎರಡು ಕಡೆಯೂ ಸಮಾಜವಾದಿ ಪಾರ್ಟಿ ಗೆದ್ದಿದೆ.

ವಿಧಾನ ಪರಿಷತ್‍ಗೆ ವಾರಣಾಸಿಯಿಂದ ಅಧ್ಯಾಪಕರು, ಪದವೀಧರ ಮೀಸಲಾತಿ ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದು, ಪದವೀಧರ ಕ್ಷೇತ್ರದಲ್ಲಿ ಅಶುತೋಷ್ ಸಿನ್ಹಾ ಗೆದ್ದರು. ಶಿಕ್ಷಕರ ಕ್ಷೇತ್ರದಲ್ಲಿ ಲಾಲ್ ಬಿಹಾರಿ ಯಾದವ್ ಗೆದ್ದರು. ಇಬ್ಬರೂ ಸಮಾಜವಾದಿ ಪಾರ್ಟಿಯವರು. ಕಳೆದ ಮಂಗಳವಾರ ಹನ್ನೊಂದು ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ಒಂಬತ್ತು ಸೀಟುಗಳಲ್ಲಿ ಬಿಜೆಪಿಗೆ ನಾಲ್ಕು ಸಮಾಜವಾದಿ ಪಾರ್ಟಿಗೆ ಮೂರು ಮತ್ತು ಒಬ್ಬ ಪಕ್ಷೇತರ ಗೆದ್ದಿದ್ದಾರೆ. ಮಹಾರಾಷ್ಟ್ರದ ವಿಧಾನ ಪರಿಷತ್ತು ಚುನಾವಣೆಯಲ್ಲಿಯೂ ಆರೆಸ್ಸೆಸ್ ಕೇಂದ್ರ ನಾಗಪುರದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿತ್ತು. ಬಿಜೆಪಿ ಅಭ್ಯರ್ಥಿ ಸಂದೀಪ್ ಜೋಷಿ ಕಾಂಗ್ರೆಸ್‍ನ ಅಭಿಜಿತ್ ವಂಜರೆಯ ಮುಂದೆ ಸೋತಿದ್ದಾರೆ.