ಪಶ್ಚಿಮ ಬಂಗಾಳ| TMC ಯಿಂದ ನಿರಾಶ್ರಿತರ ಕಡೆಗಣನೆ: ಜನವರಿಯಲ್ಲಿ CAA ಜಾರಿಗೊಳಿಸಲಾಗುವುದು- ಬಿಜೆಪಿ

0
550

ಸನ್ಮಾರ್ಗ ವಾರ್ತೆ

ಕೊಲ್ಕತಾ,ಡಿ.6: ಪಶ್ಚಿಮ ಬಂಗಾಳದಲ್ಲಿ ದೊಡ್ಡ ನಿರಾಶ್ರಿತ ಜನವಿಭಾಗವಿದೆ ಅವರಿಗೆ ಪೌರತ್ವ ನೀಡಲು ಕೇಂದ್ರದ ಬಿಜೆಪಿ ಸರಕಾರ ಇಚ್ಛಿಸುತ್ತಿದೆ ಆದ್ದರಿಂದ ಮುಂದಿನ ವರ್ಷ ಜನವರಿಯಿಂದ ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹೇಳಿದರು.

ನಿರಾಶ್ರಿತರೊಂದಿಗೆ ತೃಣಮೂಲ ಸರಕಾರ ಒಳ್ಳೆಯದಾಗಿ ವರ್ತಿಸುವುದಿಲ್ಲ. ನಮ್ಮ ನೆರೆಯ ದೇಶ ಬಾಂಗ್ಲಾ, ಅಫ್ಘಾನಿಸ್ತಾನ, ನೇಪಾಳದಿಂದ ಧಾರ್ಮಿಕ ಹಿಂಸೆಗೆ ತುತ್ತಾಗುವ ಎಲ್ಲರಿಗೂ ಮೋದಿ ಸರಕಾರ ಪೌರತ್ವ ನೀಡಲಿದೆ. ಸಿಎಎ ಅಡಿಯಲ್ಲಿ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಕ್ರಿಯೆ ಮುಂದಿನ ವರ್ಷ ಜನವರಿಯಿಂದ ಆರಂಭಿಸುವ ನಿರೀಕ್ಷೆ ನಮಗಿದೆ ಎಂದು ಅವರು ನಾರ್ತ್ ಪರಗಣ ಜಿಲ್ಲೆಯ ಬಿಜೆಪಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾನೂನು ಎಲ್ಲ ರಾಜ್ಯ ಸರಕಾರಗಳು ಜಾರಿಗೊಳಿಸಲಿದೆ ಎಂದು ಕೈಲಾಶ್ ಹೇಳಿದರು ಒಮ್ಮೆ ಸಂಸತ್ತಿನಲ್ಲಿ ಕಾನೂನು ನಿರ್ಮಾಣವಾದರೆ ಆರ್ಟಿಕಲ್ 252 ಪ್ರಕಾರ ಅದನ್ನು ಎಲ್ಲ ರಾಜ್ಯಗಳು ಜಾರಿಗೆ ತರಬೇಕಾಗುತ್ತದೆ ಎಂದು ವಿಜಯ ವರ್ಗೀಯ ಹೇಳಿದ್ದರು. ಪಶ್ಚಿಮ ಬಂಗಾಳದ ಜನರನ್ನು ವಂಚಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಮಾಜಿ ಸಚಿವ ಫಿರ್ಹಾದ್ ಹಕೀಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.