ಹಿರಾ ಕಾಲೇಜು ಬಬುಕಟ್ಟೆ ನೂತನ ಸಭಾಂಗಣ ಲೋಕಾರ್ಪಣೆ

0
587

ಸನ್ಮಾರ್ಗ ವಾರ್ತೆ

ಉಳ್ಳಾಲ: ಹಿರಾ ಕಾಲೇಜು‌ ಬಬುಕಟ್ಟೆ ವಿದ್ಯಾಸಂಸ್ಥೆಯ ನೂತನವಾಗಿ ನಿರ್ಮಿಸಲಾದ ದಿ. ಮುಹಮ್ಮದ್ ಸಿರಾಜುಲ್ ಹಸನ್ ಮೆಮೋರಿಯಲ್ ಸಭಾಂಗಣವನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಅಮೀನುಲ್ ಹಸನ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶಾಂತಿ ಪ್ರಕಾಶನದ ವ್ಯವಸ್ದಾಪಕ ಮುಹಮ್ಮದ್ ಕುಂಞ, ವೆಲ್ಪೇರ್ ಪಾರ್ಟಿ ಕರ್ನಾಟಕ ಅಧ್ಯಕ್ಷ ತಾಹೀರ್ ಹುಸೇನ್, ಸಂತ ಅಲೋಷಿಯಸ್ ಕಾಲೇಜು ಪ್ರಾಧ್ಯಾಪಕಿ ದಿವ್ಯಾ ಶೆಟ್ಟಿ, ಅನುಪಮಾ ಮಹಿಳಾ ಮಾಸಿಕ ಸಂಪಾದಕಿ ಶಹನಾಝ್ ಎಂ ಶುಭ ಹಾರೈಸಿದರು .

ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತೆ‌ ಇಸ್ಲಾಮಿ ಕರ್ನಾಟಕ ಅಧ್ಯಕ್ಷರಾದ ಡಾ ಸಾದ್ ಬೆಳ್ಗಾಮಿ ವಹಿಸಿದರು. ಹಿರಾ‌ ಕಾಲೇಜು ನಡೆದು ಬಂದ ಹಾದಿಯ ಕುರಿತು ಸಂಸ್ದೆಯ ಟ್ರಸ್ಟಿ ಡಾ ಮುಬೀನ್ ಮಾಹಿತಿ‌ ನೀಡಿದರು.
ಹಿರಾ ಕಾಲೇಜು ಪ್ರಾಂಶುಪಾಲೆ ಆಯಿಶಾ ಅಸ್ಮೀನಾ ಸ್ವಾಗತಿಸಿದರು. ಪದವಿ ಕಾಲೇಜು ಪ್ರಾಶುಂಪಾಲೆ ಫಾತಿಮ ಮೆಹರೂನ್ ಧನ್ಯವಾದವಿತ್ತರು.