ಝಾರ್ಕಂಡಿನ ಏಕೈಕ ಕಾಂಗ್ರೆಸ್ ಸಂಸದೆ ಬಿಜೆಪಿಗೆ

0
238

ಸನ್ಮಾರ್ಗ ವಾರ್ತೆ

ರಾಂಚಿ, ಫೆ. 26: ಝಾರ್ಕಂಡಿನ ಕಾಂಗ್ರೆಸ್ ಸಂಸದೆ ಗೀತಾ ಕೋಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರು ಝಾರ್ಕಂಡಿನಲ್ಲಿ ಕಾಂಗ್ರೆಸಿನ ಏಕೈಕ ಸಂಸದರಾಗಿದ್ದರು.

ಬಿಜೆಪಿ ರಾಜ್ಯ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಉಪಸ್ಥಿತಿಯಲ್ಲಿ ಗೀತಾ ಬಿಜೆಪಿಗೆ ಸೇರ್ಪಡೆಯಾದರು. ಝಾರ್ಕಂಡಿನ ಮಾಜಿ ಮುಖ್ಯಮಂತ್ರಿ ಮಧು ಕೋಡ ಅವರ ಪತ್ನಿಯಾಗಿದ್ದಾರೆ ಗೀತಾ ಕೋಡ.

ರಾಜ್ಯದಲ್ಲಿ ಕಾಂಗ್ರೆಸ್ ಮಾಡಿಕೊಂಡ ಸಖ್ಯದಲ್ಲಿ ಉಂಟಾದ ಅತೃಪ್ತಿಯಿಂದ ಗೀತಾ ಬಿಜೆಪಿಗೆ ಸೇರಿದರು. ಕಾಂಗ್ರೆಸ್ಸಿನ ಓಲೈಕೆ ರಾಜಕೀಯ ವಿರೋಧಿಸಿ ಬಿಜೆಪಿ ಸೇರಿದ್ದೆಂದು ಕೋಡಾ ಹೇಳಿದ್ದಾರೆ.

ಕಾಂಗ್ರೆಸ್ ದೇಶವನ್ನು ನಾಶಕ್ಕೆ ತಳ್ಳಿಹಾಕಿತು. ಕಾಂಗ್ರೆಸ್ಸಿನದ್ದು ಓಲೈಕೆ ರಾಜಕೀಯವಾಗಿದೆ. ಒಂದು ಕಡೆ ಎಲ್ಲರ ಜೊತೆ ಇದ್ದೇವೆ ಎನ್ನುತ್ತಾರೆ. ಆದರೆ ಅವರು ಯಾರನ್ನೂ ಗಮನಿಸುವುದಿಲ್ಲ ಎಂದು ಕೋಡ ಹೇಳಿದರು. ಇಂಥ ಪಾರ್ಟಿಯಲ್ಲಿರುವುದು ಕಷ್ಟದ ವಿಚಾರ ಎಂದೂ ಅವರು ಹೇಳಿದರು.