ಮುತ್ತಲಾಕ್ ಮಸೂದೆ ಪುನಃ ಲೋಕಸಭೆಯಲ್ಲಿ ಮಂಡನೆ

0
443

ಹೊಸದಿಲ್ಲಿ,ಜೂ.21: ರಾಷ್ಟ್ರಪತಿ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಮುತ್ತಲಾಕ್ ಮಸೂದೆಯನ್ನುಪುನಃ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಹತ್ತು ಸುಗ್ರೀವಾಜ್ಞೆ ಹೊರಡಿಸುವುದರ ಜೊತೆಗೆ ಮುತ್ತಲಾಕ್ ಮಸೂದೆಯನ್ನು ಕೂಡ ಮಂಡಿಸಲಾಗಿದೆ. ಜಮ್ಮುಕಾಶ್ಮೀರ ಮೀಸಲಾತಿಗೆ ಸಂಬಂಧಿಸಿದ ಇನ್ನೊಂದು ಪ್ರಧಾನ ಮಸೂದೆಗೂ ಅವಕಾಶ ಸಿಕ್ಕಿದೆ. ಪಾರ್ಲಿಮೆಂಟ್‍ನ ಮೊದಲ ಅಧಿವೇಶನದಲ್ಲಿ ಮುತ್ತಲಾಕ್ ಮಸೂದೆ ಮಂಡಿಸಲು ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡಿತ್ತು. ಜೂನ್ 12ಕ್ಕೆ ಮಸೂದೆಗೆ ಸಚಿವ ಸಂಪುಟ ಅಂಗೀಕಾರ ನೀಡಿದೆ. ಮೋದಿ ಸರಕಾರದ ಪ್ರಧಾನ ಚುನಾವಣಾ ಭರವಸೆಗಳಲ್ಲಿ ಮುತ್ತಲಾಕ್ ಕೂಡ ಒಂದಾಗಿದೆ. ಕಳೆದ ಡಿಸೆಂಬರ್‍‌ನಲ್ಲಿ ಮುತ್ತಲಾಕ್ ಮಸೂದೆ ಲೋಕಸಭೆಯಲ್ಲಿ ಪಾಸು ಆಗಿತ್ತು. ಆದರೆ ರಾಜ್ಯಸಭೆಯಲ್ಲಿ ಬಿದ್ದು ಹೋಗಿತ್ತು. ಪ್ರತಿಪಕ್ಷ ಒಗ್ಗೂಡಿ ಮುತ್ತಲಾಕನ್ನು ವಿರೋಧಿಸಿದ್ದು ಇದಕ್ಕೆ ಕಾರಣವಾಗಿದೆ.