INDIA ಒಕ್ಕೂಟದಿಂದ ಅರ್ನಬ್ ಗೋಸ್ವಾಮಿ ಸೇರಿ 14 ಟಿವಿ ಆ್ಯಂಕರ್ಸ್ ಗಳ ಬಹಿಷ್ಕಾರಕ್ಕೆ ಕರೆ

0
204

ಸನ್ಮಾರ್ಗ ವಾರ್ತೆ

INDIA ಒಕ್ಕೂಟದ ನಾಯಕರು ಕೆಲ ಟಿವಿ ಕಾರ್ಯಕ್ರಮಗಳು ಮತ್ತು ನಿರೂಪಕರ ಕಾರ್ಯಕ್ರಮದಲ್ಲಿ ಭಾಗವಹಿಸದೆ ಬಹಿಷ್ಕಾರ ಹಾಕಲು ಸಮನ್ವಯ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ.

INDIA ಒಕ್ಕೂಟದ ಸಮನ್ವಯ ಸಮಿತಿಯು, ಮಾಧ್ಯಮ ಉಪ ಸಮಿತಿ ರಚಿಸಿದ್ದು, ಬಹಿಷ್ಕಾರ ಮಾಡಬೇಕಿರುವ ನಿರೂಪಕರು ಮತ್ತು ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧಪಡಿಸಿದೆ.

ಅಮಾನ್ ಛೋಪ್ರಾ, ಪ್ರಾಚಿ ಪರಸಾರ್, ರುಬಿಕಾ ಲಿಯಾಕತ್, ಚೈತ್ರಾ ತೃಪ್ತಿ, ಸುದೀರ್ ಚೌದರಿ, ಅಮೀಶ್ ದೇವಗನ್, ಅರ್ನಬ್ ಗೋಸ್ವಾಮಿ, ನವಿಕಾ ಕುಮಾರ್, ಆನಂದ ನರಸಿಂಹನ್, ಗೌರವ್ ಸಾವಂತ್, ಅದಿತಿ ತ್ಯಾಗಿ, ಸುಶಾಂತ್ ಸಿನ್ಹಾ ಅಶೋಕ್ ಶ್ರೀವತ್ಸವ್, ಶಿವ್ ಅರೂರ್ ಅವರು ಬಹಿಷ್ಕೃತ ನಿರೂಪಕರ ಪಟ್ಟಿಯಲ್ಲಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಮನೆಯಲ್ಲಿ ನಡೆದ INDIA ಒಕ್ಕೂಟದ ಸಮನ್ವಯ ಸಮಿತಿಯ ಮೊದಲ ಸಭೆಯಲ್ಲಿ ಕೆಲ ಟಿವಿ ಕಾರ್ಯಕ್ರಮಗಳಿಗೆ ಬಹಿಷ್ಕಾರ ಹಾಕುವ ಸಲುವಾಗಿ ಆಂಕರ್‌ಗಳು ಮತ್ತು ಕಾರ್ಯಕ್ರಮಗಳನ್ನು ಪಟ್ಟಿ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಮಾಧ್ಯಮದ ಒಂದು ವಿಭಾಗವು ಕಡಿಮೆ ಕವರೇಜ್ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಯಾತ್ರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಹೆಚ್ಚು ಬೆಂಬಲ ನೀಡಿದ್ದಾರೆ. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ರಾಹುಲ್ ಯಾತ್ರೆಯನ್ನು ಬಹಿಷ್ಕರಿಸುವುದನ್ನು ಮುಂದುವರೆಸಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹೋಟ್ ಹೇಳಿದ್ದರು.

ಸಂಪಾದಕರು ಯಾತ್ರೆಯನ್ನು ಬಹಿಷ್ಕರಿಸಿದ್ದಾರೆ ಎಂಬುದು ನನ್ನ ಆರೋಪ. ಲಕ್ಷಗಟ್ಟಲೆ ಜನ ಯಾತ್ರೆಗೆ ಸೇರಿದ್ದಾರೆ. ಇಷ್ಟು ದೊಡ್ಡ ಯಾತ್ರೆಯನ್ನು ನೀವು ತೋರಿಸುವುದಿಲ್ಲವೇ? ಎಂದು ರಾಜಸ್ಥಾನ ಮುಖ್ಯಮಂತ್ರಿ ಪ್ರಶ್ನಿಸಿದ್ದರು.

ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ 12 ಪಕ್ಷಗಳ ಪರವಾಗಿ ಮಾತನಾಡಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಇಂಡಿಯಾ ಒಕ್ಕೂಟದ ನಾಯಕರು ಟಿವಿಯ ಕೆಲ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಲಿದ್ದು, ಮಾಧ್ಯಮದ ಉಪ ಸಮಿತಿಯು ಈ ಕುರಿತ ಟಿವಿ ಶೋಗಳು ಮತ್ತು ನಿರೂಪಕರನ್ನು ಪಟ್ಟಿ ಮಾಡಲಿದೆ ಎಂದು ಹೇಳಿದ್ದರು.