ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, 25: ಕಳೆದ 24 ಗಂಟೆಗಳೊಳಗೆ 1,429 ಮಂದಿಗೆ ಕೊರೊನ ದೃಢಪಟ್ಟಿರುವುದರೊಂದಿಗೆ ದೇಶದ ರೋಗಿಗಳ ಸಂಖ್ಯೆ 24,506 ಆಗಿದೆ. 18,668 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. 5063 ಮಂದಿ ಇದುವರೆಗೆ ಗುಣಮುಖವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಕೊರೊನಾ ಪೀಡಿತರಾಗಿ ಮೃತಪಟ್ಟವರ ಸಂಖ್ಯೆ 775ಕ್ಕೇರಿಕೆಯಾಗಿದೆ. ಕಳೆದ 24 ಗಂಟೆಯೊಳಗೆ 57 ಮಂದಿ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಅತೀಹೆಚ್ಚು ವರದಿಯಾಗಿದೆ. ಇಲ್ಲಿ ರೋಗ ಪೀಡಿತರ ಸಂಖ್ಯೆ 6,817 ಆಗಿದೆ. 301 ಮಂದಿ ಮಹಾರಾಷ್ಟ್ರದಲ್ಲಿ ಮೃತಪಟ್ಟಿದ್ದಾರೆ. 840 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದ ಹೊರಗೆ ಗುಜರಾತಿನಲ್ಲಿ 2815 ಮಂದಿಗೆ ಕೊರೊನಾ ದೃಢೀಕರಿಸಲ್ಪಟ್ಟಿದೆ. 265 ಮಂದಿ ಗುಣಮುಖರಾಗಿದ್ದಾರೆ. 127 ಮಂದಿ ಮೃತಪಟ್ಟಿದ್ದಾರೆ. ದಿಲ್ಲಿಯಲ್ಲಿ ರೋಗಪೀಡಿತರ ಸಂಖ್ಯೆ 2514 ಆಗಿದೆ. 53 ಮಂದಿ ಇಲ್ಲಿ ಮೃತಪಟ್ಟಿದ್ದಾರೆ. ತಮಿಳ್ನಾಡು, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶಗಳಲ್ಲಿ ರೋಗಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮೊದಲು ಕೊರನಾ ವೈರಸ್ ಕಂಡು ಬಂದಿದ್ದು ಕೇರಳದಲ್ಲಿ. ಇಲ್ಲಿ ಈವರೆಗೆ 450 ಮಂದಿಗೆ ರೋಗ ದೃಢಪಟ್ಟಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












