ದೇಶದಲ್ಲಿ 2.5 ಲಕ್ಷ ಕೊರೋನ ಸೋಂಕಿತರು; ನಿನ್ನೆ 10,000 ಹೊಸ ಸೋಂಕಿತರು ಪತ್ತೆ

0
407

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.8: ದೇಶದಲ್ಲಿ ಕೊರೋನ ಪೀಡಿತರ ಸಂಖ್ಯೆ ಎರಡೂವರೆ ಲಕ್ಷಕ್ಕೇರಿದೆ. ರವಿವಾರ ಹೊಸದಾಗಿ 10,864 ಜನರಿಗೆ ಸೋಂಕು ತಗುಲಿದೆ. 261 ಮಂದಿ ಮೃತಪಟ್ಟಿದು ಒಟ್ಟು ಮೃತರ ಸಂಖ್ಯೆ 7207ಕ್ಕೆ ಏರಿಕೆಯಾಗಿದೆ. 1.23 ಲಕ್ಷ ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. 1,26,423 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರದ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರವಿವಾರ 3007 ಮಂದಿಗೆ ಹೊಸದಾಗಿ ರೋಗ ದೃಢಪಟ್ಟಿತು. ಇಲ್ಲಿ 85,975 ಮಂದಿ ಕೊರೋನಾ ಸೋಂಕಿತರಿದ್ದಾರೆ. ತಮಿಳ್ನಾಡಿನಲ್ಲಿ 1525 ಮಂದಿಗೆ ಹೊಸದಾಗಿ ಕೊರೋನಾ ಬಾಧಿಸಿದೆ. ಒಟ್ಟು ಇಲ್ಲಿ 31,667 ಮಂದಿ ಸೋಂಕು ಪೀಡಿತರಿದ್ದಾರೆ.

ದಿಲ್ಲಿಯಲ್ಲಿ 1282 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಇಲ್ಲಿ ಕೊರೊನ ಪೀಡಿತರ ಸಂಖ್ಯೆ 28,936ಕ್ಕೆ ತಲುಪಿದೆ. ಗುಜರಾತಿನಲ್ಲಿ 480 ಹೊಸ ರೋಗಿಗಳು ಪತ್ತೆಯಾದರು. ಇಲ್ಲಿ ಒಟ್ಟು 20,097 ಮಂದಿಗೆ ಕೊರೋನಾ ದೃಢಪಟ್ಟಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.