ನ್ಯೂಝಿಲೆಂಡ್‌‌ಗೆ ಕೊರೋನದಿಂದ ಮುಕ್ತಿ: ಕೊನೆಯ ರೋಗಿಯೂ ಡಿಸ್ಚಾರ್ಜ್

0
629

ಸನ್ಮಾರ್ಗ ವಾರ್ತೆ

ವೆಲ್ಲಿಂಗ್ಟನ್,ಜೂ.8: ನ್ಯೂಝಿಲೆಂಡಿನ ಕೊನೆಯ ಕೊರೋನ ರೋಗಿಯು ರೋಗಮುಕ್ತನಾಗಿದ್ದು, ಇದರೊಂದಿಗೆ ನ್ಯೂಝಿಲೆಂಡ್ ಸದ್ಯ ಝೀರೊ ಕೊರೋನ ಪ್ರಕರಣಗಳ ಝೋನ್‍ಗೆ ಬಂದು ಮುಟ್ಟಿದೆ. ನ್ಯೂಝಿಲೆಂಡ್‍ನ ಎಲ್ಲ ಜನರಿಗೆ ಬೇಕಾದ ಸಾಧನೆಯಿದು ಎಂದು ಆರೋಗ್ಯ ವಿಭಾಗದ ಡೈರಕ್ಟರ್ ಜನರಲ್ ಆಶ್ಲಿ ಬ್ಲೂಂಪೀಲ್ಡ್ ಹೇಳಿದರು.

ಫೆಬ್ರುವರಿ 28ರ ನಂತರ ಮೊದಲ ಬಾರಿ ಒಬ್ಬನೇ ಒಬ್ಬ ಕೊರೋನ ಪೀಡಿತನಿಲ್ಲದ ಪರಿಸ್ಥಿತಿ ನ್ಯೂಝಿಲೆಂಡಿನಲ್ಲಾಗಿದೆ. ಇದೊಂದು ಮೈಲುಗಲ್ಲು. ಆದರೆ ಕೊರೋನಾ ವಿರುದ್ಧ ಮುಂಜಾಗ್ರತೆಯಂತೂ ಮುಂದುವರಿಯಲಿದೆ ಎಂದರು. ದಕ್ಷಿಣ ಪೆಸಿಫಿಕ್ ದೇಶ ನ್ಯೂಝಿಲೆಂಡ್ ಆಗಿದ್ದು 1154 ಮಂದಿ ಇಲ್ಲಿ ಕೊರೋನ ಪೀಡಿತರಿದ್ದರು. ಇವರಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ಕೊರೋನ ಯಶಸ್ವಿಯಾಗಿ ಪ್ರತಿರೋಧಿಸಲು ನ್ಯೂಝಿಲೆಂಡಿಗೆ ಸಾಧ್ಯವಾಗಿದ್ದು ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.

ನ್ಯೂಝಿಲೆಂಡಿನಲ್ಲಿ ಕೊರೋನದಲ್ಲಿ ಜಾರಿಗೆ ತಂದ ನಿಯಂತ್ರಣಗಳಲ್ಲಿ ಹೆಚ್ಚಿನ ಸಡಿಲಿಕೆಯನ್ನು ಪ್ರಧಾನಿ ಜಸಿಂತಾ ಆರ್ಡನ್ ಸೋಮವಾರ ಘೋಷಿಸುವರು. ನಾಲ್ಕು ಹಂತಗಳ ಮುನ್ನೆಚ್ಚರಿಕ ವ್ಯವಸ್ಥೆಯಲ್ಲಿ ಅತ್ಯಂಕ ಕೆಳ ಹಂತಕ್ಕೆ ದೇಶ ಪ್ರವೇಶಿಸಲಿದೆ.

ಅಂತಾರಾಷ್ಟ್ರೀಯ ಗಡಿಗಳ ನಿಯಂತ್ರಣ ಮುಂದುವರಿಯುವುದಾದರೂ ದೇಶದಲ್ಲಿ ನಿಯಂತ್ರಣದಲ್ಲಿ ಸಡಿಲಿಕೆಯಾಗಲಿದೆ. ಸಾರ್ವಜನಿಕ ಸಮಾರಂಭಗಳ ನಿಯಂತ್ರಣವು ತೆಗೆದುಹಾಕುವುದರೊಂದಿಗೆ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವುದರಲ್ಲಿಯೂ ಸಡಿಲಿಕೆಯಾಗಲಿದೆ ಎಂದು ವರದಿಯಾಗಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.