ಆರ್ಟಿಕಲ್ 370 ರದ್ದತಿ: ಇಂದು ಸುಪ್ರೀಂಕೋರ್ಟಿನಲ್ಲಿ ವಿಚಾರಣೆ

0
516

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.1: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಇಂದು ಸುಪ್ರೀಂಕೋರ್ಟು ವಿಚಾರಣೆ ನಡೆಸಲಿದೆ.

ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ ಆರ್ಟಿಕಲ್ 370 ರದ್ದು ಪಡಿಸಲಾಗಿದೆ ಎಂಬ ಹನ್ನೊಂದು ಅರ್ಜಿಗಳಲ್ಲಿ ಸುಪ್ರೀಂಕೋರ್ಟು ವಿಚಾರಣೆ ನಡೆಸಲಿದೆ. ಜಸ್ಟಿಸ್ ಎನ್‍ವಿ ರಮಣ ಅಧ್ಯಕ್ಷತೆಯ ಐವರು ಸದಸ್ಯರಿರುವ ಸಂವಿಧಾನಿಕ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಜಸ್ಟಿಸ್ ಎ.ಎಸ್.ಕೌಲ್, ಆರ್.ಸುಭಾಶ್ ರೆಡ್ಡಿ, ಬಿ.ಆರ್ ಗವಾಯ್, ಸೂರ್ಯಕಾಂತ್ ಸಂವಿಧಾನ ಪೀಠದ ಇತರ ಸದಸ್ಯರು.

ಆಗಸ್ಟ್ ಐದಕ್ಕೆ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ನೀಡುವ 370, 35 ಎ ಸಂವಿಧಾನ ಪರಿಚ್ಛೇದವನ್ನು ರಾಷ್ಟ್ರಪತಿ ಆದೇಶ ಮೂಲಕ ಕೇಂದ್ರ ಸರಕಾರ ರದ್ದು ಪಡಿಸಿತ್ತು. ಜಮ್ಮು-ಕಾಶ್ಮೀರ ಲಡಾಕ್ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿತ್ತು. 2019ರ ಜಮ್ಮು-ಕಾಶ್ಮೀರ ಮರುಸಂರಚನೆ ಕಾನೂನು ಪ್ರಕಾರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಅಧಿಕಾರ ಕೇಂದ್ರ ಸರಕಾರಕ್ಕಿಲ್ಲ ಎಂದು ಅರ್ಜಿಗಳು ವಾದಿಸಿವೆ.

ನ್ಯಾಶನಲ್ ಕಾನ್ಫರೆನ್ಸ್ ನಾಯಕ ಮುಹಮ್ಮದ್ ಅಕ್ಬರ್ ಲೋನ್, ಹಸನೈನ್ ಮಸೂದಿ , ಜಮ್ಮು-ಕಾಶ್ಮೀರ ಪೀಪಲ್ಸ್ ಮೂವ್‍ಮೆಂಟ್ ನಾಯಕರಾರದ ಶಾ ಫೈಝಲ್, ಶೆಹ್ಲಾ ರಷೀದ್, ವಕೀಲಾರದ ಶಕೀರ್ ಶಬೀರ್, ಎಂ.ಎಲ್ ಶರ್ಮ, ಸಿಪಿಎಂ ನಾಯಕ ಮುಹಮ್ಮದ್ ಯೂಸುಫ್ ತರಿಗಾಮಿ ಸಹಿತ ಹನ್ನೆರಡು ಅರ್ಜಿಗಳಲ್ಲಿ ಇಂದು ವಿಚಾರಣೆ ಆರಂಭವಾಗಲಿದೆ.