ಆನ್‌ಲೈನ್‌ ಮೂಲಕ ಮಕ್ಕಳ ಮೇಲೆ ಲೈಂಗಿಕ ಶೋಷಣೆ: ದೇಶದಲ್ಲಿ 3 ವರ್ಷಗಳಲ್ಲಿ 24 ಲಕ್ಷ ಪ್ರಕರಣಗಳು ವರದಿ

0
491

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಮೂರು ವರ್ಷಗಳಲ್ಲಿ 24 ಲಕ್ಷದಷ್ಟು ಪ್ರಕರಣಗಳು ವರದಿಯಾಗಿವೆ. ಮಕ್ಕಳ ಲೈಂಗಿಕ ಶೋಷಣೆಯ ದೂರುಗಳಿವು. ಇದರಲ್ಲಿ ಶೇ.80ರಷ್ಟು ಮಕ್ಕಳು 14 ವರ್ಷಕ್ಕಿಂತ ಕೆಳ ವಯೋಮಾನದ ಹೆಣ್ಣುಮಕ್ಕಳೂ ಇದ್ದಾರೆ. ಇದು 2017-20ರ ಇಂಟರ್‌ಪೋಲ್ ವರದಿಯಾಗಿದೆ. ದೇಶದಲ್ಲಿ ಮಕ್ಕಳ ವಿರುದ್ಧ ಆನ್‍ಲೈನ್ ಲೈಂಗಿಕ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬಿಐ ಇಡೀ ದೇಶದಲ್ಲಿ ತನಿಖೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ವೆಬ್‌ಸೈಟ್‍ಳ ಮೇಲೆ ನಿಗಾ ಇರಿಸಲಾಗುತ್ತಿದೆ. ದೇಶದುದ್ದಕ್ಕೂ ಒಂದೇ ದಿನ 76 ಜಾಗಗಳಲ್ಲಿ ತಪಾಸಣೆ ನಡೆಯಿತು. ಸಿಬಿಐ ಈ ತನಿಖೆಯನ್ನು 50ಆನ್‍ಲೈನ್ ಸಾಮಾಜಿಕ ಮಾಧ್ಯಮ ಗ್ರೂಪಗಳನ್ನು ಕೇಂದ್ರೀಕರಿಸಿ ನಡೆಸಿತ್ತು.

ಜಗತ್ತಿನಾದ್ಯಂತ 5000ದಷ್ಟು ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗಿಸಲಾಗುತ್ತಿದೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಗ್ರೂಪಿನಲ್ಲಿ ಪಾಕಿಸ್ತಾನದ 36, ಅಮೆರಿಕ, ಕೆನಡದ ತಲಾ 35 ಮಂದಿ, ಬಾಂಗ್ಲಾದೇಶದ 31, ಶ್ರೀಲಂಕಾದ 30, ನೈಜೀರಿಯದ 28, ಯಮನ್24, ಮಲೇಶ್ಯದ 22 ಮಂದಿ ಈ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂತು. ಆರೋಪಿಗಳನ್ನು ಬಂಧಿಸಲು, ಗ್ರೂಪಗಳ ಉದ್ಭವ ಮೂಲವನ್ನು ಪತ್ತೆ ಹಚ್ಚು ಈ ದೇಶಗಳ ವಿದೇಶ ಕಾನೂನು ನಿರ್ವಹಿಸವ ಏಜೆನ್ಸಿಗಳೊಂದಿಗೆ ಕೇಂದ್ರ ಏಜೆನ್ಸಿ ಚಟುವಟಿಕೆಗಳನ್ನು ಒಗ್ಗೂಡಿಸಲಿದೆ.

ಮಕ್ಕಳ ಅಶ್ಲೀಲ ವೀಡಿಯೊಗಳು, ಚಿತ್ರಗಳು, ಟೆಕ್ಸ್ಟ್‌ಗಳು, ಪೋಸ್ಟುಗಳು, ಲಿಂಕ್‌ಗಳನ್ನು ಸಿಬಿಐ ವಶಪಡಿಸಿತ್ತು. ಇವುಗಳ ಮೂಲಕ ಈ ಗ್ರೂಪ್‍ಗಳು ಹಣ ಕಬಳಿಸುತ್ತಿರುವುದು ಕಂಡು ಬಂತು. ಇಂತಹ ಆನ್‍ಲೈನ್ ಫ್ಲಾಟಫಾರ್ಮ್‍ಗಳಿಗೆ ಜೋಡಿಸಲಾದ ಬ್ಯಾಂಕ್ ಖಾತೆಗಳಿಗೆ ನಿರಂತರ ವರಮಾನ ಬರುತ್ತಿದೆ. ಅಪರಾಧಿಗಳನ್ನು ಪತ್ತೆಹಚ್ಚಲು ಈ ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಳೆದ ದಿವಸ 14 ರಾಜ್ಯಗಳಲ್ಲಿ ಪರಿಶೀಲನೆ ನಡೆದಿತ್ತು. ಇಲ್ಲಿ 77 ಜಾಗಗಳಲ್ಲಿ ಪರಿಶೀಲನೆ ನಡೆಸಿ ಏಳು ಮಂದಿಯನ್ನು ಬಂಧಿಸಲಾಗಿದೆ. ವಿವಿಧ ಪ್ರಕರಣಗಳ 83 ಆರೋಪಿಗಳಿಗಾಗಿ ಶೋಧ ನಡೆಸಿ ಇಲಕ್ಟ್ರಾನಿಕ್ ಡೇಟಾಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಕ್ಕಳ ದಿನಾಚರಣೆಯ ದಿನವಾದ 14ರಂದು ಸಿಬಿಐ ದೇಶದಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿತ್ತು. 23 ಪ್ರತ್ಯೇಕ ಎಫ್‍ಐಆರ್ ದಾಖಲಿಸಲಾಯಿತು. 83 ಆರೋಪಿಗಳ ವಿರುದ್ಧ ಕೇಸು ಹಾಕಲಾಗಿದೆ. ಆಂಧ್ರಪ್ರದೇಶ, ದಿಲ್ಲಿ, ಉತ್ತರಪ್ರದೇಶ, ಪಂಜಾಬ್, ಬಿಹಾರ, ಒಡಿಸ್ಸಾ, ತಮಿಳ್ನಾಡು, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ಹರಿಯಾಣಗಳಲ್ಲಿ ಸಿಬಿಐ ತಪಾಸಣೆ ನಡೆಸಿತು.