ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 35,043, ಸಾವಿನ ಸಂಖ್ಯೆ 1,147

0
387

ಸನ್ಮಾರ್ಗ ವಾರ್ತೆ

ನವದೆಹಲಿ ಮೇ 1- ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶುಕ್ರವಾರ ಬೆಳಗಿನವರೆಗಿನ ಲೆಕ್ಕಾಚಾರದಂತೆ 35,043ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮಂತ್ರಿ ಹೇಳಿದ್ದಾರೆ. ಒಟ್ಟು ಸೋಂಕಿತರಲ್ಲಿ 25,007ಮಂದಿ ಚಿಕಿತ್ಸೆಯಲ್ಲಿದ್ದು, 8888 ಗುಣಮುಖರಾಗಿದ್ದಾರೆ ಮತ್ತು 1147 ಮಂದಿ ಸಾವಿಗೀಡಾಗಿದ್ದಾರೆ ಎಂದು ಸಚಿವರು ಹೇಳಿದರು.

ಆಂಧ್ರಪ್ರದೇಶದಲ್ಲಿ 1403 ಸೋಂಕಿತರಿದ್ದು, ಇವರಲ್ಲಿ 371 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು 31 ಮಂದಿ ಸಾವಿಗೀಡಾಗಿದ್ದಾರೆ. ಅದೇ ವೇಳೆ ಮೇಘಾಲಯದಲ್ಲಿ 12, ಮಣಿಪುರದಲ್ಲಿ 2 ಮತ್ತು ಮಿಜೋರಾಂನಲ್ಲಿ ಒಂದು ಪ್ರಕರಣ ವರದಿಯಾಗಿದೆ. ಮಹಾರಾಷ್ಟ್ರ ಅಪಾಯಕಾರಿ ಹಂತದಲ್ಲಿದ್ದು 10498 ಮಂದಿ ಸೋಂಕಿತರಿದ್ದಾರೆ ಮತ್ತು 459 ಮಂದಿ ಸಾವಿಗೀಡಾಗಿದ್ದು 1773 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮಹಾರಾಷ್ಟ್ರದ ಬಳಿಕ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ಗುಜರಾತಿನಲ್ಲಿ ಹುಟ್ಟು 43904 ಪ್ರಕರಣಗಳು ಪತ್ತೆಯಾಗಿದ್ದು, ದೆಹಲಿಯಲ್ಲಿ 3515 ಪ್ರಕರಣಗಳು ವರದಿಯಾಗಿವೆ. ಮಧ್ಯಪ್ರದೇಶ 2660, ರಾಜಸ್ಥಾನ್ 2584, ತಮಿಳುನಾಡು 2313, ಉತ್ತರ ಪ್ರದೇಶ 2303 ಪ್ರಕರಣಗಳು ಪತ್ತೆಯಾಗಿವೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.