ಸನ್ಮಾರ್ಗ ವಾರ್ತೆ
ಚೆನ್ನೈ, ಫೆ. 20: ಕಮಲ್ ಹಾಸನ್ ನಟಿಸುವ ಸಿನೆಮಾದ ಶೂಟಿಂಗ್ ಸ್ಥಳದಲ್ಲಿ ಕ್ರೇನ್ ಮುರಿದು ಬಿದ್ದು ಮೂವರು ಮೃತಪಟ್ಟಿದ್ದು ಹತ್ತು ಮಂದಿ ಗಾಯಗೊಂಡಿದ್ದಾರೆ. ಇಂಡಿಯನ್ ಟು ಎಂಬ ಸಿನೆಮಾವನ್ನು ಅಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಸಿನಿಮಾನದ ನಿರ್ದೇಶಕ ಶಂಕರ್ ಗೂ ಅಪಘಾತದಲ್ಲಿ ಗಾಯಗಳಾಗಿವೆ. ಅಪಘಾತ ನಡೆಯುವಾಗ ಕಮಲ್ ಹಾಸನ್ ಸೆಟ್ನಲ್ಲಿದ್ದರು.
ಚೆನ್ನೈ ನಗರದ ಸಮೀಪವಿರುವ ಮೂನಾಮಲದ ಇವಿಪಿ ಸ್ಟೇಡಿಯಂನಲ್ಲಿ ರಾತ್ರೆ 9: 30ರ ವೇಳೆಗೆ ಅಪಘಾತ ಸಂಭವಿಸಿದೆ. 150 ಅಡಿ ಎತ್ತರದ ಕ್ರೇನ್ ಮುರಿದು ಬಿದ್ದಿತ್ತು. ಶಂಕರ್ ನಿರ್ದೇಶನದ ಇಂಡಿಯನ್ 2 ಸಿನೇಮಾದಲ್ಲಿ ಕಮಲ್ ಹಾಸನ್, ಕಾಜಲ್ ಅಗರವಾಲ್, ರಾಕುಲ್ ಪ್ರೀತ್, ಸಿದ್ಧಾರ್ಥ, ಪ್ರಿಯಾಭವಾನಿ ನಟಿಸುತ್ತಿದ್ದಾರೆ.












