ತೆರಿಗೆ ಸಂಗ್ರಹ ಇಳಿಮುಖ; ಕೇಂದ್ರ ಸರಕಾರಕ್ಕೆ ಭಾರೀ ಹಿನ್ನಡೆ

0
1000

ಮುಂಬೈ,ಸೆ. 20:ತೆರಿಗೆ ಸಂಗ್ರಹದ ನಿಗದಿತ ಗುರಿಯ ಸಮೀಪ ತಲುಪಲು ಕೇಂದ್ರ ಸರಕಾರ ವಿಫಲವಾಗಿದೆ. ಕಳೆದ ವರ್ಷಕ್ಕಿಂತ 17.5 ಶೇಕಡ ಹೆಚ್ಚು ತೆರಿಗೆ ಸಂಗ್ರಹವನ್ನು ಈ ಬಾರಿ ಗುರಿಯಾಗಿಸಿದರೂ ಈವರೆಗೆ ಶೇ. 4.7ರಷ್ಟೆ ತೆರಿಗೆ ಹೆಚ್ಚಿಸಲು ಸಾಧ್ಯವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಶೇ. 5.25 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದ್ದರೂ ಈ ಸಲ ಅತೀ ಹೆಚ್ಚೆಂದರೆ 5.50 ಕೋಟಿ ರೂಪಾಯಿಯಷ್ಟೇ ಪಡೆಯಲು ಸಾಧ್ಯವಾಗಿದೆ.

ಆರ್ಥಿಕ ಬೆಳವಣಿಗೆ ಮಾಂದ್ಯ ತೆರಿಗೆ ಸಂಗ್ರಹಕ್ಕೆ ಬಾಧಕವಾಗಿ ಪರಿಣಮಿಸಿದ್ದು ಈಗ ಶೇ.5 ಜಿಡಿಪಿ ಇದೆ. ಕಳೆದ ಆರು ವರ್ಷದಲ್ಲಿ ಅತೀ ಕಡಿಮೆ ದರ ಇದು. ಒಟ್ಟು ಸಿಕ್ಕಿದ 5.50 ಲಕ್ಷ ಕೋಟಿಯಲ್ಲಿ ಮುಂಚಿತ ತೆರಿಗೆ ಶೇ.7.3 ಆಗಿದೆ. ಕಳೆದ ವರ್ಷ 2.05 ಲಕ್ಷ ಕೋಟಿಯಾಗಿದ್ದುದು ಈ ವರ್ಷ 2.20 ಕೋಟಿ ರೂಪಾಯಿಯಾಗಿದೆ. ನೇರ ತೆರಿಗೆ 17.5 ಶೇಕಡ ಸಂಗ್ರಹಕ್ಕೆ ಬಜೆಟ್‍ನಲ್ಲಿ ಗುರಿಯಾಗಿರಿಸಲಾಗಿತ್ತು. ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಶೇ. 15ರಷ್ಟು ಹೆಚ್ಚಳದ ಗುರಿ ಇಡಲಾಗಿತ್ತು.

ತೆರಿಗೆ ಸಂಗ್ರಹದಲ್ಲಿ ಕುಸಿತ ಸರಕಾರದ ಪರಿಹಾರ ಕಾರ್ಯಕ್ರಮಗಳಿಗೆ ಅಡ್ಡಿಯಾಗಲಿದೆ. ಬಜೆಟ್‍ನಲ್ಲಿ ಮೀಸಲಿರಿಸಿದ ಹಣದಲ್ಲಿ ಶೇ.77ರಷ್ಟು ಕಳೆದ ಜುಲೈಯಲ್ಲಿ ಖರ್ಚು ಮಾಡಿದ ಪರಿಸ್ಥಿತಿಯಲ್ಲಿ ಇದು ತೀರ ಕಷ್ಟದ ಸ್ಥಿತಿಯನ್ನು ನಿರ್ಮಿಸಿದೆ. ಅಂದರೆ ಈ ಅವಧಿಯೊಳಗೆಯೇ ಶೇ.1.4ರಷ್ಟು ಹೆಚ್ಚು ಮೊತ್ತ ಖರ್ಚು ಆಗಿದೆ. ಆರ್ಥಿಕ ವರ್ಷದಲ್ಲಿ ಒಟ್ಟು7,03,760 ಕೋಟಿರೂ ಪಾಯಿ ಖರ್ಚು ಮಾಡಲು ಗುರಿಯಿತ್ತು. ಆದರೆ ಜುಲೈ ಆದಾಗ ಖರ್ಚು 5,47,605ರೂಪಾಯಿ ಖರ್ಚು ಆಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಪ್ರತ್ಯಕ್ಷ ತೆರಿಗೆ ಸಂಗ್ರಹ ಗುರಿ 12 ಲಕ್ಷ ಕೋಟಿಯಾಗಿದ್ದರೂ ಸಂಗ್ರಹವಾಗಿದ್ದು 50,000 ಕೋಟಿ ಆಗಿದೆ.