ಅತೀ ಉದ್ದದ ಇಫ್ತಾರ್ ಟೇಬಲ್: ದುಬೈಯಲ್ಲಿ ಹೀಗೂ ವಿಶ್ವ ದಾಖಲೆ!

0
668

ದುಬೈ,ಮಾ 21: ಯುಎಇಯಲ್ಲಿ ಜೋಗಿಂದರ್ ಸಿಂಗ್ ಸಲಾರಿಯಾರ ಅಬುಧಾಬಿಯ ಪಿಸಿಟಿ ಹ್ಯೂಮೆನಿಟಿ ಎಂಬ ಸಂಘಟನೆ ಅತಿ ಉದ್ದದ ಇಫ್ತಾರ್ ಟೇಬಲ್‍ನಲ್ಲಿ ಇಫ್ತಾರ್ ಮಾಡಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆಯಿಸಿಕೊಂಡಿದೆ. ಲಾಂಗೆಸ್ಟ್ ಲೈನ್ ಆಫ್ ಹಂಗರ್ ರಲೀಫ್ ಪ್ಯಾಕೇಜ್ ಎಂಬ ಹೆಸರಿನಲ್ಲಿ ಇಫ್ತಾರ್ ಕೂಟ ದಾಖಲೆ ಬರೆಯಿತು. ಶಾಕಾಹಾರಕ್ಕೆ ಜನರನ್ನು ಪಿಸಿಟಿ ಹ್ಯೂಮೆನಿಟಿ ಪ್ರೇರೇಪಿಸುತ್ತಿದ್ದು ಪ್ರತಿದಿನ ದುಬೈ ಇಂಟರ್‌ ನ್ಯಾಷನಲ್ ಪಾರ್ಕಿನಲ್ಲಿ ಇಫ್ತಾರ್ ಏರ್ಸುಪಡಿಸುತ್ತಿದೆ. ಒಂದು ಕಿಲೋ ಮೀಟರ್ ಉದ್ದದ ಸಾಲಿನಲ್ಲಿ ಇಫ್ತಾರಿನ ಆಹಾರವನ್ನು ಸಂಸ್ಥೆ ಸರಬರಾಜು ಮಾಡಿತು. ಇಫ್ತಾರ್ ಆಯೋಜಕ ಸಲಾರಿಯಾರವರು “ಜನರನ್ನು ಶಾಕಾಹಾರದತ್ತ ಪ್ರೇರೇಪಿಸುವುದಕ್ಕೆ ಹಾಗೂ ಜನರು ಆರೋಗ್ಯವಂತರಾಗಿರಬೇಕು ಮತ್ತು ಪ್ರಾಣಿಗಳ ರಕ್ಷಣೆಯಾಗಬೇಕು ಎನ್ನುವ ಸಂದೇಶದೊಂದಿಗೆ ಇಫ್ತಾರ್ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.