ಅನಧಿಕೃತ ಆಸ್ತಿ ಸಂಪಾದನೆ: ಮುಲಾಯಂ ಸಿಂಗ್ ಯಾದವ್, ಅಖಿಲೇಶ್‍ಗೆ ಸಿಬಿಐ ಕ್ಲೀನ್ ಚಿಟ್

0
566

ಹೊಸದಿಲ್ಲಿ, ಮೇ 21: ಅನಧಿಕೃತ ಆಸ್ತಿ ಪ್ರಕರಣದಲ್ಲಿ ಸಮಾಜವಾದಿ ಪಾರ್ಟಿ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರರಾದ ಅಖಿಲೇಶ್ ಯಾದವ್, ಪ್ರತೀಕ್ ಯಾದವ್‍ರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ಸುಪ್ರೀಂಕೋರ್ಟಿನಲ್ಲಿ ಅಫಿದಾವಿತ್ ಸಲ್ಲಿಸಿ ಕ್ಲೀನ್ ಚಿಟ್ ನೀಡಿದೆ. ಮುಲಾಯಂ ಸಿಂಗ್ ಯಾದವ್‍ರ ಪುತ್ರರ ಪ್ರಕರಣದಲ್ಲಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಆರೋಪಗಳು ನಿರಾಧಾರ ಎಂದು ತಿಳಿದು ಬಂದಿದೆ. 2013ರ ಆಗಸ್ಟ್ ನಂತರ ಇವರ ವಿರುದ್ಧ ಯಾವ ತನಿಖೆಯೂ ನಡೆದಿಲ್ಲ ಎಂದು ಸಿಬಿಐ ಕೋರ್ಟಿಗೆ ತಿಳಿಸಿದೆ.