ಸನ್ಮಾರ್ಗ ವಾರ್ತೆ
ಜಿನೇವಾ ಏಪ್ರಿಲ್ 21- ಕಳೆದ ವರ್ಷದ ಕೊನೆಯಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾವು ಯಾವುದೇ ಲ್ಯಾಬಿನಲ್ಲಿ ಕೃತಕವಾಗಿ ಸೃಷ್ಟಿಯಾದ ವೈರಸ್ ಅಲ್ಲ, ಅದರ ಮೂಲ ಬಾವಲಿ ಎಂಬುದಾಗಿ ಲಭ್ಯವಿರುವ ಸಾಕ್ಷ್ಯಗಳ ಆಧಾರದಲ್ಲಿ ತಿಳಿದುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊರೋನಾವು ಚೀನಾದ ವುಹಾನ್ ನ ಲಾಬ್ ಒಂದರಲ್ಲಿ ಸೃಷ್ಟಿಯಾದ ಮಾನವಜನ್ಯ ವೈರಸ್ ಎಂದು ಹೇಳುತ್ತಿರುವುದರ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆ ಈ ಸ್ಪಷ್ಟೀಕರಣವನ್ನು ನೀಡಿದೆ.
ಲಭ್ಯವಿರುವ ಎಲ್ಲಾ ಸಾಕ್ಷ್ಯಗಳ ಆಧಾರದಲ್ಲಿ ಹೇಳುವುದಾದರೆ ಕೊರೋನಾ ವೈರಸ್ ಪ್ರಾಣಿಜನ್ಯವೇ ಹೊರತು ಮಾನವಜನ್ಯ ಅಲ್ಲ ಮತ್ತು ಯಾವುದೇ ಲ್ಯಾಬ್ ನಲ್ಲಿ ಅದು ತಯಾರಾಗಿಲ್ಲಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಫ್ಯಾಡೆಲಾ ಚೈಬ್ ಹೇಳಿರುವುದಾಗಿ ಜಿನೆವಾ ನ್ಯೂಸ್ ವರದಿ ಮಾಡಿದೆ. ಕೊರೋನಾ ವೈರಸ್ಸಿನ ಮೂಲ ಪ್ರಾಣಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












