ಸನ್ಮಾರ್ಗ ವಾರ್ತೆ
ಅಮೆರಿಕಾದ ನ್ಯೂ ಜರ್ಸಿ ರಾಜ್ಯದಲ್ಲಿ ಭಾರತ ಸಂಜಾತೆ ಲುಬ್ನಾ ಕಾಝಿ ಚೌಧರಿ ಅವರನ್ನು ನ್ಯಾಯಾಧೀಶರಾಗಿ ನೇಮಿಸಲಾಗಿದೆ. ಈ ರಾಜ್ಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಮೊಟ್ಟ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಗವರ್ನರ್ ಫಿಲಿಪ್ ಮರ್ಫಿ ಅವರು ಜನವರಿ ಆರರಂದು ಲುಬ್ನಾ ಅವರನ್ನು ನ್ಯಾಯಾಧೀಶರಾಗಿ ನಾಮನಿರ್ದೇಶನ ಮಾಡಿದ್ದಾರೆ.
ಮಹಾರಾಷ್ಟ್ರದವರಾದ ಲುಬ್ನಾ ಅವರು ವೆಸ್ಟರ್ನ್ ಸ್ಟೇಟ್ ಕಾಲೇಜ್ ಆಫ್ ಲಾ ದಿಂದ ಪದವೀಧರರಾಗಿದ್ದಾರೆ. ಇವರು ಪವಿತ್ರ ಕುರ್ ಆನಿನ ಮೇಲೆ ಕೈಯಿಟ್ಟು ಪ್ರಮಾಣವಚನ ಸ್ವೀಕರಿಸಿದ್ದಾರೆ . ಆ ಕಾರಣದಿಂದಾಗಿ ಈ ಸಮಾರಂಭವು ಹೆಚ್ಚು ಮಹತ್ವವನ್ನು ಪಡೆದಿತ್ತು.
ಭಾರತೀಯ ಸಮುದಾಯದವರು ಮತ್ತು ಕಾನೂನು ಪರಿಣತರು ಲುಬ್ನಾ ಅವರು ನ್ಯಾಯಾಧೀಶೆಯಾಗಿರುವುದನ್ನು ಶ್ಲಾಘಿಸಿದ್ದಾರೆ.












