ಸನ್ಮಾರ್ಗ ವಾರ್ತೆ
ಕಳೆದ ತಿಂಗಳು ದೆಹಲಿಯ ತುರ್ಕುಮಾನ್ ಗೇಟ್ ನ ಪೈಝೆ ಇಲಾಹಿ ಮಸೀದಿಯ ಬಳಿ ತೆರವು ಕಾರ್ಯಾಚರಣೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯ ಆರೋಪದಲ್ಲಿ ಬಂಧನಕ್ಕೇ ಈಡಾಗಿದ್ದ 12 ಮಂದಿಗೆ ದೆಹಲಿ ಕೋರ್ಟು ಜಾಮೀನು ಮಂಜೂರು ಮಾಡಿದೆ. ಬಂಧಿತದ ಮೇಲಿನ ಆರೋಪವನ್ನು ಸಾಬೀತುಪಡಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಪೊಲೀಸರು ಹೊರಿಸಿದ ಆರೋಪಕ್ಕೆ ಪೂರಕವಾಗಿ ದೃಶ್ಯಗಳ ಕೊರತೆ ಮತ್ತು ಪೊಲೀಸರಿಗೆ ಯಾವುದೇ ಗಂಭೀರ ಗಾಯಗಳು ಆಗಿಲ್ಲದಿರುವುದನ್ನು ನ್ಯಾಯಾಧೀಶರು ಎತ್ತಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದ ಬಹಿರಂಗ ಬಳಕೆಯನ್ನು ತೋರಿಸುವ ಯಾವುದೇ ಪುರಾವೆಯನ್ನು ಪೊಲೀಸರು ಸಮರ್ಪಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕಳೆದ ಜನವರಿ 6 ಮತ್ತು 7ರಂದು ಮಧ್ಯರಾತ್ರಿ ರಾಮಲೀಲಾ ಮೈದಾನ ಪ್ರದೇಶದ ಮಸೀದಿಯ ಬಳಿ ಅತಿಕ್ರಮಣ ವಿರೋಧಿ ಅಭಿಯಾನದ ಹೆಸರಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ದೆಹಲಿ ಪೊಲೀಸರು 20 ಮಂದಿಯನ್ನು ಬಂಧಿಸಿದ್ದರು.
ಇದೇ ವೇಳೆ ಈ ಆರೋಪಿತರನ್ನು ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿಸಲಾಗಿಲ್ಲ. ಎರಡು ದಿನಗಳ ಬಳಿಕ ಬೇರೆ ಸ್ಥಳದಿಂದ ಬಂಧಿಸಲಾಗಿದೆ ಎಂದು ಆರೋಪಿಗಳ ಪರವಾಗಿರುವ ವಕೀಲರು ವಾದಿಸಿದರು.












