ಭಾರತದ ಅಮೆರಿಕ ದೂತವಾಸದಿಂದ ಭಾರತಕ್ಕೆ ವೀಸಾ ರದ್ದು

0
556

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಮಾ.12: ಎಪ್ರಿಲ್ 15ರ ವರೆಗೆ ಭಾರತದ ವೀಸಾವನ್ನು ಅಮೆರಿಕದ ಭಾರತ ದೂತವಾಸ ತಾತ್ಕಾಲಿಕವಾಗಿ ರದ್ದು ಪಡಿಸಿದ್ದು ಮಾರ್ಚ್ 13ರಿಂದ ಇದು ಜಾರಿಗೆ ಬರಲಿದೆ. ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಿಂದ ರಾಜತಾಂತ್ರಿಕ, ಅಧಿಕೃತ ಪ್ರಯಾಣಗಳಿಗಾಗಿರುವ ಎಲ್ಲ ವೀಸಾಗಳನ್ನು ಭಾರತ ಸರಕಾರ ತಾತ್ಕಾಲಿಕವಾಗಿ ರದ್ದುಪಡಿಸಿದೆ. ಓವರ್‍ಸೀಸ್ ಸಿಟಿಝನ್‍ಶಿಪ್ ಆಫ್ ಇಂಡಿಯ (ಒಸಿಐ) ಕಾರ್ಡ್ ಕೈವಶದಲ್ಲಿರುವ ಪ್ರಜೆಗಳು ಎಪ್ರಿಲ್ ಹದಿನೈದರವರೆಗೆ ಪ್ರಯಾಣ ಸ್ಥಗಿತಗೊಳಿಸಬೇಕೆಂದು ಧೂತವಾಸ ಹೇಳಿದೆ. ವಿಶ್ವ ಆರೋಗ್ಯ ಸಂಘಟನೆ ಕೋವಿಡ್ 19(ಕೊರೊನಾ)ವನ್ನು ಮಹಾಮಾರಿ ಎಂದು ಘೋಷಿಸಿದ ನಂತರ ಸರಕಾರ ಈ ಕ್ರಮಕ್ಕೆ ಸಿದ್ಧವಾಗಿದೆ.

ಚೀನದ ವುಹಾನ್‍ನಲ್ಲಿ ಮೊದಲು ಕಾಣಿಸಿಕೊಂಡ ವೈರಸ್ ಶೇ.90 ದೇಶಗಳಲ್ಲಿ 1,10,000 ಜನರಿಗೆ ಬಾಧಿಸಿದೆ. ಫೆಬ್ರವರಿ 15ರ ನಂತರ ಚೀನ, ಇಟಲಿ, ಇರಾನ್, ರಿಪಬ್ಲಿಕ್ ಆಫ್ ಕೊರಿಯ, ಫ್ರಾನ್ಸ್, ಸ್ಪೈನ್, ಜರ್ಮನಿ ಮುಂತಾದ ದೇಶಗಳಿಂದ ಬರುವ ಅಥವಾ ಸಂದರ್ಶಿಸಿ ಬಂದ ಭಾರತದ ಪ್ರಜೆಗಳು ಹದಿನಾಲ್ಕು ದಿವಸಗಳ ಕಾಲ ಹೊರಜಗತ್ತಿನ ಸಂಪರ್ಕದಿಂದ ದೂರ ವಿರಬೇಕೆಂದು ಸರಕಾರ ಸೂಚಿಸಿದೆ.