ಹಾಲಿವುಡ್ ನಟ ಟಾಂ ಹ್ಯಾಕ್ಸ್ ಮತ್ತು ಪತ್ನಿಗೆ ಕೊರೊನಾ

0
625

ಸನ್ಮಾರ್ಗ ವಾರ್ತೆ

ಸಿಡ್ನಿ, ಮಾ. 12: ಹಾಲಿವುಡ್ ಸೂಪರ್ ತಾರೆ ಟಾಮ ಹಾಕ್ಸ್ ಮತ್ತು ಪತ್ನಿ ರಿಟಾ ವಿಲ್ಸನ್‍ರಿಗೆ ಕೊರೊನಾ ತಗಲಿರುವುದು ದೃಢಪಟ್ಟಿದೆ. ಈ ಕುರಿತು ಅವರೇ ಟ್ವೀಟ್ ಮಾಡಿ ತಿಳಿಸಿದ್ದು ಈಗ ಆಸ್ಟ್ರೇಲಿಯದಲ್ಲಿ ಯಸೊಲೇಶನ್ ವಾರ್ಡಿನಲ್ಲಿ ನಿಗಾದಲ್ಲಿದ್ದಾರೆ. ಜ್ವರ, ನೆಗಡಿಗಾಗಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. “ನಾನು, ರೀಟಾ ಆಸ್ಟ್ರೇಲಿಯದಲ್ಲಿದ್ದೆವು. ಶೀತ ನೆಗಡಿ, ಜ್ವರದಿಂದ ನಾವು ಇಬ್ಬರು ಬಳಲಿದ್ದೆವು. ವಿಷಯ ಏನೆಂದು ಪತ್ತೆ ಮಾಡಲು ಕೊರೊನಾ ವೈರಸ್ ಕುರಿತು ಪರೀಕ್ಷೆ ಮಾಡಿಸಿಕೊಂಡೆವು. ಇದರಲ್ಲಿ ಕೊರೊನಾ ವೈರಸ್ ತಗಲಿದ್ದು ದೃಢಪಟ್ಟಿತು ಎಂದು ಹಾಕ್ಸ್ ಟ್ವೀಟ್ ಮಾಡಿದ್ದಾರೆ.

ವೈದ್ಯಾಧಿಕಾರಿಗಳ ನಿಬಂಧನೆಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಸಾರ್ವಜನಿಕರ ಆರೋಗ್ಯ, ಸುರಕ್ಷೆಯನ್ನು ಗಮನದಲ್ಲಿಟ್ಟು ನಾವು ನಿಗಾದದಲ್ಲಿ ಮುಂದುವರಿದಿದ್ದೇವೆ. ಹೆಚ್ಚಿನ ವಿವರಗಳನ್ನು ಟ್ವೀಟ್ ಮಾಡಿ ತಿಳಿಸುವೆ ಎಂದು ಟಾಂ ಹೇಳಿದ್ದಾರೆ. ಕೊರೊನಾ ಇದೆ ಎಂದು ಹೇಳುವ ಮೊದಲ ಬಾಲಿವುಡ್ ನಟ ಹಾಕ್ಸ್ ಆಗಿದ್ದಾರೆ. ಜಗತ್ತಿನಾದ್ಯಂತ 1.25 ಲಕ್ಷ ಜನರಿಗೆ ರೋಗ ಬಾಧೆ ತಗಲಿದ್ದು ಇದುವರೆಗೆ 4000 ಮಂದಿ ಮೃತಪಟ್ಟಿದ್ದಾರೆ.