ರಷ್ಯದ ಮೂಲಕ ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕರೆ ತರುವ ಯತ್ನ ಆರಂಭ

0
214

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರಷ್ಯದ ಮೂಲಕ ಉಕ್ರೇನಿಲ್ಲಿರುವ ಭಾರತೀಯರನ್ನು ಹುಟ್ಟೂರಿಗೆ ಕರೆತರುವ ಪ್ರಯತ್ನ ಆರಂಭವಾಗಿದೆ ಎಂಬುದಾಗಿ ವರದಿಯಾಗಿದೆ. ಪಶ್ಚಿಮ ಗಡಿಯ ಮೂಲಕ ಆರು ವಿಮಾನಗಳು ಮತ್ತು ಸಾವಿರಾರು ಮಂದಿಯನ್ನು ತೆರವುಗೊಳಿಸುವ ಕಾರ್ಯ ಪೂರ್ಣಗೊಂಡ ಬೆನ್ನಲ್ಲೇ ಯುದ್ಧವು ತೀವ್ರಗೊಂಡಿರುವ ಪೂರ್ವ ಭಾಗದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸುವ ಸಲುವಾಗಿ ಭಾರತ ರಷ್ಯವನ್ನು ಸಂಪರ್ಕಿಸಿದೆ. ಕೇಂದ್ರ ವಿದೇಶ ಕಾರ್ಯದರ್ಶಿ ಹರ್ಷ್ ವರ್ಧನ್ ರಷ್ಯದ ಮೂಲಕ ಭಾರತೀಯರನ್ನು ಕರೆತರುವ ಸಲುವಾಗಿ ರಷ್ಯದ ರಾಯಭಾರಿಯ ಜೊತೆ ಚರ್ಚಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದರ ಆಧಾರದಲ್ಲಿ ರಷ್ಯದ ಭಾರತೀಯ ದೂತವಾಸ ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ಗಡಿಗೆ ಕಳುಹಿಸಲಾಗಿದೆ. ಇದು ಅಲ್ಲದೆ ಮೊಲ್ಡೊವ ಮೂಲಕ ಕೂಡ ಭಾರತೀಯರನ್ನು ಕರೆತರುವ ಸಲುವಾಗಿ ಮೊಲ್ಡೊವ ವಿದೇಶ ಸಚಿವರಿಗೆ ಕರೆ ಮಾಡಿದ್ದಾರೆ. ಇದುವರೆಗೆ ಹಂಗರಿ ರುಮೇನಿಯದ ಸಮೀಪದಲ್ಲಿದ್ದವರನ್ನು ಯುಕ್ರೇನಿನಿಂದ ಕರೆತರಲಾಗಿದೆ. ರಷ್ಯ ಮತ್ತು ಯುಕ್ರೇನಿನ ರಾಯಭಾರಿಗಳನ್ನು ಕರೆಯಿಸಿಕೊಂಡು ಭಾರತೀಯರ ಸುರಕ್ಷೆಯ ಕುರಿತು ಚರ್ಚಿಸುವ ಕಾರ್ಯವೂ ಆಗಿದೆ. ಭಾರತದ ವಿದ್ಯಾರ್ಥಿಗಳಿರುವ ಸ್ಥಳಗಳು ಯಾವುದೆಂದು ಇಬ್ಬರು ರಾಯಭಾರಿಗಳಿಗೂ ತಿಳಿಸಲಾಗಿದ್ದು ಇಬ್ಬರೂ ಸುರಕ್ಷೆ ನೀಡಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ.

ಕೆಲವು ವಿದ್ಯಾರ್ಥಿಗಳ ರಷ್ಯದ ಮೂಲಕ ತೆರವುಗೊಳಿಸಬೇಕೆಂದು ಮನವಿ ಮಾಡಿದ್ದರು. ಇದು ಕೇಂದ್ರ ಸರಕಾರದ ಗಮನಕ್ಕೆ ತರಲಾಗಿತ್ತು. ಆಪರೇಷನ್ ಗಂಗಾ ಎಂಬ ಹೆಸರಿನಲ್ಲಿ ಭಾರತೀಯರನ್ನು ಕರೆತರುವ ಕಾರ್ಯಕ್ಕೆ ಹೆಸರಿಸಲಾಗಿದೆ. ಇದರ ಭಾಗವಾಗಿ ಆರು ವಿಮಾನಗಳನ್ನು ನಿಯೊಜಿಸಿದ್ದು, ಎರಡು ವಿಮಾನಗಳು ಸೋಮವಾರ ದಿಲ್ಲಿಗೆ ಭಾರತೀಯರನ್ನು ಕರೆ ತರುತ್ತದೆ ಎಂದು ವಿದೇಶ ಕಾರ್ಯದರ್ಶಿ ತಿಳಿಸಿದ್ದಾರೆ. 20,000ದಷ್ಟು ಭಾರತೀಯರು ಯುಕ್ರೇನಿನಲ್ಲಿದ್ದಾರೆ ಎನ್ನಲಾಗುತ್ತಿದೆ. ಭಾರತೀಯರನ್ನೊಳಗೊಂಡ ಎರಡು ವಿಮಾನಗಳು ರವಿವಾರ ಯುಕ್ರೇನಿನಿಂದ ದಿಲ್ಲಿಗೆ ತಲುಪಿವೆ.