ಕಾಶ್ಮೀರ ವಿಷಯ: ದೇಶದ ಪರಮಾಧಿಕಾರವನ್ನು ಗೌರವಿಸಬೇಕು- ಚೀನಕ್ಕೆ ಪ್ರತ್ಯುತ್ತರ ನೀಡಿದ ಭಾರತ

0
589

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.28: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ಭಾರತ-ಪಾಕಿಸ್ತಾನ ಸಮಸ್ಯೆಯ ಕುರಿತು ಪ್ರತಿಪಾದಿಸಿದ ಚೀನಕ್ಕೆ ಭಾರತ ಉತ್ತರ ನೀಡಿದೆ.

ಜಮ್ಮು-ಕಾಶ್ಮೀರ, ಲಡಾಕ್ ಭಾರತದ ಅವಿಭಾಜ್ಯ ಭಾಗವಾಗಿದೆ. ಇತರ ದೇಶಗಳು ಭಾರತದ ಸಾರ್ವಭೌಮ ಅಧಿಕಾರವನ್ನು ಗೌರವಿಸುತ್ತಿರೆಂದು ನಿರೀಕ್ಷಿಸುತ್ತೇವೆ. ಜಮ್ಮು-ಕಾಶ್ಮೀರದಲ್ಲಿ ನಡೆಯುವ ವಿಷಯಗಳು ಸಂಪೂರ್ಣ ದೇಶದ ಆಂತರಿಕ ವಿಚಾರಗಳಾಗಿವೆ ಎಂದು ಭಾರತದ ವಿದೇಶ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನ ಅಧೀನ ಕಾಶ್ಮೀರದಲ್ಲಿ ಚೀನ-ಪಾಕಿಸ್ತಾನಗಳ ಆರ್ಥಿಕ ಯೋಜನೆ ಕಾನೂನು ಬಾಹಿರವಾಗಿದೆ. ಇತರ ಮಾರ್ಗಗಳಿಂದ ಕಾಶ್ಮೀರದಲ್ಲಿ ಯಥಾಸ್ಥಿತಿಯಲ್ಲಿ ಬದಲಾವಣೆ ತರುವ ಯತ್ನದಿಂದ ಚೀನ ಹಿಂದೆ ಸರಿಯಬೇಕೆಂದು ಭಾರತ ಆಗ್ರಹಿಸಿತು.

ಪಶ್ಚಿಮ ಚೀನದ ಕಷ್‍ಗರದಲ್ಲಿ ಪಾಕಿಸ್ತಾನದ ಗ್ರಾಡರ್ ಬಂದರನ್ನು ಸೇರಿಸುವ 3000 ಕಿಲೊಮೀಟರ್ ದೂರದ 5000ಕೋಟಿ ಡಾಲರ್ ವೆಚ್ಚದ ಯೋಜನೆ ರೂಪುಗೊಳ್ಳುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಈ ಮಾರ್ಗ ಸಾಗುತ್ತಿದೆ. ಭಾರತ ಇದನ್ನು ಆರಂಭದಿಂದಲೂ ವಿರೋಧಿಸುತ್ತಿದೆ.

ಜಮ್ಮು-ಕಾಶ್ಮೀರದ ಸಮಸ್ಯೆ ವಿಶ್ವಸಂಸ್ಥೆ ಚಾರ್ಟರ್ ಭದ್ರತಾ ಸಮಿತಿ ಗೊತ್ತುವಳಿಯಂತೆ ದ್ವಿಪಕ್ಷೀಯ ಒಪ್ಪಂದದಂತೆ ಶಾಂತಿ ಪೂರ್ವಕವಾಗಿ ವ್ಯವಹರಿಸಬೇಕಾಗಿದೆ. ಕಾಶ್ಮೀರದ ಯಥಾಸ್ಥಿತಿಯಲ್ಲಿ ಬದಲಾವಣೆ ತರುವ ಏಕಪಕ್ಷೀಯ ಕ್ರಮಗಳನ್ನು ಭಾರತ ಕೈಗೊಳ್ಳಬಾರದೆಂದು ಚೀನದ ವಿದೇಶ ಸಚಿವ ವಾಂಗ್ ಯಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.