ಭಾರತ-ಚೀನಾ ಸಂದಿಗ್ಧ ಪರಿಸ್ಥಿತಿ: ಸರ್ವ ಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಿಂದ ಪ್ರಧಾನಿ ಮೋದಿಗೆ ಖಾರ ಪ್ರಶ್ನೆಗಳು; ಚೀನಿಯರ ಕಣ್ಣನ್ನು ಕಿತ್ತು ಕೈಯಲ್ಲಿ ಕೊಡುವ ಶಕ್ತಿ ಮೋದಿ ಸರಕಾರಕ್ಕಿದೆ ಎಂದ ಉದ್ಧವ್ ಠಾಕ್ರೆ

0
666

ಸನ್ಮಾರ್ಗ ವಾರ್ತೆ

ನವದೆಹಲಿ,ಜೂ.19: ಭಾರತೀಯ ಸೈನಿಕರ ಹುತಾತ್ಮತೆ ಮತ್ತು ಗಾಲ್ವಾನ್‌ನಲ್ಲಿ ಚೀನಾದ ಸೈನಿಕರ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ಕರೆ ನೀಡಿದ ಸರ್ವ ಪಕ್ಷಗಳ ಸಭೆಯಲ್ಲಿ ಹೆಚ್ಚಿನ ಪಕ್ಷಗಳು ಸರ್ಕಾರವನ್ನು ಸೇರಿಕೊಂಡವು. ಈ ಸಭೆಗೆ 20 ಪಕ್ಷಗಳನ್ನು ಆಂಮತ್ರಿಸಲಾಗಿತ್ತು. ಈ ಪೈಕಿ 10 ಪಕ್ಷಗಳು ಸರ್ಕಾರವನ್ನು ಬಹಿರಂಗವಾಗಿ ಬೆಂಬಲಿಸಿದವು ಮತ್ತು ಈ ಸಮಯದಲ್ಲಿ ನಾವೆಲ್ಲರೂ ಒಟ್ಟಾಗಿರುತ್ತೇವೆ ಎಂದು ಹೇಳಿದರು. ಇದರಲ್ಲಿ ತೃಣಮೂಲ, ಜೆಡಿಯು, ಬಿಜೆಡಿಯಂತಹ ಪಕ್ಷಗಳು ಸೇರಿದ್ದವು.

ಭಾರತವು ಪ್ರಬಲವಾಗಿದೆ, ಬಲಹೀನವಾಗಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಚೀನೀಯರ ಕಣ್ಣನ್ನು ಕಿತ್ತು ಅದನ್ನು ಅವರ ಕೈಯಲ್ಲಿ ನೀಡುವ ಶಕ್ತಿ ನಮ್ಮ ಸರ್ಕಾರದಲ್ಲಿ ಇದೆ ಎಂದು ಅವರು ಚೀನಾಕ್ಕೆ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತ್ರ ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಗುಪ್ತಚರ ವರದಿ, ಉಪಗ್ರಹ ಚಿತ್ರದ ಬಗ್ಗೆ ಅವರು ಮೋದಿಯವರಿಂದ ಮಾಹಿತಿ ಕೋರಿದರು.

ಸೋನಿಯಾ ಅವರ ಮೂರು ಪ್ರಶ್ನೆಗಳು
1. ಈ ಸಭೆ ಬಹಳ ಹಿಂದೆಯೇ ನಡೆದಿರಬೇಕಿತ್ತು. ಈ ವೇದಿಕೆ ತುಂಬಾ ಕತ್ತಲೆಯಲ್ಲಿದೆ. ಚೀನಾದ ಸೈನಿಕರು ಯಾವಾಗ ನುಸುಳಿದರು ಎಂದು ಮೋದಿ ಸರ್ಕಾರ ಹೇಳಬೇಕು? ಈ ಬಗ್ಗೆ ಸರ್ಕಾರ ಯಾವಾಗ ತಿಳಿದುಕೊಂಡಿತು?

2. ಸರ್ಕಾರಕ್ಕೆ ಉಪಗ್ರಹ ಚಿತ್ರವಿರಲಿಲ್ಲವೇ? ಈ ಅಸಾಮಾನ್ಯ ಚಟುವಟಿಕೆಗಳ ಬಗ್ಗೆ ಯಾವುದೇ ಗುಪ್ತಚರ ವರದಿಗಳು ಇರಲಿಲ್ಲವೇ?

3. ಮೌಂಟೇನ್ ಸ್ಟ್ರೈಕ್ ಕೋರ್‌ ನ ಪ್ರಸ್ತುತ ಸ್ಥಿತಿ ಏನು?ದೇಶದಲ್ಲಿ ಮೊದಲಿನಂತೆ ಗಡಿಯಲ್ಲಿ ಪರಿಸ್ಥಿತಿ ಸ್ಥಾಪನೆಯಾಗುತ್ತದೆ ಎಂಬ ಆಶ್ವಾಸನೆಯನ್ನು ದೇಶವು ಬಯಸುತ್ತದೆ. ಈ ಬಗ್ಗೆ ವಿರೋಧ ಪಕ್ಷಗಳಿಗೆ ನಿರಂತರವಾಗಿ ಮಾಹಿತಿ ನೀಡಬೇಕು ಎಂದು ಅವರು ಪ್ರಶ್ನಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.