ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಜಗದೀಶ್ ಲಾಡ್ ಕೊರೋನಾದಿಂದ ನಿಧನ

0
1276

ಸನ್ಮಾರ್ಗ ವಾರ್ತೆ

ವಡೋದರ: ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಮಿಸ್ಟರ್ ಇಂಡಿಯಾ ಜಗದೀಶ್ ಲಾಡ್(34) ಕೊರೋನಾದಿಂದ ಮೃತಪಟ್ಟಿದ್ದಾರೆ. ನವಿ ಮುಂಬೈಯವರಾಗಿದ್ದ ಇವರು ಗುಜರಾತ್‍ನ ವಡೋದರದಲ್ಲಿ ವಾಸವಿದ್ದರು. 5 ದಿನಗಳ ಹಿಂದೆ ಇವರಿಗೆ ಕೊರೋನಾ ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಅವರಿಗೆ ಆಕ್ಸಿಜನ್ ನೀಡಲಾಗಿತ್ತು.

ವಿಶ್ವಚಾಂಪಿಯನ್ ಶಿಪ್‍ನಲ್ಲಿ ಬೆಳ್ಳಿ ಪದಕ, ಮಿಸ್ಟರ್ ಇಂಡಿಯಾದಲ್ಲಿ ಚಿನ್ನದ ಪದಕವನ್ನು ಲಾಡ್‍ ಗಳಿಸಿದ್ದರು. ಅವರಿಗೆ ಭಾರತ ಶ್ರೀ ಸಿಕ್ಕಿತ್ತು.

ಬಾಡಿ ಬಿಲ್ಡಿಂಗ್ ಕ್ಷೇತ್ರಕ್ಕೆ ಇವರ ಅಗಲಿಕೆ ದೊಡ್ಡ ನಷ್ಟ ಎಂದು ಗೆಳೆಯರು ಹೇಳಿದರು. ಸೂಕ್ತ ಚಿಕಿತ್ಸೆ ಸಿಗದೆ ಅವರು ಮೃತಪಟ್ಟಿದ್ದಾರೆ. ಅವರ ಪತ್ನಿಗೂ ಕೊರೋನಾ ದೃಢಪಟ್ಟಿದೆ. ಉನ್ನತ ರೋಗ ಪ್ರತಿರೋಧಕ ಶಕ್ತಿ ಇರುವ ಬಾಲ್ಡಿ ಬಿಲ್ಡರ್‍ಗಳನ್ನು ಕೂಡ ಕೊರೋನಾ ತುಂಬ ಕೆಟ್ಟದಾಗಿ ಬಾಧಿಸುತ್ತಿದೆ. ಆದ್ದರಿಂದ ರೋಗ ಯಾರಿಗೂ ಬರಬಹುದು ಎಂದು ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಮತ್ತು ಜಗದೀಶ್‍ರ ಗೆಳೆಯ ಸಮೀರ್ ದಬಿಲ್ಕರ್ ಹೇಳಿದ್ದಾರೆ.