ಸನ್ಮಾರ್ಗ ವಾರ್ತೆ
ಭೋಪಾಲ್: ಕೊರೋನಾ ವ್ಯಾಕ್ಸಿನ್ ತುಂಬಿದ್ದ ಟ್ರಕ್ ವೊಂದು ಮಧ್ಯಪ್ರದೇಶದಲ್ಲಿ ಅನಾಥ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ. ಲಾರಿಯಲ್ಲಿ 2.4 ಲಕ್ಷ ಡೋಸ್ ಕೊರೊನ ವ್ಯಾಕ್ಸಿನ್ ಇರುವುದಾಗಿ ತಿಳಿದು ಬಂದಿದೆ.
ನರಸಿಗಪುರ ಜಿಲ್ಲೆಯ ಕರೆಲಿ ಬಸ್ ನಿಲ್ದಾಣದ ಸಮೀಪದಲ್ಲಿ ಚಾಲಕನಿಲ್ಲದೆ ಲಾರಿ ಪತ್ತೆಯಾಗಿದ್ದು, ಇದರಲ್ಲಿ 2.4 ಕೊವಾಕ್ಸಿನ್ ಯುನಿಟ್ಗಳಿವೆ.
ರಸ್ತೆಯ ಬದಿ ತೊರೆದು ಹೋಗಿರುವ ಸ್ಥಿತಿಯಲ್ಲಿರುವ ಟ್ರಕ್ ಬಗ್ಗೆ ವಿವರ ಸಿಕ್ಕ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಟ್ರಕ್ನ ಚಾಲಕನ ಬಗ್ಗೆ ಸಮೀಪದಲ್ಲಿ ಪತ್ತೆ ಮಾಡಿದರೂ ಅವರ ಬಗ್ಗೆ ಮಾಹಿತಿ ಲಭ್ಯವಾಗಲಿಲ್ಲ. ನಂತರ ಪೊಲೀಸರು ಲಾರಿಯನ್ನು ಪರಿಶೀಲನೆ ಮಾಡಿದಾಗ ಅದರೊಳಗೆ ವ್ಯಾಕ್ಸಿನ್ ಇರುವುದು ಗೊತ್ತಾಯಿತು
ಸುಮಾರು ಎಂಟು ಕೋಟಿ ರೂ. ಬೆಲೆಯ ವ್ಯಾಕ್ಸಿನ್ ಟ್ರಕ್ನಲ್ಲಿದ್ದು, ಟ್ರಕ್ನ ಶೀತೀಕರಣ ವ್ಯವಸ್ಥೆ ಬಂದ್ ಮಾಡದ ಕಾರಣ ವ್ಯಾಕ್ಸಿನ್ಗೆ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್ ಎಲ್ಲಿಗೆ ಹೋಗುತ್ತಿತ್ತು, ಎಲ್ಲಿಂದ ಬಂದಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವುದಾಗಿ ಪೊಲೀಸರು ತಿಳಿಸಿದ್ದಾರೆ.












