ಸನ್ಮಾರ್ಗ ವಾರ್ತೆ
ಉಮ್ರಾವನ್ನು ಇನ್ನಷ್ಟು ಸುಲಭಗೊಳಿಸಲು ಸೌದಿ ಅರೇಬಿಯಾ ನಿರ್ಧರಿಸಿದೆ. ಇದಕ್ಕಾಗಿ ಹೊಸ ಡಿಜಿಟಲ್ ಫ್ಲ್ಯಾಟ್ ಫಾರ್ಮ್ ಅನ್ನು ಪರಿಚಯಿಸಲಾಗಿದೆ ಉಮ್ರಾದ ಪ್ರತಿ ಹಂತದಲ್ಲೂ ಮಾರ್ಗದರ್ಶನವನ್ನು ನೀಡುವ ಡಿಜಿಟಲ್ ಮುಥವಿಫ್ ಫ್ಲಾಟ್ ಫಾರ್ಮ್ ಅನ್ನು ಮಸ್ಜಿದುಲ್ ಹರಾಮ್ ಮತ್ತು ಮಸ್ತಿದುನ್ನಬವಿಯಲ್ಲಿ ಸಜ್ಜಿಕರಿಸಲಾಗಿದೆ ಇದರಿಂದ ಯಾತ್ರಿಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ.
ಉಮ್ರಾ ಕರ್ಮಗಳಿಗೆ ಸಂಬಂಧಿಸಿದ ವಿವರವಾದ ಗೈಡ್ ಆಡಿಯೋ ಮತ್ತು ವಿಡಿಯೋ ರೂಪದಲ್ಲಿರುವ ಪ್ರಾರ್ಥನೆಗಳು ಇತ್ಯಾದಿಗಳನ್ನು ಈ ಆಪ್ ಮೂಲಕ ಪಡೆಯಬಹುದಾಗಿದೆ.
ತವಾಫ್ನಲ್ಲೂ ಮತ್ತು ಸಈಯಲ್ಲೂ ಸಂಖ್ಯೆಯನ್ನು ತಪ್ಪದೆ ಗಮನದಲ್ಲಿಟ್ಟುಕೊಳ್ಳಲು ಇದು ಉಪಯೋಗಕ್ಕೆ ಬರಲಿದೆ.
ಎಲೆಕ್ಟ್ರಾನಿಕ್ ಕೌಂಟರ್ಗಳನ್ನು ಕೂಡ ಇದರ ಭಾಗವಾಗಿ ಸ್ಥಾಪಿಸಲಾಗಿದೆ. ಇದರಿಂದಾಗಿ ಯಾತ್ರಿಕರಿಗೆ ಹೆಚ್ಚು ಏಕಾಗ್ರತೆಯಿಂದ ಆರಾಧನಾ ಕರ್ಮವನ್ನು ನಿರ್ವಹಿಸಲು ಸಾಧ್ಯವಾಗಬಹುದು.
ಜಗತ್ತಿನ ವಿವಿಧ ಭಾಗಗಳಿಂದ ಯಾತ್ರಿಕರು ಬರುವ ಕಾರಣ ಇದನ್ನು ಏಳು ಭಾಷೆಗಳಲ್ಲಿ ಸಜ್ಜಿಕರಿಸಲಾಗಿದೆ.












