ಪ್ರವಾದಿ ನಿಂದೆ: ರಾಬಿತ ಸಹಿತ ಹಲವು ಅಂತಾರಾಷ್ಟ್ರೀಯ ಸಂಘಟನೆಗಳಿಂದ ಪ್ರತಿಭಟನೆ

0
294

ಸನ್ಮಾರ್ಗ ವಾರ್ತೆ

ಜಿದ್ದ: ಬಿಜೆಪಿ ವಕ್ತಾರೆ ನೂಪುರ್ ಶರ್ಮ ಪ್ರವಾದಿ ನಿಂದನೆ ಮಾಡಿರುವುದನ್ನು ಮುಸ್ಲಿಂ ವರ್ಲ್ಡ್ ಲೀಗ್ ರಾಬಿತ ಬಲವಾಗಿ ಖಂಡಿಸಿದೆ. ರಾಬಿತದ ಪ್ರಧಾನ ಕಾರ್ಯದರ್ಶಿ ಜನರಲ್ ಡಾ.ಮುಹಮ್ಮದ್ ಬಿನ್ ಅಬ್ದುಲ್ ಕರೀಂ ಅಲ್‍ಈಸಾ ರಾಬಿತದ ಪ್ರತಿಭಟನೆಯ ಕುರಿತು ತಿಳಿಸಿದರು. ಧಾರ್ಮಿಕ ಚಿಹ್ನೆಗಳ ಅವಹೇಳನ ಸಹಿತ ದ್ವೇಷಕೆದಕುವ ರೀತಿಯ ಹೇಳಿಕೆಗಳು ಅಪಾಯಕಾರಿ ಎಂದು ಅವರು ಮುನ್ನೆಚ್ಚರಿಕೆ ನೀಡಿದರು.

ಇಂತಹ ಅಸಂಬದ್ಧ ಹೇಳಿಕೆಗಳು ಮುಸ್ಲಿಮರ ವಿಶ್ವಾಸ ಮತ್ತು ಮೌಲ್ಯಗಳನ್ನು ದೃಢಗೊಳಿಸುತ್ತದೆ. ನಿಂದೆಪರ ಹೇಳಿಕೆಗಳನ್ನು ನಡೆಸಿದ ಬಿಜೆಪಿ ವಕ್ತಾರೆಯನ್ನು ಆಸ್ಥಾನದಿಂದ ತೆಗೆದುಹಾಕಲಾಗಿದೆ. ಆದರೆ, ಧರ್ಮದ ಯಾವುದೇ ಚಿಹ್ನೆಗಳನ್ನು ಅವಹೇಳನ ಮಾಡುವುದನ್ನು ಖಂಡಿಸಿ ಬಿಜೆಪಿ ಹೇಳಿಕೆ ನೀಡಿದ್ದನ್ನು ನಾವು ಸ್ವಾಗತಿಸುತ್ತೇವೆ ಎಂದು ಪ್ರಧಾನ ಕಾರ್ಯದರ್ಶಿ ಹೇಳಿದರು.

ಎರಡು ಹರಮ್ ಕಾರ್ಯಾಲಯದಿಂದ ಪ್ರತಿಭಟನೆ:

ಜಿದ್ದ, ಬಿಜೆಪಿಯ ನಾಯಕಿಯ ಪ್ರವಾದಿ ನಿಂದನೆಯ ಹೇಳಿಕೆಯನ್ನು ಎರಡು ಹರಮ್ ಕಾರ್ಯಾಲಯಗಳು ಖಂಡಿಸಿವೆ. ಇಂತಹ ಹೀನವಾದ ಪ್ರವೃತ್ತಿ ಧರ್ಮಗಳೊಂದಿಗಿರುವ ಗೌರವವನ್ನು ಪ್ರತಿನಿಧಿಸುವುದಿಲ್ಲ ಎಂದು ಮತ್ತು ಇದನ್ನು ಮಾಡಿದವರು ಪ್ರವಾದಿಯ(ಸ) ಜೀವನ ಚರಿತ್ರೆ ಅಧ್ಯಯನ ಮಾಡಿಲ್ಲ ಎಂದು ಹೇಳಲಾಗಿದೆ. ವಿಶ್ವಾಸ ಮತ್ತು ಧರ್ಮಗಳನ್ನು ಗೌರವಿಸಲು ಎಲ್ಲರಲ್ಲೂ ಶಾಂತಿಯ ಪ್ರಚಾರ ಮಾಡಲು ಧರ್ಮದ ಚಿಹ್ನೆಗಳನ್ನು ಉಲ್ಲಂಘಿಸದಿರಲು ಕರೆ ನೀಡುವುದು ಸೌದಿ ಅರೇಬಿಯದ ನಿಲುವು ಎಂದು ತಿಳಿಸಲಾಗಿದೆ.

ಗಲ್ಫ್ ಸಹಕಾರಿ ಕೌನ್ಸಿಲ್:

ಜಿದ್ದ: ಪ್ರವಾದಿಯ ವಿರುದ್ಧ ಬಿಜೆಪಿ ವಕ್ತಾರೆಯ ಹೇಳಿಕೆಯನ್ನು ಖಂಡಿಸುವುದಾಗಿ ಗಲ್ಫ್‌ನ ಅರಬ್ ದೇಶಗಳ ಸಹಕಾರಿ ಕೌನ್ಸಿಲ್ ಜಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ನಾಯಿಫ್ ಅಲ್‍ ಹಜ್ರಫ್ ಹೇಳಿದರು. ಇಂತಹ ಧರ್ಮ ಮತ್ತು ವಿಶ್ವಾಸವನ್ನು ಗುರಿಯಿಡುವ ಅಥವಾ ಅವಗಳನು ಕೀಳ್ಮಟ್ಟಕ್ಕಿಳಿಸುವ ನಿಲುವುಗಳನ್ನು ತಿರಸ್ಕರಿಸುವುದಾಗಿ ಜಿಸಿಸಿ ಪ್ರಧಾನ ಕಾರ್ಯದರ್ಶಿ ಹೇಳಿದರು.

ಆರ್ಗನೈಝೇಶನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್ (ಒಐಸಿ):

ಜಿದ್ದ: ಭಾರತದ ಆಡಳಿತ ಪಾರ್ಟಿಯ ಹೊಣೆಗಾರ ವ್ಯಕ್ತಿ ಪ್ರವಾದಿ ಮುಹಮ್ಮದರ ವಿರುದ್ಧ ನಡೆಸಿದ ಆಕ್ಷೇಪಗಳನ್ನು ಬಲವಾಗಿ ಖಂಡಿಸುತ್ತೇವೆ ಎಂದು ಆರ್ಗನೈಝೇಶನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್ (ಒಐಸಿ) ತಿಳಿಸಿದೆ. ಭಾರತದಲ್ಲಿ ಮುಸ್ಲಿಮರ ಮೇಲೆ ದ್ವೇಷ ಮತ್ತು ದುರುಪಯೋಗ ಹೆಚ್ಚಳದ ಪರಿಸ್ಥಿತಿಯಲ್ಲಿ ಮುಸ್ಲಿಮರ ವಿರುದ್ಧ ವ್ಯವಸ್ಥಿತ ಕ್ರಮಗಳು ತಾರತಮ್ಯದ ನಿಯಂತ್ರಣಗಳುಂಟಾಗಿರುವ ಪರಿಸ್ಥಿತಿಯಲ್ಲಿ ಇಂತಹ ಆಕ್ಷೇಪಗಳನ್ನು ಮಾಡಲು ಕೆಲವರಿಗೆ ಧೈರ್ಯ ಸಿಗುತ್ತಿದೆ.

ಈ ಆಕ್ಷೇಪಗಳನ್ನು ಎಲ್ಲ ರೀತಿಯ ಅವಹೇಳನಗಳನ್ನು ಎದುರಿಸಲು ಭಾರತ ಸರಕರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒಐಸಿ ಆಗ್ರಹಿಸಿದೆ. ಮುಸ್ಲಿಮರ ವಿರುದ್ಧ ಅಕ್ರಮ ದ್ವೇಷ ಅಪರಾಧಗಳಿಗೆ ಪ್ರೇರೇಪಿಸುವರು ಮತ್ತು ಅಪರಾಧಿಗಳು ಹಾಗೂ ಅವರ ಹಿಂದೆ ಇರುವವರನ್ನು ಕಾನೂನಿನ ಮುಂದೆ ತರುವ ಮೂಲಕ ಅವರ ವಿರುದ್ಧ ಕ್ರಮ ಜರಗಿಸಬೇಕು.

ಭಾರತದ ಮುಸ್ಲಿಮ್ ಸಮುದಾಯದ ಸುರಕ್ಷೆ, ಕಲ್ಯಾಣ ಖಚಿತಪಡಿಸಬೇಕೆಂದು, ಅವರ ಹಕ್ಕುಗಳನ್ನು ಮತ್ತು ಧರ್ಮ ಸಂಸ್ಕೃತಿ, ವ್ಯಕ್ತಿತ್ವ, ಅಂತಸ್ತು, ಆರಾಧಾನಲಯಗಳನ್ನು ಸಂರಕ್ಷಿಸಲು ಭಾರತ ಸರಕಾರ ಎಚ್ಚರ ವಹಿಸಬೇಕು. ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ವಿಶೇಷವಾಗಿ ವಿಶ್ವಸಂಸ್ಥೆಯ ವ್ಯವಸ್ಥೆಗಳು, ಮಾನವಹಕ್ಕು ಆಯೋಗಗಳೊಂದಿಗೆ ಭಾರತದ ಮುಸ್ಲಿಮರನ್ನು ಗುರಿಯಾಗಿಡುವ ಚಟುವಟಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒಐಸಿ ಆಗ್ರಹಿಸಿದೆ.