ಸನ್ಮಾರ್ಗ ವಾರ್ತೆ
ಬಹುಪತ್ನಿತ್ವ ಅನ್ನೋದು ನಮ್ಮಲ್ಲಿ ಹಲವು ರೀತಿಯ ಚರ್ಚೆಗೆ ಒಳಗಾಗುವ ಸಂಗತಿಯಾಗಿದೆ. ಮೊದಲ ಪತ್ನಿ ಮತ್ತು ಎರಡನೇ ಪತ್ನಿಯ ನಡುವೆ ಜಗಳ ಆಗೋದು, ಮನೆ ನೆಮ್ಮದಿಯನ್ನು ಕಳಕೊಳ್ಳುವುದು ಇತ್ಯಾದಿ ನಡೆಯುತ್ತಿರುತ್ತದೆ. ಆದರೆ ಸೌದಿಯಲ್ಲಿ ಇದಕ್ಕೆ ವ್ಯತಿರಿಕ್ತವಾದ ಘಟನೆ ನಡೆದಿದೆ. ತನ್ನ ಪತಿಯ ಎರಡನೇ ಪತ್ನಿಗೆ ಮೊದಲ ಪತ್ನಿ ತನ್ನ ಸಂಪತ್ತಿನ 80% ಮೊತ್ತವನ್ನು ದಾನ ಮಾಡಿದ ಅಪರೂಪದ ಮತ್ತು ಹೃದಯಸ್ಪರ್ಶಿ ಘಟನೆ ಇದು. ಮಾಜಿದ್ ಬಲ್ ದಾನ್ ಎಂಬವರ ದ್ವಿತೀಯ ಪತ್ನಿಯಾದ ತಕ್ರೀದ್ ಅವದ್ ಅಲ್ ಸೌದ್ ಗೆ ಮೊದಲ ಪತ್ನಿ ನೂರಾ ಸಾಲಿಂ ಅಲ್ ಶಮ್ಮಾರ್ ಈ ದಾನ ಮಾಡಿದ್ದಾರೆ.
ಮಾಜಿದ್ ಬಲ್ದಾನ್ ಅವರ ದ್ವಿತೀಯ ಪತ್ನಿ ತಕ್ರೀದ್ ಅವದ್ ಅಲ್ ಸೌದ್ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲವು ವರ್ಷಗಳಿಂದ ಅವರು ಚಿಕಿತ್ಸೆಯಲ್ಲಿದ್ದಾರೆ. ವರ್ಷಗಳಿಂದ ಡಯಾಲಿಸ್ ನಡೆಸಲಾಗುತ್ತಿದೆ. ಇದೀಗ ತನ್ನ ಸವತಿಗೆ ನೂರ ಸಾಲಿಮ್ ಎಂಬತ್ತು ಶೇಕಡಾ ಸಂಪತ್ತನ್ನೇ ದಾನ ಮಾಡಿದ್ದಾರೆ.
ನನ್ನ ಎರಡನೇ ಪತ್ನಿ ತಕ್ರೀದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ ಮತ್ತು ಒಂದು ವರ್ಷದಿಂದ ಅಮೆರಿಕದಲ್ಲಿ ಚಿಕಿತ್ಸೆ ಪಡೆದರೂ ಗುಣವಾಗಿಲ್ಲ ಎಂದು ಮಾಜಿದ್ ಬಲ್ದಾನ್ ಹೇಳಿದ್ದಾರೆ.
ಅಮೆರಿಕಾದಿಂದ ಮರಳಿ ಸೌದಿ ಅರೇಬಿಯಾಕ್ಕೆ ಕರೆತಂದೆ. ಬಳಿಕ ತನ್ನ ಕಿಡ್ನಿಯನ್ನು ಆಕೆಗೆ ದಾನ ಮಾಡುವುದಕ್ಕೆ ನಿರ್ಧರಿಸಿದೆ. ಒಂದು ವೇಳೆ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ನನಗೇನಾದರೂ ಸಂಭವಿಸಿದರೆ ನನ್ನ ಐದು ಮಕ್ಕಳ ಹೊಣೆಗಾರಿಕೆಯನ್ನು ನೀನೇ ವಹಿಸಿಕೊಳ್ಳಬೇಕು ಎಂದು ನೂರರಲ್ಲಿ ವಿನಂತಿಸಿದೆ ಆದರೆ ಆಕೆಯ ಮಾತು ನನ್ನನ್ನು ಅಚ್ಚರಿಗೆ ಮತ್ತು ಭಾವುಕತೆಗೆ ನೂಕಿತು. ಆಕೆ ತನ್ನ 80 ಶೇಕಡಾ ಆಸ್ತಿಯನ್ನು ತನ್ನ ಸವತಿಗೆ ದಾನ ಮಾಡುವುದಾಗಿ ಹೇಳಿದ್ಲು. ಬಳಿಕ ಕಿಡ್ನಿ ದಾನಕ್ಕೂ ಮುಂದೆ ಬಂದಳು. ಮೆಡಿಕಲ್ ಟೆಸ್ಟ್ ನಲ್ಲಿ ಆಕೆಯ ಕಿಡ್ನಿ ಸವತಿಗೆ ಹೊಂದುವುದಾಗಿ ದೃಢಪಟ್ಟಿತು. ಆ ಬಳಿಕ ಕಿಡ್ನಿ ಟ್ರಾನ್ಸ್ ಪ್ಲಾಂಟ್ ನಡೆಯಿತು ಎಂದು ಅವರು ಹೇಳಿದ್ದಾರೆ.
ಬರಡು ಭೂಮಿಗೆ ಮಳೆ ಬಂದಹಾಗೆ ಆಕೆ ನನ್ನ ದ್ವಿತೀಯ ಪತ್ನಿಯ ರಕ್ಷಣೆಗಾಗಿ ಬಂದಳು. ದೇವನಿಗೆ ಸ್ತುತಿ. ಇದು ತ್ಯಾಗದ ಮತ್ತು ಕರುಣೆಯ ಅತಿ ಉಜ್ವಲ ಮಾದರಿಯಾಗಿದೆ ಎಂದು ಅವರು ಸಂತೋಷದಿಂದ ಹೇಳಿದ್ದಾರೆ.












