ಇಂದಿನಿಂದ ಮಣಿಪುರದಲ್ಲಿ ಇಂಟರ್ ನೆಟ್ ಸೇವೆಗಳು ಲಭ್ಯ; ಮುಖ್ಯಮಂತ್ರಿ

0
205

ಸನ್ಮಾರ್ಗ ವಾರ್ತೆ

ಇಂಫಾಲ: ಮಣಿಪುರದಲ್ಲಿ ಮೇ 3ರಂದು ಕೋಮುಗಲಭೆ ಸಂಭವಿಸಿದ ಬಳಿಕ ಸ್ಥಗಿತಗೊಂಡಿದ್ದ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಶನಿವಾರದಿಂದ ಮರುಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದರು. ಇಂಫಾಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಶನಿವಾರದಿಂದ ರಾಜ್ಯಾದ್ಯಂತ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಮರುಸ್ಥಾಪಿಸಲಾಗುವುದು. ನಕಲಿ ಸುದ್ದಿ ಮತ್ತು ದ್ವೇಷದ ಮಾತುಗಳು ಹರಡುವುದನ್ನು ತಡೆಯಲು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅವರು ಹೇಳಿದರು. ಗಲಭೆಯಲ್ಲಿ 175 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 33ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 4786 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. 254 ಮಸೀದಿಗಳು ಮತ್ತು 132 ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದರ ನಡುವೆ ಭಾರತ-ಮ್ಯಾನ್‍ಮಾರ್ ಗಡಿಯಲ್ಲಿ ಎರಡು ಕಡೆಗಳಲ್ಲಿ ವಾಸವಿರುವ ಜನರು ಹದಿನಾರು ಕಿಲೋಮೀಟರ್ ದೂರದವರೆಗೆ ಪರಸ್ಪರ ಎರಡು ವಿಭಾಗದವರೆಡೆಗೆ ಹೋಗಿ ಬರುವ ಫ್ರೀಮೂವ್ಮೆಂಟ್ ವ್ಯವಸ್ಥೆ ಸರಕಾರ ರದ್ದುಗೊಳಿಸಬೇಕು. ಅನಧಿಕೃತ ವಲಸಿಗರು ಹರಿದು ಬರುವುದು ತಡೆಯಲು ಭಾರತ ಬರ್ಮ ಗಡಿಯಲ್ಲಿ ಬೇಲಿ ಕಟ್ಟಬೇಕೆಂದು ಅವರು ಹೇಳಿದರು.