ಧೈರ್ಯದಿಂದಿರಿ, ದಾಖಲೆಗಳನ್ನು ಸರಿಪಡಿಸಿಕೊಳ್ಳಿ: NRC ಅನಗತ್ಯ ಕ್ರಮ: ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ! ಸಾದ್ ಬೆಳಗಾಮಿ ಅವರೊಂದಿಗೆ ಮಾತುಕತೆ

0
1469

ಲಈಕುಲ್ಲಾ ಖಾನ್ ಮನ್ಸೂರಿ

ಪ್ರಶ್ನೆ: ಮುಂದಿನ ನಾಲ್ಕು ವರ್ಷಗಳಿಗೆ ತಮ್ಮ `ವಿಷನ್’ ಏನು?

ಉತ್ತರ: ಹೊಣೆಗಾರಿಕೆಗಳು ಜವಾಬ್ದಾರಿಕೆಯನ್ನು ಹೆಚ್ಚಿಸಿದೆ. ಅಲ್ಲಾಹನ ಮೇಲೆ ಭರವಸೆಯಿರಿಸಿ ನಾನು ಈ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದೇನೆ. ನಾವು ಹಿಂದಿಗಿಂತಲೂ ಹೆಚ್ಚು ಕ್ರಿಯಾಶೀಲರಾಗಿರಬೇಕಾಗಿರುವುದು ಕಾಲದ ಬೇಡಿಕೆಯಾಗಿದೆ. ಅಲ್ಲಾಹನಿಗೆ ಸ್ತುತಿ. ಇಸ್ಲಾಮೀ ಆಂದೋಲನಕ್ಕೆ ಕರ್ನಾಟಕದಲ್ಲಿ ಒಂದು ಉತ್ತಮ ಸ್ಥಾನವಿದೆ. ಜಮಾಅತ್‍ನ ಜನಬಲ ಮತ್ತು ಪ್ರಭಾವದಲ್ಲಿ ಹೆಚ್ಚಳವಾಗಲು ನಾವು ಪ್ರಯತ್ನಿಸುವೆವು. ಅದರಲ್ಲಿ ಬಹಳ ಪ್ರಗತಿಯಾಗಬೇಕಾಗಿದೆ. ಸಂದೇಶ ಪ್ರಚಾರ ರಂಗದಲ್ಲಿ ನಮಗೆ ದೊರಕಿರುವ ಅವಕಾಶಗಳನ್ನು ಪೂರ್ಣವಾಗಿ ಬಳಸಿ ರಾಜ್ಯದ ಜನತೆಗೆ ತೌಹೀದ್, ರಿಸಾಲತ್ ಮತ್ತು ಆಖಿರತ್ (ಏಕದೇವತ್ವ, ಪ್ರವಾದಿತ್ವ, ಪರಲೋಕ)ನ ಸಂದೇಶವನ್ನು ತಲುಪಿಸಲು ಪ್ರಯತ್ನಿಸಬೇಕಾಗಿದೆ. ಮಹಿಳೆಯರು, ಯುವಕರು ಮತ್ತು ಮಕ್ಕಳಲ್ಲಿ ಚಟುವಟಿಕೆಯನ್ನು ಹೆಚ್ಚಿಸಲು ವಿಶೇಷ ಗಮನಹರಿಸ ಬೇಕಾಗಿದೆ. ಸಮಗ್ರ ತರಬೇತಿಗಾಗಿ ರಾಜ್ಯ ಘಟಕದಲ್ಲಿ ತರಬೇತಿ ಕಾರ್ಯಾಗಾರದ ವ್ಯವಸ್ಥೆ ಮಾಡಲಾಗುವುದು. ಅದು ವರ್ಷವಿಡೀ ಕಾರ್ಯನಿರತವಾಗಿರುವುದು. ಸದ್ಭಾವನಾ ವೇದಿಕೆ ಪ್ರತಿ ಗ್ರಾಮದಲ್ಲಿ ಸ್ಥಾಪಿಸಲ್ಪಡಬೇಕು. ಈಆಅಂ ಮತ್ತು ಧಾರ್ಮಿಕ ಸೌಹಾರ್ದ ವೇದಿಕೆಯ ಕಾರ್ಯಕ್ರಮವು ಎಲ್ಲ ನಗರ-ಪಟ್ಟಣಗಳಲ್ಲಿ ನಡೆಯ ಬೇಕು. ದೇಶ ಬಾಂಧವರ ಪ್ರಮುಖ ವ್ಯಕ್ತಿಗಳು, ಧಾರ್ಮಿಕ ಮುಖಂಡರು, ಸಾಮಾಜಿಕ ನೇತಾರರು ಹಾಗೂ NGO ಗಳೊಂದಿಗೆ ಸಂಪರ್ಕ, ಸಾಮೂಹಿಕ ಪ್ರಯತ್ನ, ಪರಿಶ್ರಮಗಳನ್ನು ಹೆಚ್ಚಿಸಬೇಕಾಗಿದೆ. ಶಿಕ್ಷಣ ರಂಗದಲ್ಲಿ ಹಾಸನದ ಮನ್ಸೂರಾವನ್ನು ಬಲಪಡಿಸಬೇಕಾಗಿದೆ. BIEನ ಚಟುವಟಿಕೆಗಳನ್ನು ತೀವ್ರಗೊಳಿಸಬೇಕಾಗಿದೆ. ಮುಸಲ್ಮಾನರನ್ನು ಇಸ್ಲಾಮೀ ಸಂಘಟಿತ ವ್ಯವಸ್ಥೆಯತ್ತ ಪ್ರೇರೇಪಿಸುವುದು ಮತ್ತು ಮೇಲೆತ್ತುವುದು ಒಂದು ಪ್ರಧಾನ ಆದ್ಯತೆಯ ಕಾರ್ಯವಾಗಿದೆ.

ಪ್ರಶ್ನೆ: ದೇಶದ ಪ್ರಸಕ್ತ ವಿದ್ಯಮಾನಗಳನ್ನು ತಾವು ಯಾವ ದೃಷ್ಟಿಕೋನದಿಂದ ನೋಡುತ್ತೀರಿ? ಮುಸಲ್ಮಾನರು ದೇಶದ ಪ್ರಸಕ್ತ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು? ಅವರ ಕಾರ್ಯ ನೀತಿ ಏನಾಗಿರಬೇಕು?

ಉತ್ತರ: ಇವತ್ತು ದೇಶದ ಪರಿಸ್ಥಿತಿಯು ಸತ್ವ ಪರೀಕ್ಷೆಯದ್ದಾಗಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಒಂದೆಡೆ ಸ್ವಾತಂತ್ರ್ಯದ ನಂತರ ಮುಸಲ್ಮಾನರು ಶಿಕ್ಷಣ, ಆರ್ಥಿಕ ಮತ್ತು ರಾಜಕೀಯವಾಗಿ ಇತರ ಜ ನಾಂಗಗಳಿಗಿಂತ ಹಿಂದಿದ್ದು, ಅವನತಿಗೆ ಬಲಿಯಾಗಿದ್ದಾರೆ. ಇನ್ನೊಂದೆಡೆ, ಫ್ಯಾಸಿಸ್ಟ್ ಶಕ್ತಿಗಳು ತಮ್ಮ ಶಕ್ತಿಯನ್ನು ನಿರಂತರ ಹೆಚ್ಚಿಸುತ್ತಾ ಪಕ್ಷಪಾತ, ಆಕ್ರಮಣಕಾರಿ ಜನಾಂಗವಾದದ ವಾತಾವರಣವನ್ನು ಹೇಗೆ ಉಂಟು ಮಾಡಿವೆಯೆಂದರೆ, ವಿದ್ವೇಷ, ಹಿಂಸೆ-ದೌರ್ಜನ್ಯಗಳು ಎಲ್ಲೆಲ್ಲೂ ತಾಂಡವ ವಾಡುತ್ತಿವೆ. ಅರಾಜಕತೆ, ಕೊಲೆ ಪಾತಕಗಳು ಸಾಮಾನ್ಯವಾಗುತ್ತಿವೆ. CVC, ಚುನಾವಣಾ ಆಯೋಗ, CBI, ನ್ಯಾಯಾಂಗದಂತಹ ಪ್ರಜಾಸತ್ತಾತ್ಮಕ ಸಂಸ್ಥೆಗಳು ಪ್ರಭಾವಿತಗೊಳ್ಳುತ್ತಿವೆ. ಸಮೂಹ ಮಾಧ್ಯಮ ಕೂಡಾ ಹೆಚ್ಚಿನಂಶ ಮಾರಲ್ಪಟ್ಟಿವೆ. ಜನಸಾಮಾನ್ಯರ ಸಮಸ್ಯೆಗಳು ನಿರಂತರ ಹೆಚ್ಚುತ್ತಲೇ ಇವೆ. ದೇಶದ ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ. ತ್ರಿವಳಿ ತಲಾಕ್, RTI ಯಲ್ಲಿ ತಿದ್ದುಪಡಿ, UAPA ಮತ್ತು NRC ಹಾಗೂ ಕಾಶ್ಮೀರದ ಕುರಿತಾದ ಕಾನೂನುಗಳನ್ನು ಎಷ್ಟೊಂದು ತುರ್ತಾಗಿ ಜಾರಿಗೊಳಿಸಲಾಗಿದೆ. ಅದರಿಂದ ಮುಂಬರುವ ದಿನಗಳ ಕ್ಷಣಗಳನ್ನು ನೋಡ ಬಹುದಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಮುಸಲ್ಮಾನರು ಧೈರ್ಯ-ಸ್ಥೆರ್ಯ ಮತ್ತು ಸಹನೆ-ತಾಳ್ಮೆಯೊಂದಿಗೆ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ನಮ್ಮ ಸುದೀರ್ಘ ಇತಿಹಾಸದಲ್ಲಿ ಅನೇಕ ಏಳು-ಬೀಳುಗಳನ್ನು ಬಂದಿವೆ. ನಾವು ಅವುಗಳನ್ನು ಎದುರಿಸಿದ್ದೇವೆ (ಮಿಥ್ಯಕ್ಕೆ ಮಣಿಯುವವರು ನಾವಲ್ಲ). ಆತ್ಮವಿಶ್ವಾಸ ಮತ್ತು ದೇವವಿಶ್ವಾಸ ದೊಂದಿಗೆ ನಾವು ಮುಂದುವರಿಯಬೇಕು. ಐಕ್ಯತೆ, ಪರಸ್ಪರ ಒಂದುಗೂಡಿ ಕಾರ್ಯ ನೀತಿಯನ್ನು ರೂಪಿಸಬೇಕಾಗಿದೆ. ಸಮುದಾಯದ ರಕ್ಷಣೆ ಮತ್ತು ಭದ್ರತೆಗಾಗಿ ಶೈಕ್ಷಣಿಕ, ಆರ್ಥಿಕ, ರಾಜಕೀಯ ಮೊದಲಾದ ಎಲ್ಲ ರಂಗಗಳಲ್ಲೂ ಕಠಿಣವಾಗಿ ಪರಿಶ್ರಮಿಸಬೇಕಾಗಿದೆ. ನಮ್ಮ ಶಕ್ತಿಯ ಮೂಲ ಸ್ರೋತ ಇಸ್ಲಾಮ್ ಆಗಿದೆ. ಅದರ ಪ್ರಚಾರದಲ್ಲೇ ನಮ್ಮ ಭವಿಷ್ಯ ಅಡಗಿದೆ. ಇಸ್ಲಾಮಿನ ಕುರಿತು ತಪ್ಪುಕಲ್ಪನೆಗಳನ್ನು ನೀಗಿಸುತ್ತಾ, ಅದರ ಮಾನವ ಕಲ್ಯಾಣ ಸಂದೇಶವನ್ನು ನಾವು ನಮ್ಮ ಮಾತು ಕೃತಿಗಳ ಮೂಲಕ ಪ್ರದರ್ಶಿಸಬೇಕಾಗಿದೆ. ಅಕ್ರಮವು ಮಿತಿ ಮೀರಿದಾಗ ಅಲ್ಲಾಹನ ತೀರ್ಮಾನವೂ ಜಾಗೃತಗೊಳ್ಳುತ್ತದೆ. ಯಾವುದೇ ಸ್ಥಿತಿಯಲ್ಲಿ ನಿರಾಶೆ, ಕರ್ಮರಾಹಿತ್ಯ ಮತ್ತು ದುಷ್ಕರ್ಮಗಳಿಂದ ಮೇಲೆದ್ದು ನಾವು ಸಹನೆ ಮತ್ತು ಯುಕ್ತಿಯೊಂದಿಗೆ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.

ಪ್ರಶ್ನೆ: ತ್ರಿವಳಿ ತಲಾಕ್ ಮಸೂದೆಗೆ ದೇಶದಲ್ಲಿ ಕಾನೂನಿನ ಸ್ಥಾನ ನೀಡಲಾಗಿದೆ. ಈ ಕುರಿತು ತಮ್ಮ ನಿಲುವೇನು?

ಉತ್ತರ: ಪಾರ್ಲಿಮೆಂಟಿನ ಉಭಯ ಸದನಗಳು ತ್ರಿವಳಿ ಕಾನೂನನ್ನು ಅಂಗೀಕರಿಸಿದ ದಿನ ಸ್ವತಂತ್ರ ಭಾರತದ ಸ್ವತಂತ್ರ ಮುಸಲ್ಮಾನರ ಪಾಲಿಗೆ 72 ವರ್ಷಗಳ ಇತಿಹಾಸದ ಅತ್ಯಂತ ಕರಾಳ ದಿನವಾಗಿತ್ತು. ಬಾಬರಿ ಮಸೀದಿ ದುರಂತವು ಒಂದು ಭಾವನಾತ್ಮಕ ಆಘಾತವಾಗಿದ್ದು ಇದು ಅದಕ್ಕಿಂತಲೂ ದೊಡ್ಡ ಪೆಟ್ಟಾಗಿದೆ. ಮುಸಲ್ಮಾನರ ಶರೀಅತ್ ಮತ್ತು ಕೌಟುಂಬಿಕ ಕಾನೂನಿನಲ್ಲಿ ಹಾಡುಹಗಲೇ ಮತ್ತು ಕಾನೂನಿನ ಶೈ ಲಿಯಲ್ಲಿ, ಆದರೆ ಒಳಗಿನಿಂದ ತೀವ್ರ ರಾಜಕೀಯ ಮತ್ತು ಸಾಂಸ್ಕøತಿಕ ಪಿತೂರಿಯಿಂದ ಹಸ್ತಕ್ಷೇಪ ನಡೆಸುವ ದ್ವಾರವನ್ನು ತೆರೆಯಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಯಾವೆಲ್ಲ ಆಟಗಳನ್ನು ಆಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ನೋಡಬಹುದು. ಈ ದುರಂತ ಸಮುದಾಯದ ಎಲ್ಲಾ ಸಂಘಟನೆಗಳು ಮತ್ತು ಬುದ್ಧಿಜೀವಿಗಳಿಗೆ ಒಂದು ಚಿಂತನಾರ್ಹ ವಿಷಯವಾಗಿದೆ. ನಮ್ಮ ಕರ್ಮರಾಹಿತ್ಯ ಮತ್ತು ದುಷ್ಕರ್ಮಗಳಿಗಾಗಿ ಪಶ್ಚಾತ್ತಾಪ ಪಡುವುದು ಮತ್ತು ಪರಿಸ್ಥಿತಿಯ ಸಮಗ್ರ ಸುಧಾರಣೆಗಾಗಿ ಟೊಂಕ ಕಟ್ಟಿಕೊಳ್ಳುವುದು ಕಾಲದ ತೀವ್ರ ಬೇಡಿಕೆಯಾಗಿದೆ. ಧೈರ್ಯ, ಸ್ಥೈರ್ಯ, ನಿರಾಶರಾಗದೆ ತಂತಮ್ಮ ಸ್ಥಾನದಲ್ಲಿ ಏನೆಲ್ಲ ಸೇವೆಗಳನ್ನು ಮಾಡುತ್ತೇವೋ ಅದರೊಂದಿಗೆ ಇಸ್ಲಾಮ್ ಧರ್ಮ ಮತ್ತು ಮುಸಲ್ಮಾನರ ನೈಜ ಹಿತಾಸಕ್ತಿ ಮತ್ತು ವಿಶೇಷವಾಗಿ ಕೌಟುಂಬಿಕ ಕಾನೂನುಗಳನ್ನು ವಿವರಿಸಲು ಮತ್ತು ಅದರಂತೆ ನಡೆಯಲು ಸಮಗ್ರ ಹಾಗೂ ದೂರಗಾಮಿ, ಆಂದೋಲನ ನಡೆಸುವ ಅಗತ್ಯವಿದೆ.

ಸುಪ್ರೀಮ್ ಕೋರ್ಟ್‍ನಲ್ಲಿ ಈ ಮಸೂದೆಯ ವಿರುದ್ಧ ಮನವಿ ಸಲ್ಲಿಸಲಾಗಿದೆ. ಈ ಕಾರ್ಯಾ ಚರಣೆ ನಡೆಯಬೇಕಾಗಿದೆ. ರಾಜಕೀಯವಾಗಿಯೂ ಪ್ರಯತ್ನಗಳಾಗಬೇಕು. ಆದರೆ ಬಾಹ್ಯ ಅಪಾಯಗಳನ್ನು ತಡೆಗಟ್ಟುವುದರ ಜೊತೆಗೆ ಪರ್ಸನಲ್ ಲಾ ಆಗಿ ಆಂತರಿಕವಾಗಿಯೂ ಎದುರಾಗಿರುವ ಸವಾಲುಗಳನ್ನು (ಅಂದರೆ ಅಜ್ಞಾನ, ತಿಳುವಳಿಕೆಯಿಲ್ಲದಿರುವುದು, ವಿಶ್ವಾಸ ದೌರ್ಬಲ್ಯ, ನೈತಿಕ ದುರ್ಬಲತೆ, ಆರ್ಥಿಕ ಹಿಂದುಳಿಯುವಿಕೆ ಇತ್ಯಾದಿ) ನೀಗಿಸಬೇಕಾಗಿದೆ.

ಪ್ರಶ್ನೆ: ಕಾಶ್ಮೀರದ ಸಮಸ್ಯೆಯ ಕುರಿತು ಜಮಾಅತೆ ಇಸ್ಲಾಮೀಯ ನಿಲುವೇನು?

ಉತ್ತರ: ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿ ಎನ್.ಡಿ.ಎ. ಸರಕಾರದ ಇತ್ತೀಚಿನ ಕ್ರಮಗಳು ಸಂಸದೀಯ ಪ್ರಜಾಸತ್ತೆಯ ನಿಶ್ಚಿತ ತತ್ವಗಳ ಸ್ಪಷ್ಟ ಉಲ್ಲಂಘನೆಯಾಗಿದೆ. 370ನೇ ವಿಧಿಯ ರಾಜ್ಯದ ವಿಶೇಷ ಸ್ಥಾನಮಾ ನವನ್ನು ಅಲ್ಲಿನ ಜನಸಾಮಾನ್ಯರು ಮತ್ತವರ ಪ್ರತಿನಿಧಿಗಳೊಂದಿಗೆ ಸಮಾಲೋಚಿಸದೆ ಏಕಮುಖವಾಗಿ ರಾಷ್ಟ್ರಪತಿಯವರ ಸುಗ್ರೀವಾಜ್ಞೆಯ ಮೂಲಕ ಒಮ್ಮೆಲೇ ಕೊನೆಗೊಳಿಸಲಾಗಿದೆ. ಸರಕಾರವು ಅಷ್ಟಕ್ಕೇ ಸಾಕು ಮಾಡಲಿಲ್ಲ. ಜಮ್ಮು-ಕಾಶ್ಮೀರವನ್ನು ಎರಡು ಭಾಗಗಳಾಗಿ ವಿಭಜಿಸಿ, ರಾಜ್ಯದ ಸ್ಥಾನಮಾನವನ್ನು ಕೊನೆಗೊಳಿಸಿ ಅದನ್ನು ಕೇಂದ್ರಾಡಳಿತ ಎರಡು ಪ್ರದೇಶಗಳಾಗಿ ಮಾಡುವ ತೀರ್ಮಾನವನ್ನೂ ಕೈಗೊಂಡಿತು. ಈ ಎಲ್ಲ ಸೆನ್ಸಿಟಿವ್ ಮತ್ತು ದೂರಗಾಮೀ ಮಹತ್ವ ಬೀರಬಲ್ಲ ತೀರ್ಮಾನ ಮಾಡುವಾಗ ರಾಜ್ಯದ ಜನತೆಯೊಂದಿಗೆ ಸಮಾಲೋಚಿಸಲೂ ಇಲ್ಲ. ಅವರನ್ನು ವಿಶ್ವಾಸಕ್ಕೆ ತೆಗೆಯಲೂ ಪ್ರಯತ್ನಿಸಲಿಲ್ಲ. ಬದಲಾಗಿ ರಾಜ್ಯದಲ್ಲಿ ವಿವಿಧ ರೀತಿಯ ನಿರ್ಬಂಧಗಳ ಹೇರಿ, ಅಲ್ಲಿ ಭಯದ ವಾತಾವರಣವನ್ನುಂಟು ಮಾಡಿ ಏಕಮುಖವಾಗಿ ತೀರ್ಮಾನ ಕೈಗೊಳ್ಳಲಾಯಿತು. ತೀರ್ಮಾನದ ಈ ವಿಧಾ ನವು ಭಾರತದ ಸಂವಿಧಾನದ ಪ್ರಜಾಸತ್ತಾತ್ಮಕ ಪರಂಪರೆಗೆ ವಿರುದ್ಧವಾಗಿದ್ದು, ದೇಶದ ಫೆಡರಲ್ ಸ್ವರೂಪಕ್ಕೆ ತೀವ್ರ ಹಾನಿಯ ನ್ನುಂಟು ಮಾಡುವಂತಹದ್ದಾಗಿದೆ. ಈ ತೀರ್ಮಾನಕ್ಕಾಗಿ ರಾಜ್ಯದ ಜನತೆಯ ಮೂಲಭೂತ ಹಕ್ಕುಗಳನ್ನು ಘಾಸಿಗೊಳಿಸಲಾಗುತ್ತದೆ. ರಾಜ್ಯದಲ್ಲಿ ಸೇನಾ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿರಿಸಲಾಗಿದೆ. ವಿದ್ಯಾಸಂಸ್ಥೆಗಳನ್ನು ಮುಚ್ಚಲಾಗಿದೆ. ಸಂಪರ್ಕ ಮಾಧ್ಯಮಗಳನ್ನು ಸ್ಥಗಿತಗೊಳಿಸಲಾಗಿದೆ. ಈ ರೀತಿ ಬಲವಂತದ ವಾತಾವರಣದಲ್ಲಿ ಏಕಮುಖ ತೀರ್ಮಾನಗಳನ್ನು ಹೇರುವ ಪ್ರಯತ್ನ ಇಡೀ ದೇಶಕ್ಕೆ ಕಳವಳಕಾರಿಯಾಗಿದೆ. ಸರಕಾರವು ತನ್ನ ಏಕಮುಖ ತೀರ್ಮಾನಗಳನ್ನು ಮತ್ತು ಕಾರ್ಯಾಚರಣೆಗಳನ್ನು ಹಿಂಪಡೆಯಬೇಕು ಮತ್ತು ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸಬೇಕೆಂದು ನಾನು ವಿನಂತಿಸುತ್ತೇನೆ. ಅದೇ ರೀತಿ ನಾಯಕರನ್ನು ಬಂಧಮುಕ್ತಗೊಳಿಸಬೇಕು. ಜನಸಾಮಾನ್ಯರ ಚಲನ-ವಲನ ಹಾಗೂ ಸಂಪರ್ಕ ಮಾಧ್ಯಮಗಳ ಮೇಲೆ ಹೇರಿದ ನಿರ್ಬಂಧಗಳನ್ನು ಸಡಿಲಿಸಬೇಕು ಮತ್ತು ಭಯ-ಭೀತಿಯ ವಾತಾವರಣವನ್ನು ಕೊ ನೆಗೊಳಿಸಬೇಕು. ಜಮಾಅತ್‍ನ ನಿಲುವು ಹಿಂದಿನಿಂದಲೇ, ಜಮ್ಮು-ಕಾಶ್ಮೀರದ ಸಮಸ್ಯೆಗಳನ್ನು ಅಲ್ಲಿನ ಜನಸಾಮಾನ್ಯರು ಮತ್ತು ಜನನಾಯಕ ರೊಂದಿಗೆ ಸಮಾಲೋಚಿಸಿಯೇ ತೀರ್ಮಾನಿಸ ಬೇಕೆಂದಾಗಿದೆ.

ಪ್ರಶ್ನೆ: NRCಯ ಕುರಿತು ಜನಸಾಮಾನ್ಯರಲ್ಲಿ ಬಹಳ ಕಳವಳ ಕಂಡು ಬರುತ್ತಿದೆ. ಈ ಕುರಿತು ತಮ್ಮ ಮಾರ್ಗದರ್ಶನವೇನು?

ಉತ್ತರ: ಸರಕಾರವು ಇಡೀ ದೇಶದಲ್ಲಿ ಇದನ್ನು ಜಾರಿಗೊಳಿಸುವ ಯೋಜನೆ ಹಾಕಿಕೊಂಡಿದೆ. ಇದು ಸಂಪೂರ್ಣ ತಪ್ಪು. ಅನಗತ್ಯ ಮತ್ತು ಸಮಸ್ಯೆಗಳನ್ನುಂಟು ಮಾಡುವ ಕ್ರಮವಾಗಿದೆ. ಅಸ್ಸಾಮ್‍ನಲ್ಲಿ ಅದರಿಂದುಂಟಾದ ಪರಿಣಾಮಕ್ಕೆ ಎಲ್ಲೆಡೆಯಿಂದ ಖಂಡನೆ ವ್ಯಕ್ತ ವಾಗಿದೆ. ಸರಕಾರವು ಬುದ್ಧಿವಂತಿಕೆಯಿಂದ ತನ್ನ ಈ ಸಂಕಲ್ಪವನ್ನು ಕೈಬಿಡುವುದೆಂದು ನಿರೀಕ್ಷಿಸಬಹುದು. ಮುಸಲ್ಮಾ ನರೂ ಪ್ರತಿಯೊಬ್ಬ ನಾಗರಿಕರೂ ಪೂರ್ವ ರಕ್ಷಣೆಗಾಗಿ ತಮ್ಮ ದಾಖಲೆಗಳನ್ನು ಸರಿ ಪಡಿಸಿಡಬೇಕು. ಬುದ್ಧಿವಂತಿಕೆಯು ಇದರಲ್ಲೇ ಇದೆ.

ಪ್ರಶ್ನೆ: ಗುಂಪು ಹಲ್ಲೆಯ ಪರಿಹಾರವೇನು?

ಉತ್ತರ: ಈ 21ನೇ ಶತಮಾನದಲ್ಲಿ ಧರ್ಮ ಮತ್ತು ಆಧ್ಯಾತ್ಮಿಕತೆಗೆ ಹೆಸರಾದ ನಮ್ಮ ದೇಶದಲ್ಲಿ ಗುಂಪುಹತ್ಯೆಯ ಪ್ರಕರಣಗಳು ನಡೆಯುತ್ತಲೇ ಇರುವುದು ಬಹಳ ಬೇಸರದ ಸಂಗತಿ. ಪ್ರಾಣಿಗಳನ್ನು ನಾಚಿಸುವ ಈ ಕೃತ್ಯವು ಇಡೀ ದೇಶಕ್ಕೆ ಯೋಚಿಸ ತಕ್ಕ ವಿಷಯ. ಹಿಂದುತ್ವದ ಕುರುಡು ಆವೇಶವು ಮಾನವೀಯತೆಯನ್ನು ಹೇಗೆ ದಿವಾಳಿಯಾಗಿಸಿದೆಯೆಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ಇದರ ಸರಿಯಾದ ಉತ್ತರವೇನೆಂದರೆ ಇಸ್ಲಾಮ್ ಮತ್ತು ಮುಸಲ್ಮಾನರನ್ನು ಭಯಾನಕವಾಗಿ ಚಿತ್ರೀಕರಿಸಿದ್ದನ್ನು ಇಸ್ಲಾಮಿನ ಸರಿಯಾದ ಚಿತ್ರವನ್ನು ನಮ್ಮ ಮಾತು-ಕೃತಿಗಳ ಮೂಲಕ ಪ್ರದರ್ಶಿಸುವುದೇ ಆಗಿದೆ. ಈ ಸವಾಲನ್ನು ಒಂದು ಅವಕಾಶವಾಗಿ ಪರಿವರ್ತಿಸ ಬೇಕಾಗಿದೆ. ಕಾನೂನು ಕ್ರಮ, ಅಧಿಕಾರಿಗಳ ಗಮನಕ್ಕೆ ತರುವುದು, ಮೀಡಿಯಾವನ್ನು ಸಕಾರಾತ್ಮಕವಾಗಿ ಬಳಸುವುದು, ಜನ ಜಾಗೃತಿ ಮೂಡಿಸುವುದು, ನಮ್ಮ ರಕ್ಷಣೆಗಾಗಿ ಅಗತ್ಯದ ಕಾನೂನು ಕ್ರಮಗಳನ್ನು ಕೈಗೊಳ್ಳುವುದು ಮತ್ತು ಧೈರ್ಯ-ಸ್ಥೈರ್ಯದೊಂದಿಗೆ ದಿಟ್ಟತನವನ್ನು ಪ್ರದರ್ಶಿಸುವ ಅಗತ್ಯವಿದೆ.

ಪ್ರಶ್ನೆ: ಸಮುದಾಯದ ಉಲೆಮಾ ಮತ್ತು ದಾರ್ಶನಿಕರಿಗೆ ತಮ್ಮ ಸಂದೇಶವೇನು?

ಉತ್ತರ: ಇಂದಿನ ಪರಿಸ್ಥಿತಿಯಲ್ಲಿ ಈ ವರ್ಗದ ಹೊಣೆಗಾರಿಕೆ ಬಹಳ ಹೆಚ್ಚಿದೆ. ನಮ್ಮ ಮಾಮೂಲಿ ಕೆಲಸಗಳು ಮತ್ತು ಸೀಮಿತ ಚಟುವಟಿಕೆಗಳ ಹೊರತಾಗಿ ಉನ್ನತ ಯೋಚನೆ, ಉತ್ಕøಷ್ಟ ಚಾರಿತ್ರ್ಯವಂತರಾಗಬೇಕಾಗಿದೆ. ನಾವು ಕುರ್‍ಆನಿನ ತತ್ವಗಳ ಮೇಲೆ ಇಸ್ಲಾಮೀ ಐಕ್ಯವನ್ನು ಸ್ಥಾಪಿಸಬೇಕಾಗಿದೆ. ಖೈರೆ ಉಮ್ಮತ್(ಉತ್ತಮ ಸಮುದಾಯ)ನ ಉನ್ನತ ಉದ್ದೇಶ ಮತ್ತು ಕರ್ತವ್ಯಗಳತ್ತ ಗಮನಸೆಳೆಯಬೇಕಾಗಿದೆ. ಸಮಾನ ಸಮಸ್ಯೆಗಳಿಗೆ ಕನಿಷ್ಠ ಸಮಾನ ಕಾರ್ಯಕ್ರಮ ರೂಪಿಸಬೇಕಾಗಿದೆ. ಸಮುದಾಯದ ಯುವ ಜನತೆಯನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸಬೇಕಗಿದೆ. ದೇಶ ಬಾಂಧವರು ಮತ್ತಿತರ ಧರ್ಮ ಜನಾಂಗದವರೊಡನೆ dialogue ಮತ್ತು ಒಟ್ಟಾಗಿ ಹೋರಾಟ ನಡೆಸುವ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಸರಿಯಾದ ನಾಯಕತ್ವ ಬೆಳೆಸಬೇಕಾಗಿದೆ. ಪ್ರಾಮಾಣಿಕವಾದ ಪ್ರಬಲ ಪರಿಶ್ರಮಕ್ಕೆ ನಾಂದಿ ಹಾಡಬೇಕಗಿದೆ. ವಿಶಾಲ ದೃಷ್ಟಿ, ಉನ್ನತ ಸಂಕಲ್ಪ ಮತ್ತು ಅಲ್ಲಾಹನ ಭರವಸೆಯನ್ನು ಕೈಬಿಡಬಾರದು. ಕುರ್‍ಆನ್-ಸುನ್ನತ್‍ನಲ್ಲೇ ಭವಿಷ್ಯ ದಾರಿ ತೆರೆಯಲ್ಪಡುವುದು ಉಲೆಮಾಗಳು ಮತ್ತು ದಾರ್ಶನಿಕರು ಈ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುವರೆಂದು ನಾವು ನಿರೀಕ್ಷಿಸುತ್ತೇವೆ.

ಪ್ರಶ್ನೆ: ಯುವಜನತೆಗೆ ತಮ್ಮ ಸಂದೇಶ?

ಉತ್ತರ: ಈ ದೇಶದಲ್ಲಿ ಯುವಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಮುಸ್ಲಿಮ್ ಯುವಕರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಅವರನ್ನು ಉನ್ನತ ಉದ್ದೇಶ ಮತ್ತು ಸರಿಯಾದ ಮಾರ್ಗದಲ್ಲಿ ನಡೆಸಿದರೆ ದೇಶ ಮತ್ತು ಸಮುದಾಯದ ಭವಿಷ್ಯ ಉಜ್ವಲವಾಗುವುದು. ಇಸ್ಲಾಮಿನಲ್ಲಿ ಮಾತ್ರ ಸಮುದಾಯ ಮತ್ತು ಮಾನವಕುಲದ ಉಜ್ವಲ್ ಭವಿಷ್ಯವಿದೆ. ಇದನ್ನು ಅವರಿಗೆ ಮನವರಿಕೆ ಮಾಡಬೇಕಾ ಗಿದೆ. ಎಲ್ಲ ರಂಗಗಳಲ್ಲೂ ಅವರನ್ನು ಮುನ್ನಡೆಸಬೇಕಾಗಿದೆ. ಪ್ರತಿರೋಧ ಮತ್ತು ಕ್ರಿಯೆಗೆ ಪ್ರತಿಕ್ರಿಯೆಯ ಬದಲು ರಚನಾತ್ಮಕವಾದ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಬೇಕು. ಗಣನೀಯ ಸಂಖ್ಯೆ ಯಲ್ಲಿ ಅವರನ್ನು ಸಂಘಟಿಸಿದರೆ ನಮ್ಮ ಕೆಲಸ ಸುಲಭವಾಗಬಹುದು.

ಪ್ರಶ್ನೆ: ಜಮಾಅತ್ ಬಾಂಧವರಿಗೆ ತಮ್ಮ ಸಂದೇಶವೇನು?

ಉತ್ತರ: ಇಸ್ಲಾಮೀ ಆಂದೋಲನದೊಂದಿಗೆ ನಾವು ಸಂಬಂಧ ಹೊಂದಿರುವುದು ನಮ್ಮ ಸೌಭಾಗ್ಯವಾಗಿದೆ. ನಾವು ಅದನ್ನು ಗೌರವಿಸಬೇಕು. ಸರಿಯಾದ ದಿಕ್ಕಿನಲ್ಲಿ ನಮ್ಮ ಕಾರ್ಯವನ್ನು ಮುನ್ನಡೆಸಬೇಕು. ಧೋರಣೆ ಮತ್ತು ಕಾರ್ಯಕ್ರಮ ಹಾಗೂ ಸಂಘಟನೆಯ ಪುನರ್ ಘಟನೆಯ ಕೆಲಸ ಆಗಿದೆ. ಔಪಚಾರಿಕವಾಗಿ ಕೆಲಸ ಮಾಡಿದರೆ ಸಾಲದು, ತ್ಯಾಗ ಬಲಿದಾನಗಳ ಮೂಲಕ, ದೇವ ಪ್ರೀತಿಯ ಮೂಲಕ ಪೂರ್ಣ ತನ್ನಯತೆಯೊಂದಿಗೆ ಕೆಲಸ ಮಾಡಬೇಕಾಗಿದೆ. ಪರಿಸ್ಥಿತಿಯ ಸಂಕೀರ್ಣತೆಯ ಪ್ರಜ್ಞೆಯಿದ್ದರೆ ಇದನ್ನೆಲ್ಲ ಮಾಡಬೇಕಾಗಿದೆ. ಇತರ ಚಟುವಟಿಕೆಗಳ ಮಧ್ಯೆ ಉದ್ದೇಶವನ್ನು ಮರೆಯಬಾರದು. ಐತಿಹಾಸಿಕ ತಿರುವಿನಲ್ಲಿ ನಾವು ಐತಿಹಾಸಿಕ ಪಾತ್ರವಹಿಸಬೇಕಾಗಿದೆ.