ಜಲ್ಲಿ ಕಟ್ಟಿಗೆ ಐಪಿಎಲ್ ಟಚ್: ಮಧುರೆಯಲ್ಲಿ ಅಂತಾರಾಷ್ಟ್ರೀಯ ಸ್ಟೇಡಿಯಂ

0
101

ಸನ್ಮಾರ್ಗ ವಾರ್ತೆ

ಚೆನ್ನೈ, ಜ.25: ತಮಿಳ್ನಾಡಿನ ಪರಂಪರಾಗತ ಜಾನುವಾರು ನಿಯಂತ್ರಿಸುವ ಮನೋರಂಜನೆಯ ಕ್ರೀಢೆ ಜಲ್ಲಿ ಕಟ್ಟುಗೆ ಅಂತಾರಾಷ್ಟ್ರೀಯ ಟಚ್ ನೀಡಲು ಸೂಕ್ತವಾದ ಸ್ಟೇಡಿಯಂ ಮಧುರೆಯಲ್ಲಿ ತೆರೆಯಲಾಗಿದೆ. ಕ್ರಿಕೆಟ್‍ನಲ್ಲಿ ಜನಪ್ರಿಯತೆ ಗಳಿಸಿದ ಐಪಿಎಲ್ ಮಾದರಿಯಲ್ಲಿ ಜಲ್ಲಿ ಕಟ್ಟು ಸ್ಪರ್ಧೆ ಕೂಡ ಇರಲಿದೆ. ತಮಿಳ್ನಾಡು ಸರಕಾರವೇ ಇದಕ್ಕೆ ಪ್ರಯತ್ನ ಆರಂಭಿಸಿದೆ. ಕ್ರೀಢಾ ಸಚಿವ ಉದಯನಿಧಿ ಸ್ಟಾಲಿನ್ ನೇತೃತ್ವದಲ್ಲಿ ಜಿಲ್ಲಾಡಳಿತ , ಜಿಲ್ಲಾ ಕ್ರೀಢೆ ಇಲಾಖೆ ಈ ಕುರಿತು ಆರಂಭಿಕ ಚರ್ಚೆ ನಡೆಸಿದೆ.

ಸ್ಪೈನ್‍ನ ಜಾನುವಾರು ಕಾಳಗ ಸ್ಟೇಡಿಯಂ ಹೋಲುವ ರೀತಿಯಲ್ಲಿ 62 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಾಣಗೊಂಡಿದ್ದು 5000 ಜನರು ಕೂತು ಕೊಳ್ಳಬಹುದಾದ ಸ್ಟೇಡಿಯಂ ಬುಧವಾರ ಮುಖ್ಯಮಂತ್ರಿ ಸ್ಟಾಲಿನ್ ಉದ್ಘಾಟಿಸಿದರು. ಪರಂಪರಾಗತ ಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆಯ ವೇಳೆ ನಡೆಯಿತು. ಉದ್ಘಾಟನೆಯ ನಂತರ 500 ಹೋರಿಗಳು, 300 ವೀರರ ಸ್ಪರ್ಧೆ ನಡೆಯಿತು. ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಸ್ಪರ್ಧೆ ನೋಡಲು ಆಗಮಿಸಿದ್ದರು.

75,000 ಚದರ ಅಡಿಗೂ ಹೆಚ್ಚು ವಿಸ್ತಾರದ ಸ್ಟೇಡಿಯಂನಲ್ಲಿ ಜಲ್ಲಿಕಟ್ಟಿನ ಇತಿಹಾಸ ವಿವರಿಸುವ ಮ್ಯೂಸಿಯಂ ,ಲೈಬ್ರರಿ, ಪ್ರದರ್ಶನ ಹಾಲ್‍ಗಳು ವಿಶ್ರಾಂತಿ ಕೋಣೆಗಳು, ಕಚೇರಿ ಕೋಣೆಗಳು, ಮೆಡಿಕಲ್ ಸೆಂಟರ್ ಇದೆ.

ಕಾರ್ಪೊರೇಟ್ ಫಂಡಿಂಗ್ ಉಪಯೋಗಿಸಿ ಜಲ್ಲಿ ಕಟ್ಟು ಸ್ಪರ್ಧೆಗಳು ಈಗಾಗಲೇ ತಮಿಳ್ನಾಡಿನಲ್ಲಿ ಇದೆ. ಚಿನ್ನದ ನಾಣ್ಯಗಳು, ಕಾರುಗಳು, ಬೈಕ್‍ಗಳು ಬಹುಮಾನ ಕೊಡಲಾಗುತ್ತದೆ. ಜಲ್ಲಿ ಕಟ್ಟು ಪ್ರೀಮಿಯರ್ ಲೀಗ್ ಜೆಪಿಎಲ್ ನಡೆಯುತ್ತಿದೆ. ಅದರ ಸುಧಾರಿತ ರೂಪ ಅಲಂಗನಲ್ಲೂರಿನಲ್ಲಿ ಆರಂಭವಾಗುತ್ತಿದೆ. ಇದೇ ವೇಳೆ ಹೋರಿಗಳೊಂದಿಗೆ ಕ್ರೌರ್ಯ ಎಸಗಲಾಗುತ್ತಿದೆ ಎಂದು ಪ್ರಾಣಿಗಳ ಹಕ್ಕು ಸಂಘಟನೆಗಳು ತಮಿಳ್ನಾಡಿನಲ್ಲಿ ಸಮಾಂತರವಾಗಿ ಪ್ರತಿಭಟನೆ ನಡೆಸುತ್ತಿದೆ.