ಇರಾನ್ ಪರ ಬೇಹುಗಾರಿಕೆ: ಇಸ್ರೇಲ್ ನ ಮಾಜಿ ಸಚಿವರಿಗೆ 11 ವರ್ಷಗಳ ಶಿಕ್ಷೆ

0
599

ಕನ್ನಡಕ್ಕೆ: ಆಯಿಷತುಲ್ ಅಫೀಫಾ

ಇಸ್ರೇಲ್ ನ ಮಾಜಿ ಸಚಿವ 11 ವರ್ಷದ ಜೈಲು ಶಿಕ್ಷೆಗೆ ಒಳಪಟ್ಟಿದ್ದಾರೆ. ಇರಾನ್ ಪರವಾದ ಬೇಹುಗಾರಿಕೆಗಾಗಿ ಈ ಶಿಕ್ಷೆ ವಿಧಿಸಲಾಗಿದೆ. ಕಳೆದ ತಿಂಗಳು ಆರೋಪಗಳನ್ನು ಒಪ್ಪಿಕೊಂಡ ನಂತರ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಗೊನೆನ್ ಸೆಗೆವ್ ಅನ್ನುವ ಈ ಮಾಜಿ ಸಚಿವರು ಇಸ್ರೇಲ್ ಗೆ ಹಾನಿ ಮಾಡುವ ಉದ್ದೇಶದಿಂದ ಶತ್ರು ದೇಶಕ್ಕೆ ಮಾಹಿತಿಗಳನ್ನು ಸಾಗಿಸಿರುವುದನ್ನು ಒಪ್ಪಿಕೊಂಡ ನಂತರ ನ್ಯಾಯಾಧೀಶರು ಶಿಕ್ಷೆಯನ್ನು ಜಾರಿಗೊಳಿಸಿದರು ಎಂದು ನ್ಯಾಯವಾದಿ ಗುಯುಲಾ ಕೋಹೆನ್ ಜೆರುಸಲೆಮ್ ನ್ಯಾಯಾಲಯದ ಹೊರಗೆ ಪತ್ರಕರ್ತರಿಗೆ ಖಾತ್ರಿಪಡಿಸಿದರು.

ಸೆಗೆವ್, 1995 ರಿಂದ 1996 ರವರೆಗೆ ಇಂಧನ ಸಚಿವರಾಜು ಕಾರ್ಯ ನಿರವಹಿಸಿದ್ದರು. ಜೂನ್ ನಲ್ಲಿ ಅವರ ಮೇಲೆ ದೋಷಾರೋಪಣೆ ಮಾಡಲಾಗಿತ್ತು. ಅವರು ನೈಜೀರಿಯಾದಲ್ಲಿ ವಾಸಿಸುತ್ತಿರುವಾಗ ಇರಾನಿನ ಗುಪ್ತಚರ ವಿಭಾಗವು ಅವರನ್ನು ತನ್ನ ಬೇಹುಗಾರನಾಗಿ ನೇಮಕಗೊಳಿಸಿರುವುದಾಗಿ ಷಿನ್ ಬೆಟ್ ಆಂತರಿಕ ಭದ್ರತಾ ಸೇವೆಯು ಹೇಳಿದೆ.

2012 ರಲ್ಲಿ ನೈಜೀರಿಯಾದಲ್ಲಿರುವ ಇರಾನಿನ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಸೆಗೆವ್ ಸಂಪರ್ಕ ಸಾಧಿಸಿದ್ದರು ಮತ್ತು ಇರಾನ್ ಗೆ ಎರಡು ಬಾರಿ ಭೇಟಿ ನೀಡಿದ್ದರು ,ಎಂಬುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ ಎಂದು ಶಿನ್ ಬೆಟ್ ಹೇಳಿದೆ.

ಸೆಗೆವ್ ಅವರನ್ನು ಇಕ್ವಡೋರಿನ ಗಿನಿಯಾದಿಂದ ವಶಪಡಿಸಿಕೊಳ್ಳಲಾಗಿತ್ತು. ಮೇ ತಿಂಗಳಲ್ಲಿ ಬಂಧಿತರಾಗಿದ್ದ ಅವರು ಇಸ್ರೇಲ್ ನ ಇಂಧನ ಮಾರುಕಟ್ಟೆ ಮತ್ತು ಭದ್ರತಾ ತಾಣಗಳ ಬಗ್ಗೆ ಇರಾನ್ ಗೆ ಮಾಹಿತಿಯನ್ನು ಒದಗಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

ಗಾಜಾ ಪಟ್ಟಿ ಮತ್ತು ಲೆಬನಾನ್ ನಲ್ಲಿ ಸಶಸ್ತ್ರ ಗುಂಪುಗಳನ್ನು ಬೆಂಬಲಿಸುವ ಇರಾನ್ ನೊಂದಿಗೆ ಇಸ್ರೇಲ್ ದೀರ್ಘ ಕಾಲದಿಂದ ತೆರೆಮರೆಯ ಯುದ್ಧದಲ್ಲಿ ತೊಡಗಿಕೊಂಡಿದೆ.

ಮೂಲ: ಅಲ್ ಜಝೀರಾ ಮತ್ತು ಇತರ ಸುದ್ದಿ ಸಂಸ್ಥೆಗಳು