ಟೆಹ್ರಾನ್,ಮೇ 13: ಹಿಂದೆಂದೂ ಇಲ್ಲದ ರೀತಿಯಲ್ಲಿ ಭಯಾನಕವಾದ ಒತ್ತಡವನ್ನು ಹೊಸ ದಿಗ್ಬಂಧನದಿಂದಾಗಿ ಎದುರಿಸಬೇಕಾಗಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದರು. ಅಮೆರಿಕದ ಆರ್ಥಿಕ ದಿಗ್ಬಂಧನ 190-88ರ ಇರಾಕ್ ಯುದ್ಧಕ್ಕಿಂತ ಭಯಾನಕವಾಗಿ ದೇಶದ ಆರ್ಥಿಕ ಸ್ಥಿತಿಗೆ ಹಾನಿ ಮಾಡಲಿದೆ ಎಂದು ರೂಹಾನಿ ಹೇಳಿದರು. ಇರಾನ್ಗೆ ಎಚ್ಚರಿಕೆಯಾಗಿ ಗಲ್ಫ್ ವಲಯದಲ್ಲಿ ಯುದ್ಧ ಹಡಗು ಮತ್ತು ಬಾಂಬುಗಳನ್ನು ಅಮೆರಿಕ ವಿನ್ಯಾಸಗೊಳಿಸಿದ ಬೆನ್ನಿಗೆ ರೂಹಾನಿ ಪ್ರತಿಕ್ರಿಯೆ ನೀಡಿದರು.
ಭಾರೀ ಆಂತರಿಕ ಒತ್ತಡ ಎದುರಿಸುತ್ತಿರುವ ರೂಹಾನಿ, ಸಮಸ್ಯೆಯಿಂದ ಹೊರ ಬರಲು ರಾಜಕೀಯ ಒಗ್ಗಟ್ಟಿಗೆ ಕರೆ ನೀಡಿದರು. ಇರಾಕ್ ಯುದ್ಧ ಕಾಲದಲ್ಲಿ ನಮ್ಮ ಬ್ಯಾಂಕ್ಗಳಿಗೆ ಯಾವುದೇ ಸಮಸ್ಯೆ ಇರಲಿಲ್ಲ. ತೈಲ ಮಾರಾಟ, ರಫ್ತು, ಆಮದುಗಳಿಗೆ ಅಡಚಣೆಗಳಿರಲಿಲ್ಲ. ಆಯುಧ ವ್ಯವಹಾರಕ್ಕೆ ಮಾತ್ರ ನಿಯಂತ್ರಣಗಳಿತ್ತು ಎಂದು ಅವರು ಹೇಳಿದರು. ಅಮೆರಿಕ ಮನಶಾಸ್ತ್ರೀಯ ಯುದ್ಧ ಆರಂಭಿಸಿದೆ ಎಂದು ರವಿವಾರ ರೆವ್ಯೂಲಶನರಿ ಗಾರ್ಡ್ ಕಮಾಂಡರ್ ಮೇಜರ್ ಜನರಲ್ ಹುಸೈನ್ ಸಲಾಮಿ ಹೇಳಿದ್ದಾರೆ. ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆಗಿಳಿದರೇ ಅಮೆರಿಕ ತಲೆಗೆ ಹೊಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.ಗಲ್ಫ್ ವಲಯದಲ್ಲಿ ಅಮೆರಿಕದ ಸೇನೆ ಉಪಸ್ಥಿತಿ ಬೆದರಿಕೆಯಾದರೂ ಈಗಿನದ್ದು ದೊಡ್ಡ ಅವಕಾಶವಾಗಿದೆ ಎಂದು ರೆವ್ಯುಲೇಶನರಿ ಗಾರ್ಡ್ ವಾಯುಸೇನೆ ವಿಭಾಗ ಮುಖ್ಯಸ್ಥ ಅಮೀರಲಿ ಹಾಜಿ ಸಾದಿಹ್ ಹೇಳಿದ್ದಾರೆ.












