ವಿದೇಶಿ ದೇಣಿಗೆಗಳಿಗೆ ಕಡಿವಾಣ ಹಾಕಲು ಜರ್ಮನಿಯಲ್ಲಿ ಮಸೀದಿ ತೆರಿಗೆ!

0
391

ಬರ್ಲಿನ್,ಮೇ 13: ಇಸ್ಲಾಮಿಕ್ ಸಂಸ್ಥೆಗಳಿಗೆ ವಿದೇಶಿ ದೇಣಿಗೆಗಳನ್ನು ನಿಲ್ಲಿಸುವ ಉದ್ದೇಶದಿಂದ ಜರ್ಮನಿಯಲ್ಲಿ ಮಸೀದಿ ತೆರಿಗೆ ಸಂಗ್ರಹಿಸುವ ಚಿಂತನೆ ಸರಕಾರ ನಡೆಸುತ್ತಿದೆ. ಇದು ಆಲೋಚಿಸಬಹುದಾದ ಒಂದು ಸಾಧ್ಯತೆಯಾಗಿದೆ ಎಂದು ಪ್ರತಿಪಕ್ಷದ ಪ್ರಶ್ನೆಗೆ ಸರಕಾರ ಉತ್ತರಿಸಿದೆ. ದೇಶದ 16 ರಾಜ್ಯಗಳು ಇದಕ್ಕೆ ತಾತ್ವಿಕ ಬೆಂಬಲವನ್ನು ನೀಡಿವೆ. ಸುಮಾರು 50 ಲಕ್ಷ ಮುಸ್ಲಿಮರು ಜರ್ಮನಿಯಲ್ಲಿದ್ದು ಇವರಲ್ಲಿ ಟರ್ಕಿಯವರು ಹೆಚ್ಚಿನ ಜನಸಂಖ್ಯೆಯಲ್ಲಿದ್ದಾರೆ. ಉಳಿದವರು ಅರಬ್ ದೇಶದಿಂದ ವಲಸೆ ಬಂದವರು. ಟರ್ಕಿಶ್-ಇಸ್ಲಾಮಿಕ್ ಯುನಿಯನ್ ಆಫ್ ದ ಇನ್ಸ್ಟಿಟ್ಯೂಟ್ ಫಾರ್ ರಿಲೀಜಿಯನ್‍ನ ನೇತೃತ್ವದಲ್ಲಿ 900 ಮಸೀದಿಗಳು ಜರ್ಮನಿಯಲ್ಲಿವೆ. ಈ ಮಸೀದಿಯ ಇಮಾಮರಿಗೆ ಟರ್ಕಿ ಸಂಬಳ ನೀಡುತ್ತಿದೆ. ಎರಡು ವರ್ಷದ ಹಿಂದೆ ಟರ್ಕಿ, ಜರ್ಮನಿಯ ನಡುವೆ ಸಂಬಂಧ ಹದಗೆಟ್ಟಾಗ ಹಲವಾರು ನಾಯಕರು ಈ ವಿಷಯವನ್ನು ಎತ್ತಿದ್ದರು. ಇಂತಹ ವಿದೇಶ ದೇಣಿಗೆ ಸಮಸ್ಯೆಯನ್ನು ದೂರವಿಡಬೇಕೆಂದು ಕ್ರೈಸ್ತ ಚರ್ಚ್ ಟ್ಯಾಕ್ಸ್‌ನ ಮಾದರಿಯಲ್ಲಿ ಮಸೀದಿಗಳ ಮೇಲೆ ತೆರಿಗೆ ಆರಂಭಿಸಬೇಕೆಂದು ಅಲ್ಲಿ ಈಗ ಚಿಂತನೆ ನಡೆಯುತ್ತಿದೆ.