ಗಲ್ಫ್ ವಲಯದಲ್ಲಿ ಹಸ್ತಕ್ಷೇಪ: ಇಸ್ರೇಲಿಗೆ ಮುನ್ನೆಚ್ಚರಿಕೆ ನೀಡಿದ ಇರಾನ್

0
2480

ಸನ್ಮಾರ್ಗ ವಾರ್ತೆ

ಟೆಹ್ರಾನ್,ಡಿ.30: ಗಲ್ಫ್ ವಲಯದಲ್ಲಿ ಅನಿಯಂತ್ರಿಕ ಹಸ್ತಕ್ಷೇಪ ನಡೆಸುತ್ತಿರುವ ಇಸ್ರೇಲಿಗೆ ಇರಾನ್ ಮುನ್ನೆಚ್ಚರಿಕೆ ನೀಡಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅಧಿಕಾರ ಕಳೆದುಕೊಳ್ಳುವ ವೇಳೆ ಗಲ್ಫ್ ಕ್ಷೇತ್ರದ ಕೆಂಪು ಗೆರೆ ದಾಟಬೇಡಿ. ಅಂತಹ ಸೈನಿಕ ಸಾಹಸಕ್ಕೆ ಮುಂದಾದರೆ ಇರಾನ್ ಬಲವಾಗಿ ಪ್ರತಿರೋಧಿಸಲಿದೆ ಎಂದು ವಿದೇಶ ಸಚಿವಾಲಯದ ವಕ್ತಾರ ಸಈದ್ ಖಾತಿಬ್‍ಝಾದಿ ಹೇಳಿದರು. ಜನುವರಿ 20ಕ್ಕೆ ಅಮೆರಿಕದ ಹೊಸ ಅಧ್ಯಕ್ಷ ಜೊ ಬೈಡನ್‍ರಿಗೆ ಅಧಿಕಾರ ಹಸ್ತಾಂತರ ನಡೆಯಲಿದೆ. ಟ್ರಂಪ್ ಅಧಿಕಾರದಿಂದ ಹೊರಗಡೆ ನಡೆಯಲಿದ್ದಾರೆ.

ಗಲ್ಫ್‌ಗೆ ಹೊಸ ಅಣು ಅಂತರ್‍ವಾಹಿನ ಹಡಗು ವಿನ್ಯಾಸ ಗೊಳಿಸಲಾಗುವುದು ಎಂದು ಈಗಾಗಲೇ ಅಮೆರಿಕದ ನೌಕಾಪಡೆ ಹೇಳಿಕೆ ನೀಡಿತ್ತು. ಇರಾನ್ ಅನ್ನು ಗುರಿಯಾಗಿಟ್ಟು ಈ ಕಾರ್ಯಕ್ಕಿಳಿದಿದೆ ಎನ್ನಲಾಗಿದ್ದು ಹಡಗು ಸುಯೇಜ್ ಕಾಲುವೆ ದಾಟಿದೆ ಎಂದು ಇಸ್ರೇಲಿನ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಇದನ್ನು ಅಮೆರಿಕ ಅಧಿಕೃತವಾಗಿ ಹೇಳಿಲ್ಲ. ಈ ಸಂದರ್ಭದಲ್ಲಿ ಇರಾನ್ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ರಂಗಪ್ರವೇಶಿಸಿದೆ.