ನಾನು ಆ ಹೆಸರುಗಳನ್ನು ಬಹಿರಂಗಪಡಿಸಿದರೆ ಬಿಜೆಪಿ ತೊಂದರೆಗೆ ಸಿಲುಕಬಹುದು- ಸಂಜಯ್ ರಾವತ್

0
597

ಆರ್ಥಿಕ ಭ್ರಷ್ಟಾಚಾರಗೈದ 120 ಬಿಜೆಪಿ ನಾಯಕರ ಪಟ್ಟಿ ತನ್ನ ಕೈಯಲ್ಲಿದೆ- ಸಂಜಯ್ ರಾವತ್

ಸನ್ಮಾರ್ಗ ವಾರ್ತೆ

ಮುಂಬೈ,ಡಿ.30: ಆರ್ಥಿಕ ಭ್ರಷ್ಟಾಚಾರಗೈದ 120 ಬಿಜೆಪಿ ನಾಯಕರ ಪಟ್ಟಿ ತನ್ನ ಕೈಯಲ್ಲಿದೆ ಎಂದು ಶಿವಸೇನೆ ನಾಯಕ ಸಂಜರ್ ರಾವತ್ ಹೇಳಿದರು. ತಾನು ಬಾಯಿ ತೆರೆದರೆ ಬಿಜೆಪಿ ತೊಂದರೆಗೆ ಸಿಲುಕಬಹುದೆಂದು ಅವರು ತನ್ನ ಪತ್ನಿಗೆ ಇಡಿ ಮುಂದೆ ಹಾಜಾರಗುವ ನೋಟಿಸು ಪುನಃ ಬಂದ ನಂತರ ರಾವತ್ ದೃಢವಾದ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್(ಪಿಎಂಸಿ) ವ್ಯವಹಾರಗಳಿಗೆ ಸಂಬಂಧಿಸಿ ರಾವತ್ ಪತ್ನಿ ವರ್ಷಾ ರಾವತ್‍ರಿಗೆ ಇಡಿ ನೋಟಿಸು ನೀಡಿದೆ.

ರಾಜಕೀಯ ವಿರೋಧಿಗಳನ್ನು ಅಣಗಿಸಲು ಇಡಿಯನ್ನು ಆಯುಧ ಮಾಡಲಾಗುತ್ತಿದೆ ಎಂದು ಅವರು ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ. ಶಿವಸೇನೆಯ ಪ್ರಮುಖ ನಾಯಕರಾಗಿರುವ ರಾವತ್ ಕುಟುಂಬ ತನಿಖೆಯಿಂದ ಯಾಕೆ ತಪ್ಪಿಸಿಕೊಳ್ಳುತ್ತಿದೆ ಎಂದು ಬಿಜೆಪಿ ನಾಯಕ ಕೀರೀತ್ ಸೋಮಯ್ಯ ಆರೋಪಿಸಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ರಾವತ್ ನನ್ನ ಕುಟುಂಬದ ಹೆಸರನ್ನು ಗೂಢಾಲೋಚನೆಯಿಂದ ಪಿಎಂಸಿ, ಎಚ್‍ಡಿಐಎಲ್ ವಿವಾದಕ್ಕೆ ಎಳೆದು ತರಲಾಗಿದೆ. ಆರೋಪ ಸಾಬೀತು ಪಡಿಸಿ ಎಂದು ಅವರಿಗೆ ಸವಾಲು ಹಾಕುತ್ತೇನೆ. ಅಲ್ಲದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ. ಕೆಲವು ಬಿಜೆಪಿ ನಾಯಕರು ಪಿಎಂಸಿ ಮತ್ತು ಎಚ್‍ಡಿಐಎಲ್ ಕುರಿತು ಅರಿತುಕೊಂಡರು? ಅವರ ಕೆಲವು ನಾಯಕರು ಇಡಿ ಕಚೇರಿಯ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ನಮ್ಮ ಕುಟುಂಬವನ್ನು ಬೇಟೆಯಾಡಲು ಅವರು ಇಡಿಯನ್ನು ಉಪಯೋಗಿಸುತ್ತಿದ್ದಾರೆ. ನಾನು ಬಾಯಿ ತೆರೆದರೆ ಅದು ಬಿಜೆಪಿಗೆ ಸಮಸ್ಯೆಯಾಗಬಹುದು. ವಂಚನೆ ನಡೆಸಿದ ಬಿಜೆಪಿ ನಾಯಕರ ಹೆಸರುಗಳು ಹೇಳಿದಾಗ ನನ್ನ ನಾಯಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದರೆ ಅವರ ಕುಟುಂಬಗಳನ್ನು ಇದಕ್ಕೆ ಎಳೆದು ತರಬೇಡಿ ಎಂದು ಹೇಳಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದೆ. ಬಿಜೆಪಿಗೆ ಅದೇ ನಾಣ್ಯದಲ್ಲಿ ಉತ್ತರ ನೀಡುವೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಾವತ್ ಹೇಳಿದರು.

ಡೆವಲಪ್ಮೆಂಟ್ ಕಂಪೆನಿ ಎಚ್‍ಡಿಐಎಲ್ ಬಿಜೆಪಿಗೆ 20 ಕೋಟಿ ಕೊಟ್ಟಿದೆ ಎಂದು ಅವರು ಆರೋಪಿಸಿದರು. ಮಹಾರಾಷ್ಟ್ರದ ಒಂದು ಬಂದರಿನ ಅಭಿವೃದ್ಧಿಗಾಗಿ ಬಿಜೆಪಿ ಎಂಪಿ, ಎಚ್‍ಡಿಐ ಎಲ್‍ನೊಂದಿಗೆ ಪಾಲುದಾರ ಆಗಿದ್ದಾರೆ ಎಂದು ನನಗೆ ಸೂಚನೆ ಲಭಿಸಿದೆ ಎಂದು ರಾವತ್ ಹೇಳಿದರು. ಅದನ್ನು ಯಾಕೆ ತನಿಖೆ ಮಾಡಿಲ್ಲ. ನನ್ನ ಪತ್ನಿ ಅವರ ಗೆಳೆತಿಯಿಂದ ಒಂದು ಸಾಲ ತೆಗೆದುಕೊಂಡು ಹತ್ತು ವರ್ಷ ಆದ ಬಳಿಕ ಇಡಿ ಈಗ ಎಚ್ಚರಗೊಂಡಿದೆ. ಈ ಸಾಲದ ವಿಷಯ ನನ್ನ ಚುನಾವಣಾ ಅಫಿದಾವಿತ್‍ನಲ್ಲಿಯೂ ಸೂಚಿಸಿದ್ದೇನೆ ಎಂದು ರಾವತ್ ಹೇಳಿದರು. ಮಹಾರಾಷ್ಟ್ರದ ಸರಕಾರವನ್ನು ಉರುಳಿಸಲು ಗೂಢ ಸಂಚು ಗೆಲ್ಲಲಿಲ್ಲ ಈ ಕೋಪದಿಂದ ಪಾರ್ಟಿಯ ಹಿರಿಯ ನಾಯಕರನ್ನು ಇಡಿ ಕಳುಹಿಸಿ ಬೇಟೆಯಾಡಲಾಗುತ್ತಿದೆ ಎಂದು ರಾವತ್ ಆರೋಪಿಸಿದರು.