ಇರಾಕ್: ಪ್ರಮುಖ ಮಹಿಳಾ ಸಾಮಾಜಿಕ ಕಾರ್ಯಕರ್ತೆ ರೆಹಾಮ್ ಯಾಕೂಬ್ ಹತ್ಯೆ

0
747

ಸನ್ಮಾರ್ಗ ವಾರ್ತೆ

ಬಾಗ್ದಾದ್,ಆ.21: ದಕ್ಷಿಣ ಇರಾಕಿನ ಬಸ್ರಾ ನಗರದಲ್ಲಿ ಅಜ್ಞಾತ ವ್ಯಕ್ತಿಗಳು ಗುಂಡು ಹಾರಿಸಿ ಪ್ರಮುಖ ಮಹಿಳಾ ಸಾಮಾಜಿಕ ಕಾರ್ಯಕರ್ತೆ ರೆಹಾಮ್ ಯಾಕೂಬ್‍ರನ್ನು ಕೊಲೆ ಮಾಡಿದ್ದಾರೆ. ಅಜ್ಞಾತರು ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದು, ಕಾರಿನಲ್ಲಿ ಕುಳಿತಿದ್ದ ರೆಹಾಮ್‌ರವರ ಮೇಲೆ ಅಜ್ಞಾತರು ಗುಂಡಿನ ಸುರಿಮಳೆಗೈದಿದ್ದಾರೆಂದು ವರದಿಯಾಗಿದೆ.

ರೆಹಾಮ್ ಯಾಕೂಬ್‍ರ ಜೊತೆಗಿದ್ದ ಮೂವರು ಗಾಯಗೊಂಡಿದ್ದಾರೆ. ನಂತರ ಇವರಲ್ಲೊಬ್ಬರು ಮೃತಪಟ್ಟರು. ರೆಹಾಮ್ ಯಾಕೂಬ್ ವೈದ್ಯೆಯಾಗಿದ್ದರು ಮತ್ತು ಸಾಮಾಜಿಕ ಕಾರ್ಯಕರ್ತೆಯೂ ಆಗಿದ್ದರು. ಸ್ಥಳೀಯ ಪ್ರತಿಭಟನಾ ಸಂಘಟನೆಗಳಲ್ಲಿ 2018ರಿಂದ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.